ಮೇಷ್ಟ್ರು ಗಜಲ್: ಗೊಂಬೆಯಲ್ಲ.. ರಂಬೆಯಲ್ಲ..

*ಗಜ಼ಲ್*

ಬಹಳ ಕುಣಿಸಬ್ಯಾಡವ್ವ ನಾನು ಗೊಂಬೆಯಲ್ಲ ತಿಳಿತಾ
ಅಹಮಿನಲಿ ನುಲಿಬ್ಯಾಡವ್ವ ನೀನು ರಂಬೆಯಲ್ಲ ತಿಳಿತಾ

ಈ ಜೀಕ ತನ್ನದೆ ಒಜ್ಜೆ ಹೊರುವ ಮಿತಿಯು ಹೊಂದಿದೆ
ಈ ಜೀವ ತೂಕದಾದವ್ವ ತಿಳಕೊ ರೆಂಬೆಯಲ್ಲ ತಿಳಿತಾ

ಅತಿಯಾದರೆ ಅಮೃತವು ವಿಷ ಹಿರಿಯರ ಅಂಬೋಣ.
ಮಿತಿಯಲ್ಲಿ ನಡೆಯವ್ವ ಚಿವುಟಲು ತುಂಬೆಯಲ್ಲ ತಿಳಿತಾ

ಹೆಗಲಿಗೆ ಹೆಗಲಾಗುವ ಭರವಸೆ ಹುಸಿಯು ಆಗದಿರಲಿ
ಬಗಲಾಗ ಇದ್ದು ತಿವಿಬ್ಯಾಡವ್ವ ನೀ ಜಂಬೆಯಲ್ಲ ತಿಳಿತಾ.

ಸಮರಸದ ಬದುಕು ಏಳೇಳು ಜನುಮಕು ಅಪೇಕ್ಷಿತವು
ಹೇಮುನಲಿ ಪರಾಗರಸಬೇಡವ್ವ ನೀ ದುಂಬೆಯಲ್ಲ ತಿಳಿತಾ

✍️… ಶ್ರೀ ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ ಜಿ ಯಾದಗಿರ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ