ಕನ್ನಡ ಪ್ರಭ ವಾರ್ತೆ ಸುರಪುರ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಆಚರಿಸುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯಿಂದ ಆಚರಿಸಬೇಕು. ಯಾರಾದರೂ ಕಾನೂನು ಮೀರಿ ವರ್ತಿಸಿದರೆ ಅಥವಾ ಭಗ್ನಗೊಳಿಸಲು ಯತ್ನಿಸಿದರೆ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿವೈಎಸ್ ಪಿ ಜಾವಿದ್ ಇನಾಮದಾರ್ ತಿಳಿಸಿದರು. ನಗರದ ಪೊಲೀಸ್ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ್ ಚೌತಿ ಮತ್ತು ಈದ್ ಮಿಲಾದ್ ಸಮಾಜದ ಎಲ್ಲ ಸಾಮರ್ಥ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಕೆಲವು ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಕಾನೂನು ಭಂಗ ಮಾಡಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಆಯಾ ಸಮುದಾಯದ ಮುಖಂಡರುಗಳು ಯುವಕರಿಗೆ ತಿಳಿ ಹೇಳುವ ಮೂಲಕ ಶಾಂತಿಯಿಂದ ಈದ್ ಮಿಲಾದ್ ಮತ್ತು ಗಣೇಶ ಚತುರ್ಥಿಯನ್ನು ಆಚರಿಸಬೇಕು. ಸರ್ಕಾರದ ನಿಯಮಾನುಸಾರ ಎಲ್ಲವೂ ನಡೆಯುವಂತೆ ನೋಡಿಕೊಳ್ಳಬೇಕು ಎಂದರು. ಸಿಪಿಐ ಆನಂದ ಒಬ್ಬಡೆ ಮಾತನಾಡಿ ಸಮುದಾಯದಲ್ಲಿನ ಯುವಕರನ್ನು ಗಣನೆಗೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಕಾಪಾಡುವುದು ಎಲ್ಲರ ಕರ್ತವ್ಯ .ಈಗಾಗಲೇ ಎಲ್ಲಾ ಹಳ್ಳಿಗಳಲ್ಲಿ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗಿದೆ. ಸುರಪುರ ತಾಲೂಕಿನಲ್ಲಿ ಒಟ್ಟು 91 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಸೆಪ್ಟೆಂಬರ್ 19 ರಿಂದ ಗಣಪತಿ ಇಟ್ಟ ನಂತರ 5, 7, 9, 11 ನೇ ದಿನಕ್ಕೆ ಎಲ್ಲಾ ಗಣಪತಿಗಳನ್ನು ವಿಸರ್ಜಿಸಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡ ಮಾಡಿಕೊಳ್ಳುವುದು ಸಂಘಟನಕಾರರ ಹೊಣೆಯಾಗಿದೆ. ಗಣಪತಿ ವಿಸರ್ಜನೆಗೆ ಬೇಕಾದ ಪೋಲಿಸ್ ಬಂದ ಬಂದೋಬಸ್ತ್ ಗೆ ಪ್ರಯತ್ನಿಸಲಾಗುವುದು. ಗಣಪತಿ ಪ್ರತಿಷ್ಠಾಪಿಸುವ ಸ್ವಯಂಸೇವಕರು ಅಚಾತುರ್ಯಗಳು ನಡೆಯದಂತೆ ಗಮನವಹಿಸಬೇಕು ಸರ್ಕಾರದ ಸುತ್ತೋಲೆ ನಿಯಮಗಳನ್ನು ಸಂಘಟಕರು ತಪ್ಪದೆ ಪರಿಪಾಲಿಸಬೇಕು ಎಂದು ತಿಳಿಸಿದರು. ಉಪತಹಸಿಲ್ದಾರ್ ಮಲ್ಲು ದಂಡು, ಅಹಮದ್ ಪಠಾಣ್, ಮಲ್ಲಿಕಾರ್ಜುನ ಕ್ರಾಂತಿ, ಶರಣು ನಾಯಕ, ವೆಂಕಟೇಶ್ ಬೇಟೆಗಾರ, ಮಾತನಾಡಿದರು. ಪಿಎಸ್ ಐಗಳಾದ ಸಿದ್ದಣ್ಣ, ಕೃಷ್ಣ ಸುಬೇದಾರ್ , ಹನುಮಂತಪ್ಪ ಸಿದ್ದಾಪುರ, ರಮೇಶ್ ದೊರೆ, ಹುಲುಗಪ್ಪ ಪೂಜಾರಿ, ಸಚಿನ್, ವಜಾಹತ್ ಹುಸೇನ್ , ವಿಷ್ಣು ಗುತ್ತೇದಾರ್, ರಾಮಣ್ಣ ಶೆಳ್ಳಗಿ, ಎಂ. ಪಟೇಲ್, ಮಾಳಪ್ಪ ಕಿರದಳ್ಳಿ ಇತರರು ಇದ್ದರು.