ಅಧಿಕಾರವು ಅತೀತನದ ಅಮಲಾಗಬಾರದೆಂಬುದು ನನ್ನ ಮನವಿ
ಅಧಿನಿಯಮ ನಿನ್ನೊಬ್ಬನದೆ ಸ್ವತ್ತಾಗಬಾರದೆಂಬುದು ನನ್ನ ಮನವಿ
ಸಹಜತೆಯಲಿ ಕಾರ್ಯಾನುಕೂಲವು ತಿಳಿಸಲಾಗುತ್ತದೆ ಅಲ್ಲವೆ
ಅಹಮಿಕೆಯಲಿ ಸೂಚನೆಯಾಗಬಾರದೆಂಬುದು ನನ್ನ ಮನವಿ
ಯಾರಿಗೆ ಏನೋ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆಯು ಹಿಡಿದಂತೆ
ಸಾರಿನ ರುಚಿಗೆ ಲವಣವು ಅತಿಯಾಗಬಾರದೆಂಬು ನನ್ನ ಮನವಿ
ಬಾಗಿದವನ ಬೆನ್ನೇರುವುದು ಹಿರಿತನಕೆ ಶೋಭೆಯನ್ನು ತರುವುದಿಲ್ಲ
ಯಾಗಿತನವು ಮನುಷ್ಯನ ಗೀಳಾಗಬಾರದೆಂಬು ನನ್ನ ಮನವಿ.
ಹೆಗಲಿಗೆ ಹೆಗಲಾಗಿ ಸಾಗು ಮುಗಿಲೆತ್ತರಕೆ ಬೆಳೆಯುವೆ ಹೇಮು
ಹಗೆತನ ಬದುಕಿಗೆ ಮಾರಕವಾಗಬಾರದೆಂಬುದು ನನ್ನ ಮನವಿ.
🔷✍️… ಶ್ರೀ ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ ಜಿ ಯಾದಗಿರ.