ಯಾದಗಿರಿ : ಜಿಲ್ಲೆಯ (ಶಹಾಪುರ). ಅಧ್ಯಾತ್ಮಿಕತೆಯಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ, ಭಗವಂತನ ಅನುಗ್ರಹ ದಿಂದ ಜೀವನ ಪಾವನವಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಆಚರಣೆಗಳು ಆಚರಿಸುವುದರಿಂದ ದೇವರು ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಸಾರ್ಥಕ ಜೀವನ ನಡೆಸಲು ಅನುಗ್ರಹಿಸುತ್ತಾನೆ ಎಂದು ಸರ್ವೋತ್ತಮಾಚಾರ್ಯ ಜೋಶಿ ಕೆಂಭಾವಿ ತಿಳಿಸಿದರು.
ನಗರದ ಹಳೆಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಧಿಕ ಮಾಸದ ಸಮಾರೋಪ ಮಂಗಳ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ವಿಶೇಷ ಪ್ರವಚನ ನೀಡಿದ ಅವರು, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಮಾಣಿಕ ಪ್ರಯತ್ನ ಅತ್ತೆಗತ್ತೆ.ಭಕ್ತಿಯನ್ನು ಬೆಳೆಸಿಕೊಂಡವರಿಗೆ ಬೆಟ್ಟದಂತೆ ಬಂದ ಕಷ್ಟಗಳು ಮಂಜಿನAತೆ ಕರಗಿ ಹೋಗುತ್ತವೆ, ಶ್ರೀ ಹರಿಯು ಸಕಲ ಜೀವ ಜಡಗಳಲ್ಲಿ ಸರ್ವದಾ ಇರುವವನು, ಪ್ರತಿಯೊಬ್ಬರು ಲೌಕಿಕ ಫಲಾಪೇಕ್ಷೆ ಮಾಡದೆ, ಜ್ಞಾನ,ಭಕ್ತಿ, ವೈರಾಗ್ಯಗಳನ್ನು ಬೆಳೆಸಿಕೊಳ್ಳಬೇಕು, ಪುಣ್ಯ ಪ್ರದ ಸಂಪಾದಿಸುವ ಅಧಿಕ ಮಾಸದಲ್ಲಿ ಭಗವಂತನ ಸ್ಮರಣೆಯನ್ನು ಮಾಡುವುದರ ಮೂಲಕ, ಲೋಕಕಲ್ಯಾಣದ ಕಾರ್ಯದಲ್ಲಿ ಭಾಗಿಯಾಗಿದ್ದು, ಇದು ಗುರು ಕೃಪೆಗೆ ಸಾಕ್ಷಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ವ್ರತ ಕಥಾ ಪೂಜಾ ಕಾರ್ಯಕ್ರಮ ಜರುಗಿದವು, ಹಳೆಪೇಟೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದವರೆಗೆ ಭಜನಾ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದಲ್ಲಿ ತಿರುಮಲಾಚಾರ್ಯ ಜೋಶಿ ಕೆಂಭಾವಿ, ನರಸಿಂಹಾಚಾರ್ಯ ರೊಟ್ಟಿ, ವಿಠ್ಠÀಲಚಾರ್ಯ ಪ್ರತಿನಿಧಿ, ಕೊನೇರಾಚಾರ್ಯ, ಗುಂಡೇರಾವ ದೇಶಪಾಂಡೆ, ರವೀಂದ್ರ ದೇಶಪಾಂಡೆ, ಪಾಂಡುರAಗಚಾರ್ಯ ವಡಿಗೇರಿ ಸೇರಿದಂತೆ ಭಜನಾ ಮಂಡಳಿಯ ವಿಜಯಲಕ್ಷ್ಮಿಜೋಶಿ, ಮಂಜುಳಾ ಕುಲಕರ್ಣಿ, ಸಂಧ್ಯಾ ಬಳಬಟ್ಟಿ, ವೈದೇಹಿ, ವಾಸಂತಿ, ದ್ವಾರಕಾ, ಕಲಾವತಿ, ಗೀತಾಬಾಯಿ, ಮಂದಾಕಿನಿ, ಅರುಣಾ, ಪಂಕಜ, ಕಲಾವತಿ, ರೇಣುಕಾ, ಪದ್ಮಾವತಿ ಸೇರಿದಂತೆ ಇತರರು ಇದ್ದರು.