ಕ್ರಾಂತಿವಾಣಿ ವಾರ್ತೆ ಸುರಪುರ: ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಇಬ್ಭಾಗವಾಗಿದ್ದ ವಕೀಲರ ಸಂಘ ಒಂದಾಗಿರುವುದು ಸಂತಸ ತಂದಿದೆ. ೧೫೦ ವರ್ಷಗಳ ಇತಿಹಾಸವಿರುವ ಸಂಘಕ್ಕೆ ರಾಜ್ಯದಲ್ಲಿ ವಿಶೇಷ ಗೌರ ವಿದೆ. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಸಂಘವನ್ನಾಗಿ ರೂಪಿಸಬೇಕು ಎಂದು ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಹೇಳಿದರು
ಇಲ್ಲಿಯ ವಕೀಲರ ಸಂಘದ ಕಾರ‍್ಯಾಲಯದಲ್ಲಿ ಮಂಗಳವಾರ ನಡೆದ ಸಭೆಯಲಿ ಮಾತನಾಡಿದ ಅವರು. ತಾಲೂಕಿಗೆ ಈಗಾಗಲೆ ಹೆಚ್ಚವರಿ ೨ನೇ ಜಿಲ್ಲಾ ನ್ಯಾಯಾಲಯ ಮಂಜೂರಿಯಾಗಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನ್ಯಾಯಾಲಯದ ಆರ್ಥಿಕ ಮಂಜೂರಾತಿ ಪಡೆದು ಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು
ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ಕವಲಿ ಅಧ್ಯಕ್ಷತೆಯಲ್ಲಿ ಸಂಘ ಒಂದಾಗಿ ರುವುದು ಜಿಲ್ಲಾ ೨ನೇ ಹೆಚ್ಚುವರಿ ನ್ಯಾಯಾಲಯ ಮಂಜೂರಿ ಆಗಿರುವುದು ಸಂತಸ ತಂದಿದೆ. ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರರ ಸಲಹೆ ಮೇರೆಗೆ ಒಂದಾಗಿದ್ದೇವೆ. ವಕೀಲರ ಹಿತದೃಷ್ಠಿಯಿಂದ ನ್ಯಾಯಮೂರ್ತಿ ಯವರು ಸಲಹೆ ನೀಡಿರುವುದು ಸ್ವಾಗತಾರ್ಹ. ಎಲ್ಲರು ಭಿನ್ನಾಭಿಪ್ರಾಯ ಪ್ರತಿಷ್ಠೆ ಮರೆತುಸಂಘದ ಹಿತಾಸಕ್ತಿ ಕಾಪಾಡಬೇಕು ಎಂದರು.
ಹೆಚ್ಚುವರಿ ೨ನೇ ಜಿಲ್ಲಾ ನ್ಯಾಯಾಲಯ ಆರ್ಥಿಕ ಅನುಮೋಧನೆ ಪಡೆಯಲು ಸುರಪುರದಿಂದ ೨೫ ಶಹಾಪುರದಿಂದ ೨೫ ಸೇರಿ ೫೦ ಜನ ವಕೀಲರು ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಮತ್ತು ಕಾನೂನು ಸಚಿವರನ್ನು ಭೇಟಿ ಮಾಡೋಣ. ಆರ್ಥಿಕ ಅನುಮೋದನೆಗೆ ಅವರಲ್ಲಿ ಮನವಿ ಸಲ್ಲಿಸೋಣ. ಕಾಂಗ್ರೆಸ್ ಗೆಲುವಿನಲ್ಲಿ ವಕೀಲರ ಪಾತ್ರ ಕುರಿತು ಸಿಎಂ ಅವರಿಗೆ ಮನವರಿಕೆ ಮಾಡಿಕೊಡೋಣ ಎಂದು ಹಿರಿಯ ವಕೀಲ ಕೆ. ಅರವಿಂದಕುಮಾರ ಸಲಹೆ ನೀಡಿದರು ಎಲ್ಲಾ ವಕೀಲರು ಒಪ್ಪಿಗೆ ಸೂಚಿಸಿದರು ಸಂಘದ ಅಧ್ಯಕ್ಷ ರಮಾನಂದ ಕವಲಿ ಮಾತನಾಡಿದರು
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾದ ವಕೀಲ ಮಲ್ಲಿಕಾರ್ಜುನ ಮಂಗ್ಯಾಳ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಹಣಮಂತ್ರಾಯ ಕಟ್ಟಿಮನಿ, ಜ್ಯೋತಿ ನಾಯಕ, ನಂದಕುಮಾರ, ಮಲ್ಲಯ್ಯ ಹಾಲಗೇರಾ, ಸಂತೋಶ ಗಾರಂಪಳ್ಳಿ, ಪರಮಣ್ಣ ಕಕ್ಕೇರಾ, ಹಿರಿಯ ವಕೀಲರಾದ ಜಿ.ಎಸ್. ಪಾಟೀಲ, ರಾಮನಗೌಡ ಸುಬೇದಾರ, ಉದಯ ಸಿಂಗ, ಬಿಹೆಚ್. ಕಿಲ್ಲೇದಾರ, ವಿಎಸ್. ಜ್ಯೋಶಿ,ಮಹಮ್ಮದಹುಸೇನ, ಎಸ್. ವ್ಯಾಸರಾಜ, ವಿಎಸ್ ಬೈಚಬಾಳ, ಬಸವರಾಜ ಅನ್ಸೂರ, ವೆಂಕಾರೆಡ್ಡಿ ಬೋನ್ಹಾಳ, ಯಲ್ಲಪ್ಪ ಹುಲಿಕಲ್, ಮನೋಹರ ಕುಂಟೋಜಿ, ಜಯಲಲಿತಾ ಪಾಟೀಲ ಜ್ಯಿತಿ ನಾಯಕ, ಛಾಯಾ ಕುಂಟೋಜಿ, ಪದ್ಮಜಾ ರಫುಗಾರ, ಸವಿತಾ ಬಿರಾದಾರ, ಅಶೋಕ ಕವಲಿ, ಮಾನಪ್ಪ ಬಡಿಗೇರ, ಸುರೇಂದ್ರ ದೊಡ್ಮನಿ, ಭೀಮರಾಯ, ಆದಪ್ಪ ಹೊಸಮನಿ, ಮಂಜುನಾಥ ಹುದ್ದಾರ. ಮಲ್ಲು ಬೋಯಿ, ಹಣಮಂತ್ರಾಯ ಗೋನಾಲ, ಮಂಜು ಗುಡುಗುಂಟಿ, ಸಲೀಮ ಖಾಜಿ, ಅಮಜ್ದ್ ಭಾಗವಾನ, ಕೃಷ್ಣ ಕೊಂಗಿ ಸೇರಿದಂತೆ ಹಿರಿ ಕಿರಿಯ ವಕೀಲರರಿದ್ದರು.