ಕ್ರಾಂತಿವಾಣಿ ವಾರ್ತೆ ಸುರಪುರ: ಕೆಂಭಾವಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವವನ್ನು ಸಂಭ್ರಮದಿಂದಆಚರಿಸಲಾಯಿತು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಜಶೇಖರ ರಾಠೋಡ ಸರ್ದಾರ ವಲ್ಲಭಭಾಯಿ ಪಟೇಲ, ಮಹಾತ್ಮಾ ಗಾಂಧಿಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಬಿಜೆಪಿ ಕಚೇರಿಯಲ್ಲಿ ಯುವ ಕೆಂಭಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂಗಣ್ಣ ತುಂಬಗಿ ಧ್ವಜಾರೋಹಣ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಗಿರೀಶ ಕುಲಕರ್ಣಿ ಧ್ವಜಾರೋಹಣ ಮಾಡಿದರು. ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಮುಖ್ಯಗುರು ರೇವಣಸಿದ್ದಯ್ಯ ಧ್ವಜಾರೋಹಣನೆರವೇರಿಸಿದರು.
ವಾರ್ಡ ನಂ ೨ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಶರಣಪ್ಪ ಬಂಡೆ ಧ್ವಜಾರೋಹಣ ಮಾಡಿದರು. ಶಿವಪ್ಪ ಕಂಬಾರ, ಬಸವಣ್ಣೆಪ್ಪ ಮಾಳಳ್ಳಿಕರ್, ರಮೇಶ ಕೊಡಗಾನೂರ ಸೇರಿದಂತೆ ಇತರರಿದ್ದರು.
ಗೃಹ ರಕ್ಷಕ ದಳದ ಘಟಕದಲ್ಲಿ ಘಟಕಾಧಿಕಾರಿ ಮುರ್ತುಜಾ ಮುಲ್ಲಾ ಚಿಗರಿಹಾಳ ಧ್ವಜಾರೋಹಣ ಮಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ರಫೀಕ ವಡಕೇರಿ, ಶ್ರೀಶೈಲ ಆಲ್ದಾಳ, ಬಸವರಾಜ ತಳವಾರ, ಸುಖಮುನಿ ಬಡಿಗೇರ ಸೇರಿದಂತೆ ಇತರರಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ * ೨ ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ವಲ್ಲಭಬಾಯಿ ಹಾಗೂ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷ ತಿಪ್ಪಣ್ಣ ಯಾಳಗಿ ಧ್ವಜಾರೋಹಣ ನೆರವೇರಿಸಿದರು. ಮಹಿಪಾಲರೆಡ್ಡಿ ಡಿಗ್ಗಾವಿ, ರೆಹಮಾನ ಪಟೇಲ, ರಾಘವೇಂದ್ರ, ರಂಗಪ್ಪ ವಡ್ಡರ, ಶರಣು ಇದ್ದರು.
ಕೆಂಭಾವಿ ವಿವಿಧಡೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ
