ಎಚ್.ರಾಠೋಡ *ಗಜ಼ಲ್*
ಮಗಲಾಯಿ ಮಂದಿ ಮಾತು ಮುತ್ತು ಪೋಣಿಸಿದಂಗ ಇರುತ್ತಿದ್ದವು.
ಬಗಲಾಗ ಕುಂತ ಕೇಳಿದರ ಮನಸು ಖುಷಿ ಆಗುವಂಗ
ಇರುತ್ತಿದ್ದವು.
ನೀತಿ ಕಥೆ ಹೇಳಿ ಬದುಕಿಗೆ ಸುಂದರ ರೂಪ ಕೊಡುವ
ಕಲೆ ತಿಳಿದಿತ್ತು.
ಭೀತಿ ಆದಾಗ ಸ್ಪೂರ್ತಿಯ ನುಡಿ ಧೈರ್ಯ ಬರುವಂಗ ಇರುತ್ತಿದ್ದವು.
ದಾರಿ ತಪ್ಪುವವರಿಗೆ ತಿದ್ದಿ ತೀಡಿ ಬುದ್ದಿ ಹೇಳುವ ಗತ್ತು
ಕರಗತವಾಗಿತ್ತು.
ಸರಿಯಾವುದು ಅಂತ ಸಾರಿದರ ಕುಂತ ಕೇಳುವಂಗ
ಇರುತ್ತಿದ್ದವು.
ಬದುಕು ಹಳಿತಪ್ಪದ ತೂಕದ ಪಯಣ ಯಾವತ್ತೂ
ಮಾರ್ಗದರ್ಶಿ.
ಎದಕು ಅಂಜದ ಅನುಭಾವವು ನಿಂತು ನೋಡುವಂಗ ಇರುತ್ತಿದ್ದವು.
ಕಾಲ ಬದಲಾದಂಗ ಮಾನವ ಬದಲಾಗಕ ಹತ್ಯಾನ
ಹೇಮು.
ತಾಲ ಮೇಲಿನ ಮಾತು ಆಡಿದರ ಕುಂತ ಕೇಳುವಂಗ
ಇರುತ್ತಿದ್ದವು.
🔶🔶🌹🔶🔶
🔶🔶🌹🔶🔶
✍️….(ಅಂಜನಾಸುತ)
ಶ್ರೀ ಹೆಚ್ ವಾಯ್ ರಾಠೋಡ ಶಿಕ್ಷಕರು
ಸುರಪುರ ಜಿಲ್ಲೆ ಯಾದಗಿರಿ.