ಮೇಷ್ಟ್ರು ಗಜಲ್ : ಬಹಳ ಕಾಡಿಸಬೇಡ ನೀ

ನೀ ಬರತಿ ಅಂತ ದಾರಿ ಕಾದು ಕಣ್ಣು ಉರ್ಯಾಕ ಹತ್ತ್ಯಾವ ಬರತಿ ಇಲ್ಲ ಹೇಳು ಕನಸಿಗ.

ಈ ಭರವಸೆಯ ಬಳ್ಳಿಗಳು ಕಮರಲಾಕ ಹತ್ಯಾವ ನೆನಪರ ತರತಿ ಇಲ್ಲ ಹೇಳು ಕನಸಿಗ.

ಸೂರ್ಯಾಗ ದಣಿವಾಗಿ ನಿಧಾನಕ ವಿರಾಮ ತಗೊಳಾಕ ಪಶ್ಚಿಮಕಡಿ ನಡದಾನ.
ಮಾರ್ಯಾಗ ಸುಕ್ಕಿನ ನೆರಿಗೆ ಬೀಳಾಕ ಹತ್ತಾವ ಹಠದಿಂದ ಸರಿತಿ ಇಲ್ಲ ಹೇಳು ಕನಸಿಗ.

ಬಹಳ ಕಾಡಸಬ್ಯಾಡ ಅತಿ ಹಣ್ಣಾಗಿ ಆಮ್ಯಾಲ ತಿನ್ನಾಕ ಬರದಂಗಾದಾತಂತಿನಿ.
ದೇಹ ಸುಕ್ಕುಗಟ್ಟಿ ಮೈಮನಗಳು ಬಾಡಕ ಹತ್ಯಾವ ಸಿಟ್ಟು ಮರಿತಿ ಇಲ್ಲ ಹೇಳು ಕನಸಿಗ.

ಜಪ್ಪಯ್ಯ ಅಂದರು ಸರಿಲಾರದಂಗ ನಾನು ಮನ ಗಟ್ಟಿ ಮಾಡಿ ಕುಂತಿನಿ ನೋಡೊಣ
ಒಪ್ಪತ್ತಿನ ಹರಕಿ ಹೊತ್ತದ್ದು ವ್ಯರ್ಥ ಆಗಾಕ ಹತ್ಯಾವ ಕಣ್ಣು
ತೆರಿತಿ ಇಲ್ಲ ಹೇಳು ಕನಸಿಗ.

ಈ ಪ್ರೇಮ ಸಾಗರದಾಗ ಈಜಿ ಪಾರಾದವರು ಬಹಳ ಜನ ಇಲ್ಲ ಹೇಮು ವಿರಳರು.
ಆ ಪ್ರೇತದ ಬೆನ್ನುಹತ್ತಿಂದ ನೆಪ್ಪ ಸುಡಕ ಹತ್ಯಾವ ತಣ್ಣೀರು ಸುರಿತಿ ಇಲ್ಲ ಹೇಳು ಕನಸಿಗ.

🔷✍️… ಶ್ರೀ ಹೆಚ್ ರಾಠೋಡ (ಅಂಜನಾಸುತ)

ಶಿಕ್ಷಕರು ಸುರಪುರ ಜಿ ಯಾದಗಿರಿ

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ