ಶರಣರ ವಚನಗಳು ಇಂದಿಗೂ ಪ್ರಸ್ತುತ: ಪ್ರಶಾಂತ್

ಕ್ರಾಂತಿವಾಣಿ ವಾರ್ತೆ ಸುರಪುರ: ಸಮಾನತೆ ತರುವಲ್ಲಿ ಜಾತ್ಯತೀತ ಸಮಾಜ ಕಟ್ಟುವಲ್ಲಿ ಶರಣರು, ಸಂತರು ಪ್ರಮುಖ ಪ್ರಾತ್ರ ವಹಿಸಿದ್ದಾರೆ ಎಂದು ದೇವರ ಗೋನಾಲ ಸಿಆರ್ ಪಿ  ಪ್ರಶಾಂತ್ ಅಕ್ಕಸಾಲಿಗರ ಹೇಳಿದರು.                                  ‌‌‌‌                  ನಗರದ ಕಬಾಡಗೇರಿಯಾ ನಿಷ್ಠಿ ಕಡಲಪ್ಪನವರ ವಿರಕ್ತಮಠದಲ್ಲಿ ನಡೆದ “ಶ್ರಾವಣ ಶ್ರವಣ” ಶಿವಾನುಭವ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನೆಲೆಯೂರಿದ್ದ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ವಚನಗಳ ರಚನೆಯ ಮೂಲಕ ಶ್ರಮಿಸಿದ್ದಾರೆ ಎಂದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ
ಪ್ರಭುಲಿಂಗ ಮಹಾ ಸ್ವಾಮಿಗಳು,  ಮೂಢನಂಬಿಕೆಯನ್ನು ಬದಿಗೊತ್ತಿ ವೈಚಾರಿಕತೆಯನ್ನು ತುಂಬಲು ಶರಣರ ವಚನಗಳು ದಾರಿ ದೀಪವಾಗಿವೆ ಎಂದು ನುಡಿದರು. ಲಿಂಗ, ವರ್ಣಭೇದ ಇಲ್ಲದ ಸಮಾಜದ ನಿರ್ಮಾಣಕ್ಕೆ ಮುಂದಾದರು. ತಮ್ಮ ವಿಚಾರಧಾರೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ಆದರ್ಶಗಳು ಸಮಾಜಕ್ಕೆ ಮಾದರಿ. ವಚನಕಾರರು ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು ಎಂದರು.                                                       ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ  ಶರಣಪ್ಪ ಗುಮ್ಮಾರ ಮಾತನಾಡಿ, ಶರಣರ ಕಾಯಕ ತತ್ವ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದು ಕಾಯಕದ ಮೂಲಕವೇ ಸಮ ಸಮಾಜ ಕಟ್ಟಿದರು’ ಎಂದರು. ಸಂಗೀತ ಕಲಾವಿದರಾದ ಮೋಹನರಾವ್ ಮಾಳದಕರ, ರಮೇಶ ಕುಲಕರ್ಣಿ, ಉಮೇಶ್ ಯಾದವ್ ಸುರೇಶ್ ಅಂಬುರೆ, ಪ್ರಾಣೇಶರಾವ್ ಕುಲಕರ್ಣಿ, ಗೋಪಾಲ್ ಗುಳೇದ, ಶ್ರೀನಿವಾಸ್ ದಾಯಪುಲೆ, ಮಹಾಂತೇಶ ಶಹಪುರಕ ಸೂಗಮ್ಮ ಕೊಂಗಂಡಿ, ಶರಣಬಸವ ಕೊಂಗಂಡಿ,ಗುರುನಾಥರಡ್ಡಿ ಶೀಲವಂತ ಮತ್ತು ತಂಡದವರು ಸಂಗೀತ ಸೇವೆಯನ್ನು ನೀಡಿದರು.

ಪ್ರಮುಖರಾದ ತಾ.ಕ.ಸಾ.ಪ. ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ, ವೀರೇಶ್ ನಿಷ್ಟಿ ದೇಶಮುಖ, ಬಸವರಾಜ್ ಗೋಗಿ, ಸುಭಾಷ್ ಹೂಗಾರ್, ಶಿವಶರಣಬಸವ ಪುರಾಣಿಕ ಮಠ ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪನವರ ಮಠ. ಸೋಮಶೇಖರ ಅಕ್ಕಿ, ಮಂಜುಳಾ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಚ್. ವೈ. ರಾಠೋಡ ನಿರೂಪಿಸಿದರು.    ವೆಂಕಟೇಶ ಪಾಟೀಲ್ ಸ್ವಾಗತಿಸಿದರು. ಪ್ರಾಣೇಶ್ ಕುಲಕರ್ಣಿ ಮಂಗಳ ಗೀತೆ ಹಾಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ