ನಿನ್ನ ಮೃದು ಸ್ಪರ್ಷವು ಕಚಗುಳಿ ಇಟ್ಟಂತಾಯಿತು ಮನಕೆ
ಬೆನ್ನ ಮೇಲಿಟ್ಟ ಕೈಯು ನೀರಿಳಿ ಬಿಟ್ಟಂತಾಯಿತು ಮನಕೆ
ದಿಟ್ಟಿಸಿ ನೋಡಿ ಮುಖ ಕಾಂತಿ ಚೆಲ್ಲಿ ಹೃದಯ ಹೊಕ್ಕವಳು
ಕಟ್ಟಿದ ಪ್ರೇಮ ಜಾಲ ಪತ್ತಲು ಉಟ್ಟಂತಾಯಿತು ಮನಕೆ
ಗುನುಗುಟ್ಟಿದ ಆ ಹಾಡಿನೊಳು ನೀ ಸ್ವರವಾಗಿ ನಿಂತವಳು
ಸಾನುರಾಗದ ಚಪ್ಪಾಳೆ ಪಟಾಕಿ ಸುಟ್ಟಂತಾಯಿತು ಮನಕೆ
ಲಾಲಿತ್ಯ ಭರಿತ ಮೆಲು ನುಡಿಗಳಿಂದ ಮುದ ನೀಡುವಳು
ತೇಲಿ ಬರುವ ಹಾಸ ಹೂಬಾಣ ನೆಟ್ಟಂಗಾಯಿತು ಮನಕೆ
ಸೆರಗಿನ ನಿಶಾನಿ ಹೇಮು ನೀ ಅರಿ ಎಂದು ಹೇಳಿದವಳು
ಹೊರ ಕಾಣದಂತೆ ಸರ್ವಸ್ವ ಕೊಟ್ಟಂಗಾಯಿತು ಮನಕೆ
✍️… ಶ್ರೀ ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ ಜಿ ಯಾದಗಿರ