ಕ್ರಾಂತಿವಾಣಿ ವಾರ್ತೆ ಸುರಪುರ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ಯಾದಗಿರಿ, ತಾಪಂ ಸುರಪುರ ಹಾಗೂ ಗ್ರಾಪಂ ಖಾನಪುರ ಎಸ್ ಎಚ್ ಸಹಯೋಗದಲ್ಲಿ ಶುಕ್ರವಾರ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡ *ಸ್ವಚ್ಛತೆಯೇ ಸೇವೆ ಪಾಕ್ಷಿಕ ಆಂದೋಲನ* ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ನಿಂಗಪ್ಪ ಮಲ್ಲಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸ್ವಚ್ಛತಾ ಹಿ ಸೇವಾ ವಿಶೇಷ ಆಂದೋಲನದ ಘೋಷಣೆಯಡಿ ಕಸಮುಕ್ತ/ತ್ಯಾಜ್ಯ ಮುಕ್ತ ಭಾರತವೆಂದು ಘೋಷಿಸಲಾಗಿದೆ. ಖಾನಾಪುರ ಎಸ್ ಎಚ್ ಗ್ರಾಪಂನಲ್ಲಿ ಗ ಸೆ.15ರಿಂದ ಅಕ್ಟೋಬರ್ 02ರವರೆಗೆ ಸ್ವಚ್ಛತೆಗಾಗಿ ಸ್ವಯಂ ಪ್ರೇರಿತವಾಗಿ ವಿವಿಧ ಶ್ರಮದಾನ ಹಮ್ಮಿಕೊಂಡ ಗ್ರಾಮೀಣ ನೈರ್ಮಲ್ಯ ಕಾಪಾಡಲಾಹುವುದು ಎಂದರು.
ಗ್ರಾಪಂ ಸದಸ್ಯ ದ್ಯಾವಪ್ಪ ಕವಡಿಮಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆ ಇದ್ದರೆ ಪ್ರತಿಯೊಬ್ಬರು ಆರೋಗ್ಯವಾಗಿರುತ್ತಾರೆ. ಸ್ವಚ್ಛತೆಯೇ ಗ್ರಾಮಗಳ ಅಭಿವೃದ್ಧಿಯನ್ನು ಸೂಚಿಸುತ್ತದೆ. ಗ್ರಾಮ ಪಂಚಾಯಿತಿ ಒಂದರಿಂದಲೇ ಸ್ವಚ್ಛತೆ ಅಸಾಧ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಸ್ವಚ್ಛತೆಯನ್ನು ಕೈಗೊಂಡಾಗ ಸ್ವಚ್ಛ ಗ್ರಾಮಗಳಾಗಿ ಹೊರಹೊಮ್ಮಲು ಸಾಧ್ಯ. ಪ್ರತಿಯೊಬ್ಬರು ಸ್ವಚ್ಛತೆ ಕಡೆಗೆ ಗಮನ ನೀಡಬೇಕು. ಆ ಮೂಲಕ ಯಾದಗಿರಿ ಜಿಲ್ಲೆಯಲ್ಲಿಯೇ ಖಾನಾಪುರ ಎಸ್ಎಚ್ ಅನ್ನು ಗ್ರಾಮ ಪಂಚಾಯತಿ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಗ್ರಾಫಂ ಉಪಾಧ್ಯಕ್ಷ ದೇವಮ್ಮ ಪರಸಪ್ಪ, ಸದಸ್ಯರಾದ ಮಲ್ಲಯ್ಯ ಗೌಡ, ಹನುಮಂತಪ್ಪಗೌಡ, ಸಿದ್ದರಾಮಪ್ಪ, ಮೌನುದ್ದೀನ್, ಯಂಕಪ್ಪ, ಶಿವಕುಮಾರ್, ಮಲ್ಲಮ್ಮ, ಕಾರ್ಯದರ್ಶಿ ರಾಜನಗೌಡ, ಬಿಲ್ ಕಲೆಕ್ಟರ್ ಕನಕಪ್ಪ, ಕಂಪ್ಯೂಟರ್ ಆಪರೇಟರ್ ಸಿದ್ದಪ್ಪ ಮಿಟ್ಟಾ, ಜಿಕೆಎಂ ರೇಣುಕಾ, ಗ್ರಂಥಪಾಲಕ ಕೃಷ್ಣ, ಮಾನಪ್ಪ ಇತರರು ಇದ್ದರು.