ಮೇಷ್ಟು ಗಜಲ್: ಬಟ್ಟೆ … ಚಿಟ್ಟೆ…

*ಗಜ಼ಲ್*

ಇಷ್ಟು ಹಿಂಡವುದು ಬೇಡ ಕಣೆ ನಾನು ಬಟ್ಟೆ ಅಲ್ಲ
ಅಷ್ಟು ಕುಣಿಸುವುದು ಬೇಡ ಕಣೆ ನಾನು ಚಿಟ್ಟೆ ಅಲ್ಲ

ಹಳೆಯ ಪಾತ್ರೆಯನು ತೊಳೆಯುವ ಖಯಾಲಿಯೆ
ಬಳೆ ಏರಿಸಿ ಎನ್ನ ತಿಕ್ಕಬೇಡ ಕಣೆ ನಾನು ತಟ್ಟೆ ಅಲ್ಲ

ಚೊಕ್ಕ ಚಿನ್ನವನ್ನು ಪುನಃ ಪರೀಕ್ಷೆಯು ಅವಮಾನ.
ಸಿಕ್ಕಲ್ಲಿ ಗುಮಾನಿಬೇಡ ಕಣೆ ನಾನು ಕೊಟ್ಟೆ ಅಲ್ಲ

ಇಚ್ಚೆಯನರಿತು ವರ್ತಿಸುವ ನಂಬಿಕೆಯಿತ್ತು ಎನಗೆ
ಸ್ವೇಚ್ಚ ಎನಬೇಡ ಕಣೆ ನಾನು ಲೋಳ ಲೊಟ್ಟೆ ಅಲ್ಲ

ವಿಶ್ವಾಸಕ್ಕೆ ಇನ್ನೊಂದು ಹೆಸರೇ ಈ ಹೇಮು ಕಣೆ
ಅಸ್ವಾದಯಂದೆನಬೇಡ ಕಣೆ ನಾನು ಸೊಟ್ಟೆ ಅಲ್ಲ.

🔷🔷

✍️… ಶ್ರೀ ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ ಜಿ ಯಾದಗಿರ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ