ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಕೆಂಭಾವಿ, ಕಕ್ಕೇರಾ ಪುರಸಭೆ ಕಾರ್ಯಾಲಯ, ಹುಣಸಗಿ ಪಟ್ಟಣ ಪಂಚಾಯಿತಿ, ಸುರಪುರ ನಗರಸಭೆಯಲ್ಲಿ ನಾಲ್ಕನೇ ಶನಿವಾರದ ರಜೆ ಹೆಸರಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಮರೆತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಮಹಾತ್ಮ ಗಾಂಧೀಜಿ ವೃತದಲ್ಲಿ ದಸಂಸ (ಕ್ರಾಂತಿಕಾರಿ ಬಣ) ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ೧೯೬೪ ಸೆಪ್ಟೆಂಬರ್ ೨೩ರಂದು ಮುನಿಚಿನ್ನಪ್ಪ ವಿರುದ್ಧವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪೌರಕಾರ್ಮಿಕರ ಪರವಾಗಿ ಬಿ ಬಸವಲಿಂಗಪ್ಪನವರು ಹೋರಾಟ ಮಾಡಿ ನ್ಯಾಯ ಕೊಡಿಸಿದ್ದಾರೆ. ಇದರ ಅಂಗವಾಗಿ ಸೆ. ೨೩ರನ್ನು ಕಾರ್ಮಿಕರ ದಿನವನ್ನಾಗಿ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುತ್ತದೆ. ದಲಿತ ಮಹಾನ್ ಚೇತನ ಮಲ ಹೊರುವ ಪದ್ಧತಿ ನಿಷೇಧಿಸಿದ ಮಹಾನ್‌ಪುರುಷ ಬಿ. ಬಸವಲಿಂಗಪ್ಪನವರ ಭಾವಚಿತ್ರಕ್ಕೆ ಪೂಜಿಸದೆ ಅವಮಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿ. ಬಸವಲಿಂಗಪ್ಪನವರ ಭಾವಚಿತ್ರಕ್ಕೆ ಪೂಜಿಸಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಆಚರಿಸುವಂತೆ ಸರ್ಕಾರದ ಆದೇಶವಿದ್ದರೂ ನಿಯಮ ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುರಪುರ ನಗರಸಭೆ ಮತ್ತು ಕಕ್ಕೇರ ಕೆಂಭಾವಿ ಪುರಸಭೆಯಲ್ಲಿ ಹಾಗೂ ಹುಣಸಗಿ ಪಟ್ಟಣ ಪಂಚಾಯಿತಿಗಳಲ್ಲಿ ಸರ್ಕಾರದ ಆದೇಶದಂತೆ ಪೌರಕಾರ್ಮಿಕ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಿ ಕಾರ್ಮಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಇಂತಹ ಕೆಲಸವನ್ನು ಮಾಡಿಲ್ಲ. ಪೌರಕಾರ್ಮಿಕರಿಗೆ ವಿಶೇಷ ಭತ್ಯೆ ೭,೦೦೦ ರೂ., ಕಾಯಂ ಹಾಗೂ ನೇರ ಪಾವತಿ ಮತ್ತು ಹೊರಗುತ್ತಿಗೆ ನೌಕರರಿಗೆ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಇನ್ನೂವರೆಗೂ ಕೂಡ ಜಾರಿಯಾಗಿಲ್ಲ. ಇದನ್ನು ಖಂಡಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶೀಘ್ರದಲ್ಲೇ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಸಂಚಾಲಕ ಬಸವರಾಜ್ ದೊಡ್ಡಮನೆ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಬುದ್ಧಿವಂತ ನಾಗರಾಳ, ಜಟ್ಟಪ್ಪ ನಾಗರಾಳ, ಮಲ್ಲಿಕಾರ್ಜುನ ಶೆಳ್ಳಗಿ, ಮಹೇಶ್ ಯಾದಗಿರಿ, ಹೊನ್ನಪ್ಪ ದೇವಿಕೇರಿ, ಹುಲುಗಪ್ಪ ಜಾಂಗೀರ್ ಇತರರಿದ್ದರು.
ಚಿತ್ರ: ೨೪ ಎಸ್‌ಯುಆರ್ ೨
ಸುರಪುರ: ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ದಿನಾಚರಣೆ ಮರೆತ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಸಂಸ (ಕ್ರಾಂತಿಕಾರಿ ಬಣ) ಸದಸ್ಯರು ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪ್ರತಿಭಟಿಸಿದರು.