ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲಿ: ಶಾಸಕ ವೆಂಕಟಪ್ಪ ನಾಯಕ

ಕ್ರಾಂತಿ ವಾಣಿ ವಾರ್ತೆ ಸುರಪುರ ನಗರದಲ್ಲಿ ನೂನತವಾಗಿ ನಿರ್ಮಿಸಿದ ಡಿ . ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಶನಿವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿನಗರ ಡಿ.ದೇವರಾಜ್ ಅರಸ ಭವನಕ್ಕೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಎಸ್ ಸಿ, ಎಸ್ ಟಿ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.                                                          ಹಿಂದುಳಿದ ವರ್ಗದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿ ಹಿಂದುಳಿದಿದ್ದಾರೆ. ನಮ್ಮನ್ನು ಮತ್ತು ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಕೆಲಸ ಶಿಕ್ಷಣದಿಂದ ಮಾತ್ರ ತೊಲಗಿಸಲು ಸಾಧ್ಯ ಎಂದರು. ಬಾಲಕಿಯರು ಶಿಕ್ಷಣ ಪಡೆಯುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಂದೆತಾಯಂದಿರು ಮತ್ತು ಊರಿಗೆ ಹೆಸರು ತರಬೇಕು ಎಂದು ತಿಳಿಸಿದರು.                         ಬಿಸಿಎಂ ಸಹಾಯಕ ನಿರ್ದೇಶಕ ತಿಪ್ಪಾರಡ್ಡಿ ಮಾಲಿಪಾಟೀಲ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಸುರಪುರದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣವಾದಂತೆ ಹುಣಸಗಿ ತಾಲೂಕಿನಲ್ಲಿ ಈಗ ಕೊಟ್ಟಿರುವ ಜಾಗ ಬಹುದೂರವಿದ್ದು, ಕೆಬಿಜೆನ್ನೆಲ್ ಸ್ಥಳ ಸೂಕ್ತ ವಾಗಿದೆ. ಈಗಾಗಲೇ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸ್ಥಳ ನೀಡುವಂತೆ ಕೆಬಿಜೆನ್ನೆಲ್ ಇಲಾಖೆ ಪತ್ರ ಬರೆದಿದ್ದಾರೆ. ಹುಣಸಗಿಯಲ್ಲೂ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ವಾಗಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಗೌಡ ಪಾಟೀಲ್ ವಜ್ಜಲ್ ಕುಮಾರ್ ಲ್ಯಾಂಡ್ ಆರ್ಮಿ ಎಂ ಡಿ ಧನಂಜಯ ನಿರ್ಮತಿ ಎಂ ಡಿ ಕಿರಣ್ ಕುಮಾರ್ ನಗರಸಭೆ ಸದಸ್ಯರಾದ ಸದಸ್ಯರಾದ ಅಹಮದ್ ಶರೀಫ್, ಸುವರ್ಣ ಎಲಿಗಾರ, ಲಕ್ಷ್ಮೀ ಬಿಲ್ಲವ, ಪ್ರಥಮದರ್ಜೆ ಗುತ್ತಿಗೆದಾರ ಯಂಕೋಬ ಸಾಹುಕಾರ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ