ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಗೋಲ್ಮಾಲ್: ತಹಸೀಲ್ದಾರ್ ವಿಜಯ್ ಕುಮಾರ್ ಗರಂ

ವರದಿ: ನಾಗರಾಜ್ ನ್ಯಾಮತಿ

ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ತಹಸೀಲ್ದಾರ್ ಭೇಟಿ-ಪರಿಶೀಲನೆ
ಪಾಮರಾಜ್ ಎಣ್ಣೆಯಿಂದ ನಿಮ್ಮ ಮಕ್ಕಳಿಗೆ ಅಡುಗೆ ಮಾಡಿ ಬಡುಸುತ್ತೀರಾವೆಂದು ಪ್ರಶ್ನೆ
ಕ್ರಾಂತಿವಾಣಿ ವಾರ್ತೆ: ಸುರಪುರ: ನಗರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಶುಕ್ರವಾರ ಬೆಳಗ್ಗೆ ೧ ಗಂಟೆ ಸುಮಾರಿಗೆ ತಹಸೀಲ್ದಾರ್ ಕೆ. ವಿಜಯಕುಮಾರ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ವ್ಯವಸ್ಥೆ ಮತ್ತು ಸಮರ್ಪಕ ದಾಖಲಾತಿ ನಿರ್ವಹಣೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಜೀವದ ಜತೆ ಆಟವಾಡುವ ಅಧಿಕಾರಿಗಳಿಗೆ ಕ್ಷಮೆಯೇ ಇಲ್ಲವೆಂದ ಘಟನೆ ನಡೆಯಿತು.
ಕಳೆದ ಎರಡು ದಿನದ ಹಿಂದೆ (ಬುಧವಾರ) ವಸತಿ ನಿಲಯದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದಲ್ಲಿ ಬಾಲಹುಳ ಕಂಡುಬಂದಿದ್ದರಿಂದ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಭರವಸೆ ನೀಡಿದಂತೆ ಹಾಸ್ಟೆಲ್‌ಗೆ ಭೇಟಿ ನೀಡಿದರು.
ತಹಸೀಲ್ದಾರ್ ಕೆ. ವಿಜಯಕುಮಾರ ಅವರು, ಮಕ್ಕಳಿಗೆ ಮಾಡಿದ ಆಹಾರದ ಗುಣಮಟ್ಟವನ್ನು ಖುದ್ದು ಸೇವಿಸಿ ಪರಿಶೀಲಿಸಿದರು. ಆಹಾರ ಧಾನ್ಯ ಸಂಗ್ರಹ ಕೊಠಡಿಯಲ್ಲಿ ಅಡುಗೆ ಎಣ್ಣೆ, ಬೇಳೆ, ಉದ್ದಿನಬೇಳೆ, ಸಕ್ಕರೆ, ಕಾರದ ಪುಡಿ, ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ತಪಾಸಣೆ ನೆಡಸಿ ಪಾಮರಾಜ್ ಎಣ್ಣೆ ಬಳಸುವುದಕ್ಕೆ ಸರಕಾರ ಅನುಮತಿ ನೀಡಿದಿಯೇ? ಮಕ್ಕಳ ಜೀವದ ಜತೆ ಆಟವಾಡುವುದನ್ನು ಸಹಿಸುವುದಿಲ್ಲ ಎಂದು ವಾರ್ಡನ್ ವಿರುದ್ಧ ಕಿಡಿಕಾರಿದರು.
ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ ಪರಿಶೀಲಿಸಿ ಚನ್ನಾಗಿಟ್ಟು ಕೊಳ್ಳುವಂತೆ ಸೂಚಿಸಿದರು. ೨ ವರ್ಷದಿಂದ ಆರಂಭವಾಗದೆ ಇರುವ ವಾಷಿಂಗ್ ಮೆಷಿನ್ ನೋಡಲು ಇಟ್ಟಿದ್ದೀರಾ? ಬಳಸಿ ವಿದ್ಯಾರ್ಥಿಗಳ ಅನುಕೂಲ ಮಾಡಿಕೊಡಬೇಕು. ಬೆಂಕಿ ನಂದಿಸುವ ಸಿಲಿಂಡರ್ ಪರಿಶೀಲಿಸಿ ಅವಧಿ ಮುಗಿದಿದ್ದರೂ ಯಾಕೆ ಬದಲಾಯಿಸಿಲ್ಲ. ಸ್ಫೋಟಗೊಂಡು ಮಕ್ಕಳ ಜೀವಕ್ಕೆ ಏನಾದರು ಆದರೆ ಯಾರು ಹೊಣೆ ಎಂದು ವಾರ್ಡನ್ ಜ್ಞಾನಪ್ಪ ಮೇಟಿ ಅವರನ್ನು ಪ್ರಶ್ನಿಸಿದರು.
ಅಡುಗೆ ಸಿಬ್ಬಂದಿಯವರನ್ನು ವಜಾಗೊಳಿಸಲಾಗಿದ್ದು, ತಾತ್ಕಾಲಿಕವಾಗಿ ಇಬ್ಬರನ್ನು ಅಡುಗೆಗೆ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳ ದಾಖಲಾತಿಯನ್ನು ಪರಿಶೀಲಿಸಿದಾಗ ಯಾವುದು ಸರಿಯಿಲ್ಲ. ಪುಸ್ತಕದ ಬೆಲೆ ನಮೂದಿಸಿಲ್ಲ. ಗ್ರಂಥಾಯಲದಿಂದ ಹೋದ ಪುಸ್ತಕಗಳನ್ನು ವಿದ್ಯಾರ್ಥಿಗಳು ಯಾಕೆ ಮರಳಿ ಕೊಟ್ಟಿಲ್ಲ. ಇದರ ಜವಾಬ್ದಾರಿ ಯಾರು? ಕರ್ತವ್ಯ ಲೋಪ ಎಸುಗಿರುವುದು ಕಣ್ಣಿಗೆ ಕಾಣುತ್ತಿದೆ. ವಾರ್ಡನ್ ವಿದ್ಯಾರ್ಥಿಗಳು ಕೊಟ್ಟಿಲ್ಲ ಎನ್ನುತ್ತಿದ್ದಂತೆ ತಹಸೀಲ್ದಾರ್ ಗರಂ ಆದರು.

ತಿಂಗಳು ಆಹಾರ ಬಳಸುವ ವಸ್ತುಗಳ ಮಾಹಿತಿಯನ್ನು ಕೇಳಿದರೆ ನೀಡುತ್ತಿಲ್ಲ, ವಿದ್ಯಾರ್ಥಿಗಳ ಮೆನುವಿಗ ಬಗ್ಗೆ ಸಂಪೂರ್ಣವಾಗಿ ನೀಡುವಲ್ಲಿ ವಿಫಲವಾದ ವಾರ್ಡನ್ ತಿಂಗಳಲ್ಲಿ ಎರಡು ದಿನ ನಾನ್‌ವೆಜ್ ನೀಡುತ್ತೇವೆ. ಅದಕ್ಕೆ ಟೆಂಡರ್ ಕರೆದಿದಾರೆ ಎಂದಾಗ ತಹಸೀಲ್ದಾರ್ ಅವರು ಸೆಪ್ಟೆಂಬರ್ ಆಹಾರ ಧಾನ್ಯವೇ ಬಂದಿಲ್ಲ. ಹೇಗೆ ಹಾಸ್ಟೆಲ್ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೆ ಗೋಲಮಾಲ್ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಗೈರಾದರೆ ಪೋಷಕರಿಗೆ ಯಾಕೆ ಮಾಹಿತಿ ನೀಡುವುದಿಲ್ಲ. ಇರುವುದು ೪೦ ವಿದ್ಯಾರ್ಥಿಗಳು, ೧೨೦ ವಿದ್ಯಾರ್ಥಿಗಳ ಲೆಕ್ಕ ನೀಡುತ್ತಿದ್ದೀರಾ. ಲೆಕ್ಕ ಸರಿ ಮಾಡುತ್ತೇವೆ ಎಂದು ವಾರ್ಡನ್ ಹೇಳಿದಾಗ ನಾವು ಬಂದಾಗ ಹೇಳೋದಲ್ಲ. ಸರಕಾರದ ನಿಯಮಗಳ ಹಾಗೆ ನಡೆದು ಕೊಳ್ಳಬೇಕು. ಎಲ್ಲ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು. ನಿಮ್ಮ ವಿರುದ್ಧ ಅಧಿಕಾರಿಗಳೆ ಕ್ರಮ ಕೈಗೊಳ್ಳುತ್ತಾರೆ ಎಂದು ತೆರಳಿದರು.
—ಕೋಟ್ –
ವಿದ್ಯಾರ್ಥಿಗಳು ಭಾರತದ ಭವ್ಯ ಭವಿಷ್ಯದ ಬೆಳಕು. ಅವರ ಜೀವನ ಕಟ್ಟಿಕೊಳ್ಳಲು ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಧಿಕಾರಿಗಳು ವ್ಯರ್ಥ ಮಾಡುವುದು ಸರಿಯಲ್ಲ. ವಸತಿ ನಿಲಯದಲ್ಲಿರುವ ಎಲ್ಲವನ್ನು ಅವಲೋಕಿಸಲಾಗಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್
ಕೆ. ವಿಜಯಕುಮಾರ ಕ್ರಾಂತಿವಾಣಿ ಪತ್ರಿಕೆ ತಿಳಿಸಿದರು.

ಜ್ಞ್ಯಾನಪ್ಪ  ಮೇಟಿಯ ನಾಟಕ :                                    ಹಾಸ್ಟೆಲ್ ಮೇಲ್ವಿಚಾರಕ ಎರಡ್ಮೂರು ಹಾಸ್ಟೆಲ್‌ಗಳನ್ನು ನೋಡಿಕೊಳ್ಳುತ್ತೇನೆ ಒಮ್ಮೆ ಎನ್ನುತ್ತಾರೆ. ಇಲ್ಲ ಅಲ್ಲಿ ಕೆಂಭಾವಿ ರಸ್ತೆಯ ಹಾಸ್ಟೆಲ್‌ನ್ನು ಬೇರೆಯವರು ನೋಡಿಕೊಳ್ಳುತ್ತಾರೆ ಎಂಬುದಾಗಿ ನುಡಿಯುತ್ತಾರೆ. ಸಿಬ್ಬಂದಿಯೇ ಇಲ್ಲ ಎನ್ನುತ್ತಾರೆ. ನಾನು ಒಬ್ಬನೇ ನೋಡಿಕೊಳ್ಲುತ್ತಿರುವುದರಿಂದ ಕೆಲಸದಲ್ಲಿ ತಡವಾಗಿದೆ ಎಂಬುದನ್ನು ಬಿಂಬಿಸಲು ವಾರ್ಡನ್ ಮತ್ತು ಅಲ್ಪಸಂಖ್ಯಾತರ ಸಹಾಯಕ ನಿರ್ದೇಶಕ ಜ್ಞಾನಪ್ಪ ಮೇಟಿ ಯತ್ನಿಸಿದ ಘಟನೆಯೂ ನಡೆಯಿತು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ