ಚಂದ್ರನ ಅಂಗಳದಲ್ಲಿ ಭಾರತ. ಸಂಭ್ರಮಾಚರಣೆ ಭಾರತ ದೇಶದ ತಾಕತ್ತು ಜಗತ್ತಿಗೆ ಚಂದ್ರಯಾನದ ಮೂಲಕ ಸಾಬೀತು, ನಾಯಕ್.

ಯಾದಗಿರಿ: (ಶಹಾಪುರ). ಚಂದ್ರಯಾನ-೩ ಯಶಸ್ವಿಯಾದ ಹಿನ್ನೆಲೆ ನಗರದ ಬಸವೇಶ್ವರ ವೃತ್ತದಲ್ಲಿ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂಭ್ರಮ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಗಡಿ ಭದ್ರತಾ ಪಡೆಯ ಯೋಧ ದುರ್ಗಪ್ಪ ನಾಯಕ ಕಠಿಣ ಸವಾಲಿನೊಂದಿಗೆ ಲ್ಯಾಂಡರ್ ವಿಕ್ರಮ್ ನ್ನು ಕ್ಲಿಷ್ಟಕರವಾದ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸುವ ಸಾಹಸಕ್ಕೆ ಕೈ ಹಾಕಿದ ಭಾರತದ ವಿಜ್ಞಾನಿಗಳು ಅದರಲ್ಲಿ ಇಂದು ಯಶಸ್ಸು ಕಂಡಿದ್ದಾರೆ. ಈ ಮೂಲಕ ಇಡೀ ವಿಶ್ವಕ್ಕೆ ಭಾರತದ ವಿಜ್ಞಾನ ತಂತ್ರಜ್ಞಾನದ ತಾಕತ್ತು ಪ್ರದರ್ಶನ ಮಾಡಿದೆ. ಇಸ್ರೋ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಚಂದ್ರಯಾನ — ೩ ಉಡಾವಣೆಯಲ್ಲಿ ನಮ್ಮ ದೇಶದ ಇಸ್ರೋ ವಿಜ್ಞಾನಿಗಳು ಈ ಬಾರಿ ಯಶಸ್ವಿಯಾಗಿದ್ದು, ಚಂದ್ರನ ಮೇಲ್ಮೆöÊ ಮೇಲೆ ಲ್ಯಾಂಡರ್ ವಿಕ್ರಮ್ ನ್ನು ಯಶಸ್ವಿಯಾಗಿ ಲ್ಯಾಂಡ್ ಆಗುವ ಮೂಲಕ ಇಡಿ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದು, ದೇಶದ ಪ್ರಗತಿಯ ಹೆಜ್ಜೆಗೆ ಮೇಲ್ಪಂಕ್ತಿಯಾಗಿದೆ.

೨೦೧೯ ರಲ್ಲಿ ಚಂದ್ರಯಾನ-೨ ವೇಳೆ ಅಂತಿಮ ಹಂತದಲ್ಲಿ ವಿಫಲತೆಯಾದಾಗ ನಮ್ಮ ದೇಶದ ಪ್ರಧಾನಿಗಳು ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದರು. ಸತತ ಪ್ರಯತ್ನವಿರಲಿ ಮುಂದೆ ಸಾಧನೆಗೆ ಸೋಲು ಅಡಿಪಾಯವಾಗಲಿ ಎಂದು ಸಾಂತ್ವನ ನೀಡಿದ್ದರು. ಅದರಂತೆ ಈ ಬಾರಿ ನಮ್ಮ ಎಲ್ಲಾ ವಿಜ್ಞಾನಿಗಳ ಹಗಲು ರಾತ್ರಿ ಶ್ರಮದಿಂದ ಇಂದು ಚಂದ್ರನ ದಕ್ಷಣ ದೃವ ಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಚಂದ್ರಯಾನ — ೩ ಸಾಫ್ಟ್ ಲ್ಯಾಂಡಿAಗ್ ಮಾಡುವ ಮೂಲಕ ಸಾಧನೆ ತೋರಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯುವಕರು ಭಾರತ ಮಾತೆಗೆ ಜಯಕಾರ ಹಾಕಿದರು.

ಈ ಸಂದರ್ಭದಲ್ಲಿ ಕರವೇ ಉಕ ಅಧ್ಯಕ್ಷ ಶರಣು.ಬಿ.ಗದ್ದುಗೆ, ಗುರುಕಾಮ, ಡಾ.ಆನಂದ ಕುಮಾರ್ ಗುತ್ತೇದಾರ, ರಾಜು ಪತ್ತಾರ, ದೇವು ಭಿ.ಗುಡಿ, ರಮೇಶ ನಗುನೂರ, ಪ್ರದೀಪ ಅಣಬಿ, ಮಲ್ಲಿಕಾರ್ಜುನ ಆಲೂರ, ಸಂಗಣ್ಣಗೌಡ ಅನವಾರ, ಮಲ್ಲಿಕಾರ್ಜುನ ಜಾಕಾ, ಅಂಬರೀಶ ಗುತ್ತೇದಾರ, ಮಲ್ಲಿಕಾರ್ಜುನ ನಗನೂರ, ದೇವೇಂದ್ರಪ್ಪ ಕೋನೇರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ