ಪೆಟ್ಟು ಸಹಿಸಿಕೊಂಡ ಪರಿಣಾಮವೇ ಇಂದು ಪೂಜೆಗೊಳ್ಳುತ್ತಿರುವೆ ನಾ
ಒಟ್ಟು ಬೆವರಿನ ಫಲದಿಂದಲೇ ಸಮಾಜದಲ್ಲಿ ಸನ್ಮಾನಗೊಳುತ್ತಿರುವೆ ನಾ.
ಮರೀಚಿಕೆಯ ಬೆನ್ನುಹತ್ತಿ ಓಡಿ ಓಡಿ ಸಿಗದಲೆ ದಣಿದು ಬಸವಳಿಯಲಿಲ್ಲ
ಬರಿದೆ ಎನ್ನದಲೆ ಮೆದ್ದು ಅರಗಿಸಿಕೊಂಡುದಕ್ಕೆ ಬಾಚಿಕೊಳ್ಳುತ್ತಿರುವೆ ನಾ.
ಕೋಪ ಗೊಳ್ಳದಲೆ ಕೊಂಬೆಗಳಂತೆ ಅಪ್ಪುತ ಎಲ್ಲರೊಂದಿಗೆ ನಗುವೆ.
ತಾಪತ್ರಯಗಳನು ನುಂಗಿದರ ಫಲದಿಂದಲೇ
ಬಲಗೊಳ್ಳುತ್ತಿರುವೆ ನಾ
ಅತಿ ದೃಢ ಸಂಕಲ್ಪದಿಂದ ಕಾಲೂರಿ ಸ್ಥಿರವಾಗಿ ಆಳಕ್ಕೆ ಇಳಿದಿರುವೇನು
ನೀತಿಯಂತೆ ಬದುಕಿದ್ದುದ್ದರ ಕಾರಣದಿಂದಲೇ ನೆಲೆಗೊಳ್ಳುತ್ತಿರುವೆ ನಾ.
ಯಾರ ಮತ್ಸರಕೆ ಒಳಗಾಗದಲೆ ಸಾನುರಾಗದಿ ಬಾಳಬೇಕು ಹೇಮು.
ತೋರದೆ ತರತಮವು ಹೀಗೆ ಬದುಕ್ಕಿದ್ದರಿಂದಲೆ ಸ್ಮರಣೆಗೊಳ್ಳುತ್ತಿರುವೆ ನಾ.
🔷✍️ … ಶ್ರೀ ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ ಜಿ ಯಾದಗಿರ...