ಕ್ರಾಂತಿವಾಣಿ ವಾರ್ತೆ ಯಾದಗಿರಿ: ನಗರದ ಶ್ರೀ ಆದಿ ಬಸವಣ್ಣ ದೇವಸ್ಥಾನ ಸೇವಾ ಸಮಿತಿಯಿಂದ ಶ್ರಾವಣ ಮಾಸದ ಪ್ರತಿ ಸೋಮವಾರ ಪ್ರವಚನ, ಪುರಾಣ, ಭಜನೆ ಕಾರ್ಯಕ್ರಮ ಸಮಾರೋಪ ಸಂಭ್ರಮದಿಂದ ನೆರವೇರಿತು.
ಸುಮಾರು ೮೦೦ ವರ್ಷಗಳಷ್ಟು ಹಳೆಯದಾದ ಆದಿ ಬಸವಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಕೊನೆಯ ಸೋಮವಾರ ಮಹಾಮಂಗಳ ಕಾರ್ಯಕ್ರಮಗಳು ಜರುಗಿದವು.
ಬೆಳಗ್ಗೆ ಬಸವಣ್ಣ ದೇವರಿಗೆ ಅಭಿಷೇಕ, ಪೂಜೆ, ಮಂಗಳ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಮಹಾಪ್ರಸಾದ ವಿನಿಯೋಗವೂ ಜರುಗಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಭೀಮಪ್ಪ ಕಾಗಿ ಅದ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು. ಸೈದಪ್ಪ ಸುಂಗಲ್ಕರ್ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡರು.