ಆಟೋ ಚಾಲಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲು ಒತ್ತಾಯಿಸಿ ಮನವಿ

ಕ್ರಾಂತಿವಾಣಿ ವಾರ್ತೆ ಯಾದಗಿರಿ: ಸರ್ಕಾರದ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು ಇದನ್ನು ಭರಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಚಾಲಕರ ಪರಿಷತ್ತು ಬಸವೇಶ್ವರ ಗಂಜ್ ಆಟೋ ಚಾಲಕರ ಸಂಘ ಒತ್ತಾಯಿಸಿದೆ.

ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ ಆಟೋ ಚಾಲಕರು ಶಕ್ತಿ ಯೋಜನೆಯಿಂದಾಗಿ ಆಟೋ ಚಾಲಕರ ಬದುಕು ಜೀವನ ನಡೆಸುವುದು ಕಷ್ಟಕರವಾಗಿದೆ. ಮತ್ತು ತಮ್ಮನ್ನು ಅವಲಂಬಿತ ಕುಟುಂಬ ಸಾಕುವುದು ಸಲುಹುವುದು ತೀರ ಕಷ್ಟಕರವಾಗಿದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.
ಮೊದಲೇ ಸಂಕಷ್ಟದ ಜೀವನ ನಡಸುತ್ತಿದ್ದ ಆಟೋ ಚಾಲಕರಿಗೆ ಈ ಯೋಜನೆ ಜಾರಿಯಾದ ಮೇಲೆ ಶೇ. ೭೦ ರಷ್ಟು ಹಾನಿ ಸಂಭವಿಸಿದ್ದು, ಪ್ರಮುಖವಾಗಿ ಮಹಿಳೆಯರೇ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರಾಗಿದ್ದರು. ಈಗ ಅವರೆಲ್ಲ ಫ್ರೀ ಬಸ್ ನಲ್ಲಿ ಸಂಚರಿಸುತ್ತಿರುವುದರಿಂದ ಆಟೋಗಳಿಗೆ ಪ್ರಯಾಣಿಕರು ಬಾರದೇ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ.

ಮಾತಿಕ ಕಂತುಗಳು, ಎಫ್.ಸಿ. ವಿಮೆ ತುಂಬಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಸೋಲ ಮಾಡಿಕೊಂಡು ಜೀವನ ನಡೆಸುವಂತಾಗಿದೆ. ಇದರಿಂದ ನಮ್ಮ ಜೀವನ ನಡೆಸುವುದೇ ಕಷ್ಟವಾಗಿದೆ. ಇನ್ನು ಮಕ್ಕಳು ಮರಿಗಳು, ಶಿಕ್ಷಣ ಆರೋಗ್ಯ ಸಮಸ್ಯೆ ಕೇಳುವವರು ದಿಕ್ಕಿಲ್ಲದಂತಾಗಿದೆ ತಮ್ಮ ಅಳಲು ತೋಡಿಕೊಂಡರು.

ಆದ್ದರಿಂದ ಬಡ ಆಟೋ ಚಾಲಕರ ಹಿತದೃಷ್ಟಿಯಿಂದ ನಮ್ಮ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷಲಕ್ಷ್ಮ ಚವ್ಹಾಣ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾದ್ಯಕ್ಷ ಶಿವಶರಣಪ್ಪ ಕುಂಬಾರ, ಹಣಮಯ್ಯ ಕಲಾಲ್, ಸಾಬಣ್ಣ ತಾಂಡೂರಕರ್, ಈಶಪ್ಪ ದೇವದುರ್ಗ, ಗೋಪಾಲ ರಾಠೋಡ, ಹಣಮಂತು, ಮರಗಪ್ಪ, ಮೌನೇಶ, ಭಾಗಪ್ಪ ರಾಗೇರ್, ಮಲ್ಲಯ್ಯ ಮುಷ್ಟೂರು, ಅಂಬೋಜಿರಾವ್, ಆಶಪ್ಪ., ಬಸವರಾಜ ಅವಂಟಿಗೇರಿ, ಬಸವರಾಜಪ್ಪ, ಮಹೇಶ ನಾಟೆಕರ್ ಸೇರಿದಂತೆ ಅನೇಕ ಆಟೋ ಚಾಲಕರು ಇದ್ದರು.


ಂಣಣಚಿಛಿhmeಟಿಣ?
? Sಛಿಚಿಟಿಟಿeಜ bಥಿ ಉmಚಿiಟ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ