ಸುರಪುರ ಕಲಾವಿದರಿಂದ ಮಂತ್ರಾಲಯದಲ್ಲಿ ಸಂಗೀತ ಸುಧೆ

ಕ್ರಾಂತಿವಾಣಿ ವಾರ್ತೆ ಸುರಪುರ:  ಐತಿಹಾಸಿಕ ಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಸಾನ್ನಿಧ್ಯದಲ್ಲಿ ಸುರುಪುರದ ಕಲಾವಿದರಿಂದ ಸಂಗೀತ ಸುಧೆ ಎಲ್ಲಾ ರಾಯರ ಭಕ್ತರನ್ನು ಮನಸೂರೆಗೊಂಡಿತು.                ಪತ್ರಿಕೆಯೊಂದಿಗೆ ಮಾತನಾಡಿದ ಶರಣಪ್ಪ ಕಮ್ಮಾರ್, ಸುರಪುರ ಸಂಗೀತ ಸಾಧಕರಿಂದ ತುಂಬಿದ ನಾಡಾಗಿದೆ. ಇಲ್ಲಿನ ಸಂಗೀತ ಕಲಾಸಕ್ತರು ಶ್ರದ್ಧಾ ಭಕ್ತಿಯಿಂದ ನಿರಂತರವಾಗಿ ತಾಲೂಕಿಲ್ಲಿ ಸಂಗೀತ ಸೇವೆ ನೀಡುತ್ತಿದ್ದಾರೆ. ಇದನ್ನು ಗಮನಿಸಿ ಮಂತ್ರಾಲಯದಲ್ಲಿ ಸಂಗೀತ ಸೇವೆ ನೀಡಲು ಅಹ್ವಾ ನೀಡಲಾಗಿತ್ತು.  ಇದರಿಂದ ಗಾನಗಂಧರ್ವ ಯಾತ್ರ ಕಲಾತಂಡವು 202324ನೇ ಸಾಲಿನಲ್ಲಿ ಮಂತ್ರಾಲಯದಲ್ಲಿ  ಸಂಗೀತ ಸೇವೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಗೀತ ಕಲಾವಿದರು  ಹೆಚ್ಚಾಗಿ ಅನ್ಯ ಜಿಲ್ಲೆಗಳಿಗೆ ಹಾಗೂ ರಾಜ್ಯಾದ್ಯಂತ ಹೆಚ್ಚಿನ ಸಂಗೀತ ಸೇವೆ ನೀಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.                       ಕಲಾವಿದರಾದ ಶ್ರೀ ವೇದಮೂರ್ತಿ ಶಿವಶರಣಯ್ಯ ಬಳ್ಳೊಂಡಿಗೆ ಮಠ ಆಕಾಶವಾಣಿ ಕಲಾವಿದರು, ಹಿರಿಯ ಕಲಾವಿದರಾದ  ಮೋಹನ್ ರಾವ್ ಮಾಡದಕರ, ಕಿರಿಯ ಕಲಾವಿದ ಜಗದೀಶ್ ಮಾನು,  ಹಿರಿಯ ಕಲಾವಿದ  ರಾಘವೇಂದ್ರ ಕೋಟಿ ಕಾನಿ ತಬಲವಾದ ಭಾಗವಹಿಸಿದ್ದರು

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ