ಸುರಪುರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಕ್ರಾಂತಿವಾಣಿ  ವಾರ್ತೆ ಸುರಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜಯಂತ್ಯುತ್ಸವ ನಿಮಿತ್ತ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ತಹಸೀಲ್ದಾರ್ ಕೆ. ವಿಜಯಕುಮಾರ, ವೇದಗಳ ಕಾಲದಿಂದಲೂ ಋಷಿಮುನಿಗಳು ವಿಶ್ವಕರ್ಮರನ್ನು ಪೂಜೆ ಮಾಡಿಕೊಂಡು ಬರುತ್ತಿದ್ದರು. ತಾಂತ್ರಿಕ ಜ್ಞಾನಕ್ಕೆಲ್ಲ ವಿಶ್ವಕರ್ಮರೇ ಸ್ಪೂರ್ತಿ. ಶಿಲ್ಪಕಲೆ, ವಿಗ್ರಹ ಕೆತ್ತನೆ, ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಲು ಪ್ರಾಚೀನ ಕಾಲದಿಂದ ಇಂದಿನ ಆಧುನಿಕ ಜಗತ್ತಿನವರೆಗೆ ವಿಶ್ವಕರ್ಮ ಸಮಾಜ ತನ್ನದೇ ಆದ ಕೊಡುಗೆ ನೀಡಿದೆ. ಕಮ್ಮಾರಿಕೆ, ಬೆಳ್ಳಿ, ಬಂಗಾರ ಆಭರಣ ತಯಾರಿಕೆ ಸೇರಿದಂತೆ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿದೆ ಎಂದರು.
ದೇವಶಿಲ್ಪಿ ವಿಶ್ವಕರ್ಮರು ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸೃಷ್ಟಿಗಳ ಕರ್ತೃ ಎಂದು ಪ್ರಸಿದ್ಧರಾಗಿದ್ದಾರೆ. ಜಗತ್ತನ್ನು ನಿರ್ಮಾಣ ಮಾಡಿ ಹಲವಾರು ನಾಮಧ್ಯೇಯಗಳಿಂದ ಖ್ಯಾತರಾಗಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಅವರಂತಹ ಶ್ರೇಷ್ಠ ಕಲಾವಿದರನ್ನು ಈ ಸಮಾಜ ನಾಡಿಗೆ ಕೊಡುಗೆಯಾಗಿ ನೀಡಿದೆ. ಕಲಾತ್ಮಕತೆ ಹೊಂದಿರುವ ವಿಶ್ವಕರ್ಮ ಸಮಾಜ ಅತ್ಯಂತ ಶ್ರಮ ಸಂಸ್ಕೃತಿಯುಳ್ಳದ್ದಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದೇವಿಂದ್ರ ತಳವಾರಗೇರಾ, ಜಿಲ್ಲಾ ಗೌರವಾಧ್ಯಕ್ಷ ಮಹೇಶ ಶಾರದಹಳ್ಳಿ, ಮಲ್ಲು ರಂಗAಪೇಟೆ, ಚುನಾವಣೆ ಶಿರಸ್ತೇದಾರ್ ಅವಿನಾಶ್ ಪಡಶೆಟ್ಟಿ, ಕಂದಾಯ ಇಲಾಖೆಯ ಗುರುಬಸಪ್ಪ, ಪ್ರವೀಣ್, ಚನ್ನಬಸವ, ರವಿ ಬೆನಕನಹಳ್ಳಿ, ಅಶೋಕ ಯಾದಗಿರಿ ಸೇರಿ ಇತರರು ಇದ್ದರು.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ