ಕ್ರಾಂತಿವಾಣಿ ವಾರ್ತೆ ಸುರಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕದ ಸಭೆ ಜಿಲ್ಲೆಯ ಸುರಪೂರ ತಾಲ್ಲೂಕಿನ ಕೆಂಭಾವಿಯ ಆನಂದ ಬೌದ್ಧವಿಹಾರ ದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಶರಣು ಎಸ್. ನಾಟೇಕರ್ ವಹಿಸಿ ಮಾತನಾಡಿ ಅನ್ಯಾಯ ಹಾಗೂ ಅನೀತಿಯ ವಿರುದ್ಧ ದಸಂಸ ಕಾರ್ಯಕರ್ತರು ನಿರಂತರ ಹೋರಾಟ ನಡೆಸಬೇಕೆಂದು ಸಲಹೆ ನೀಡಿದರು. ಯಾವುದೇ ರೀತಿಯ ಅನ್ಯಾಯವನ್ನು ವಿರೋಧಿಸುವ ಮೂಲ ಉದ್ದೇಶ ಹೊಂದಿರುವ ದಸಂಸ ತತ್ವ ಸಿದ್ದಾಂತಗಳನ್ನು ಅರಿತು ಅಳವಡಿಸಿಕೊಂಡು ಮುಂದೆ ಸಾಗಬೇಕೆಂದು ಅವರು ತಿಳಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂಧಿಗೇರಿ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಕೈಜೋಡಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಕುಂಠಿತಗೊAಡಿದ್ದ ಸಂಘಟನೆ ಶರಣು ನಾಟೇಕರ್ ಅವರ ನೇತೃತ್ವದಲ್ಲಿ ಬಲಿಷ್ಟವಾಗುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿ ಮಟ್ಟದ ಕಾರ್ಯಕರ್ತರು ಅವರ ಕೈಬಲಪಡಿಸಬೇಕೆಂದು ಹೇಳಿದರು.
ಇದೆ ಸಂದರ್ಭದಲ್ಲಿ ಕೆಂಭಾವಿ ಹೋಬಳಿ, ಹಾಗೂ ನಗರ ಘಟಕಗಳಿಗೆ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಹೋಬಳಿ ಘಟಕಕ್ಕೆ: ಬಸವರಾಜ ಬಿ. ಹೇಮನೂರ (ಸಂಚಾಲಕ), ರವಿ ಎ. ಮಳ್ಳಳ್ಳಿಕರ್, ಯಲ್ಲಪ್ಪ ಆರ್. ಭಾವಿಮನಿ, ನೆಹರು ಮಾಲಹಳ್ಳಿಕರ್, ಮಲ್ಲಿಕಾರ್ಜುನ ಬಸರಿಗಿಡ, ಜಟ್ಟೆಪ್ಪ ಮುಷ್ಠಳ್ಳಿ (ಖಜಾಂಚಿ)
ನಗರ ಘಟಕಕ್ಕೆ: ರಫೀಕ್ ಖುರೇಷಿ (ಸಂಚಾಲಕ), ಚಂದಾಸಾಬ ಖುರೇಷಿ, ಸಾಬೀರ್ ಖರೇಶಿ, ದೇವಪ್ಪ ಯಡ್ರಾಮಿ, ನಿಂಗಪ್ಪ ಕಟ್ಟಿಮನಿ ಕಿರದಳ್ಳಿ (ಸಂಘಟನಾ ಸಂಚಾಲಕರು) ನೇಮಕ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಶರಣಪ್ಪ ವಾಡಿ, ಭೀಮರಾಯ ಕಾಗಿ, ದಲಿತ ಮುಖಂಡರಾದ ಪರಶುರಾಮ ಬಳಬಟ್ಟಿ, ಆನಂದ ಬೌದ್ಧವಿಹಾರ ಟ್ರಸ್ಟ್ ಅಧ್ಯಕ್ಷ ಲಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಆರ್.ಎಸ್. ಮಾಲಗತ್ತಿ, ಬಸವಣ್ಣಪ್ಪ ಮಾಲಹಳ್ಳಿಕರ್, ಶರಣು ಹಾಲಳ್ಳಿ, ಭೀಮರಾಯ ಮಾಲಗತ್ತಿ ಇತರರಿದ್ದರು.