ಕ್ರಾಂತಿವಾಣಿ ವಾರ್ತೆ ಯಾದಗಿರಿ: ತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುರಸಗುಂಡಿಗಿ ಗ್ರಾಮದ ಬಳಿಯ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನ ಭೀಮಾನದಿಯ ತಟದಲ್ಲಿ ಭೀಮಾರತಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕಾಶಿ ಮಾದರಿಯಲ್ಲಿ ಗಂಗಾ ಆರತಿಯ ಕಾರ್ಯಕ್ರಮದ ಪ್ರಥಮ ಜಗದ್ಗುರು ಭಗವಾನ ವೇದವ್ಯಾಸ ಬ್ರಹ್ಮಶ್ರೀ ಪೀಠದ ಸಂಸ್ಥಾಪಕ ರಾಜುಗುರುಸ್ವಾಮೀಜಿ ಮಾತನಾಡಿ, ಹಿಂದುಗಳ ಪವಿತ್ರ ಕಾಶಿಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಗಂಗಾರತಿ ಮಾದರಿಯಲ್ಲಿ ನಮ್ಮ ಭೀಮಾನದಿಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭೀಮಾರತಿ ಕಾರ್ಯಕ್ರಮ ಇದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಈ ಭಾಗದಲ್ಲಿ ಧಾರ್ಮಿಕ ಸಭೆಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಬೆಳಗಿನಿAದಲೇ ಅಭಿಷೇಕ, ಪೂಜೆ, ಮಹಾಮಂಗಳಾರತಿ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಮಠದಲ್ಲಿ ಆಯುರ್ವೇದ ಜ್ಞಾನ ಪದ್ಧತಿ ಕಾರ್ಯಾಗಾರ ಮತ್ತು ಉಚಿತ ಚಿಕಿತ್ಸೆ ಹಾಗೂ ಎಲ್ಲಿಯೂ ವಾಸಿಯಾಗದಂತ ಕಾಯಿಲೆಗಳಿಗೆ ಆಧ್ಯಾತ್ಮಿಕ ಶಕ್ತಿಯಿಂದ ಕಾಯಿಲೆ ವಾಸಿ ಮಾಡುವ ಶಿಬಿರವು ಜರುಗಿತು.
ಕಲಬುರಗಿ ಸ್ನೇಹಗಂಗಾ ವಾಹಿನಿ ಸಂಸ್ಥಾಪಕ ಎಲ್.ಬಿ. ಹಿಟ್ಟಿನ್, ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಜಮಾದಾರ, ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಡಾ. ಟಿ.ಡಿ. ರಾಜು, ಜೆಸ್ಕಾಂ ಎಇಇ ಸಂಜೀವಕುಮಾರ ಬೋಸ್ಗೆಕರ್ ಮಾತನಾಡಿದರು. ಚಂದ್ರಶೇಖರ, ಭಾಗಪ್ಪ ರಸ್ತಾಪುರ, ಮಲ್ಲಿಕಾರ್ಜುನ, ಶರಣಪ್ಪ ಚಿಗರಿ, ಮರಿಯಪ್ಪ, ರಮೇಶ, ಉದ್ಯಮಿ ಚಂದ್ರಶೇಖರ ಕೊಟೆಗಾರ, ಗುಜರಾತ್ ಉದ್ಯಮಿ ಹಣಮಂತ ಅರಕೇರಾ ಕೆ., ಶಹಾಪುರ ಜೆಸ್ಕಾಂ ರಮೇಶ ರಾಠೋಡ, ಮರಲಿಂಗಪ್ಪ, ಚಂದ್ರಶೇಖರ, ದೇವು ಪೂಜಾರಿ ನಾಲ್ವಾರ, ಹಣಮಂತ, ಬಸವರಾಜ, ಶೇಖಪ್ಪ ಬಡಿಗೇರ ಇತರರಿದ್ದರು. ಶಿವರುದ್ರಗೌಡ ಬಿರಾದಾರ್ ಮದ್ದರಿಕಿ ಸ್ವಾಗತಿಸಿದರು. ದೇವು ನಿರೂಪಿಸಿದರು. ಅನಿಲ್ ಮುದ್ನಾಳ ವಂದಿಸಿದರು..