ದೇವಾಪುರ ಹೊಲದ ರಸ್ತೆ ದುರಸ್ತಿಗೆ ರೈತರ ಒತ್ತಾಯ

ವರದಿ: ನಾಗರಾಜ್ ನ್ಯಾಮತಿ
ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ದೇವಾಪುರ ಮುಷ್ಠಳ್ಳಿ ಮಾರ್ಗದ ಹೊಲಗಳಿಗೆ ಹೋಗುವ ೪ ಕಿ.ಮೀ. ರಸ್ತೆ ಹದಗೆಟ್ಟ ೧೫ ವರ್ಷವಾಗಿದ್ದರೂ ದುರಸ್ತಿ ಕನಸಿನ ಮಾತಾಗಿದ್ದು, ರೈತರು ಅದರಲ್ಲಿ ಸಂಚಾರಿಸುವಂತಾಗಿದೆ. ಅತಿಶೀಘ್ರವೇ ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯನ್ನು ದೇವಾಪುರದ ರೈತರು ಒತ್ತಾಯಿಸಿದ್ದಾರೆ.
ಕಕ್ಕೇರಾ ಹೋಬಳಿ ವ್ಯಾಪ್ತಿಯ ದೇವಾಪುರ ಮುಷ್ಠಳ್ಳಿ ಮಾರ್ಗದಲ್ಲಿ ೨೦೦೦ ಎಕರೆ ಜಮೀನು ಇದೆ. ನೀರಾವರಿ ಪ್ರದೇಶವಾಗಿದ್ದು, ರೈತರಿಂದ ಗಿಜಿಗುಟ್ಟುತ್ತಿರುತ್ತದೆ. ಒಂದಲ್ಲ ಒಂದು ವಾಹನಗಳು, ಎತ್ತಿನಗಾಡಿಗಳು, ಟ್ಯ್ರಾಕ್ಟರ್ ಕೃಷಿ ಚಟುವಟಿಕೆ ನಿಮಿತ್ತ ಸದಾ ಸಂಚರಿಸುತ್ತಿರುತ್ತಿವೆ.
ನಾರಾಯಣಪುರ ಜಲಾಶಯದಿಂದ ಮಳೆಗಾಲ ಮತ್ತು ಬೇಸಿಗೆ ಕಾಲಕ್ಕೆ ನೀರು ನೀಡಿದರೆ ಭತ್ತ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಎರಡು ಅವಧಿಯಲ್ಲೂ ಬೆಳೆಯುತ್ತಾರೆ. ೨೦೦೮ರಲ್ಲಿ ೪ ಕಿ.ಮೀ. ರಸ್ತೆಯನ್ನು ಮರಮ್ ಹಾಕಿ ದುರಸ್ತಿ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಒಂದು ಮಣ್ಣು ಕಂಡಿಲ್ಲ. ಸಂಪೂರ್ಣ ತಗ್ಗು ಗುಂಡಿಗಳು ಬಿದ್ದಿವೆ. ಅದರಲ್ಲಿ ನೀರು ನಿಂತು ಅರಿವಿಗೆ ಬಾರದೆ ಬಿದ್ದು ಅಪಘಾತಗಳು ಆಗಿವೆ.
ರಾತ್ರಿ ಹೊತ್ತಿನಲ್ಲಿ ಕರೆಂಟು ಕೊಡುವುದರಿಂದ ಹೊಲಗಳಿಗೆ ನೀರು ಕಟ್ಟುವುದು ಇರುತ್ತದೆ. ಆದ್ದರಿಂದ ಕತ್ತಲಿನಲ್ಲಿಯೇ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಪ್ರಯಾಣ ಸುತ್ತೇವೆ. ಗುಂಡಿಗಳಲ್ಲಿ ಬೈಕ್ ಓಡಿಸಿ ಬಿದ್ದು ಅಪಘಾತಗಳು ಆಗಿವೆ. ರೈತರ ಜೀವ ಹೋಗುವ ಮುಂಚೆ ಜಿಪಂ ಸಿಇಒ ಅವರು ಹೊಲದ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ವೆಂಕಟೇಶ ಶಿಕಾರಿ ಇತರರು ಮನವಿ ಮಾಡಿದ್ದಾರೆ.
ಮಾಹಿತಿ ನೀಡುವುದಿಲ್ಲ: ರಸ್ತೆ ದುರಸ್ತಿಗೆ ಯೋಜನೆಗಳು ಇದ್ದರೆ ತಿಳಿಸಿ ಎಂಬುದಾಗಿ ತಾಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮಾಹಿತಿಯೇ ನೀಡುವುದಿಲ್ಲ. ಹೊಲದ ರಸ್ತೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಪ್ರತಿ ವರ್ಷ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೌಕಿಕ ಮತ್ತು ಲಿಖಿತವಾಗಿ ಮನವಿ ಮಾಡಿದರೂ ಪ್ರಯೋನವಾಗಿಲ್ಲ ಎಂಬುದು ಇಲ್ಲಿನ ರೈತರ ಆರೋಪವಾಗಿದೆ.
ಅಧಿಕಾರಿಗಳುಮುಖ್ಯ ರಸ್ತೆಗಳತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರು ಜಮೀನಿಗೆ ಹೋಗುವ ಒಳರಸ್ತೆ ಹಾಳಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಕಣ್ಣೆತ್ತಿ    ನೋಡುತ್ತಿಲ್ಲವೆಂದು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ

ವಾಹನಗಳು ಸಂಚರಿಸಿದರೂ ಗುಂಡಿಗಳು ಬೀಳುವುದಿಲ್ಲ ಎನ್ನುವುದು ಹಿರಿಯ ರೈತರ ಅಭಿಪ್ರಾಯವಾಗಿದೆ.
ನಮ್ಮ ಹೊಲಕ್ಕೆ ಹೋಗಲು ಸುಗಮ ಹೊಲದ ರಸ್ತೆಯಿಲ್ಲ. ಗುಣಮಟ್ಟದ ರಸ್ತೆ ದುರಸ್ತಿ ಮಾಡದಿದ್ದರೆ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂಬುದಾಗಿ ಚಂದ್ರು ಡಾಂಬಾರ್, ತಿರುಪತಿ ಅಂಬಿಗರ, ರಾಘವೇಂದ್ರ ನಾಯಕ, ದೇವೇಂದ್ರ ಗುತ್ತಿ, ಸಂತೋಷ ಬಾಕ್ಲಿ ಇತರರು ಎಚ್ಚರಿಸಿದ್ದಾರೆ.
– ಪ್ರತಿಭಟನೆ–
ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ೪ ಕಿ.ಮೀ. ರಸ್ತೆ ದುರಸ್ತಿ ಪಡಿಸಬೇಕು. ಆದರೆ ಇಲ್ಲಿನ ತಾಪಂ ಇಒಗಳು ಕುಂಟು ನೆಪ ಹೇಳುತ್ತಾ ದಿನ ಕಳೆದಿದ್ದಾರೆ. ಜಿಪಂ ಸಿಇಒ ಅವರು ದೇವಾಪುರದ ರೈತರ ರಸ್ತೆಯ ಗುಣಮಟ್ಟ ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಜಿಪಂ ಮುಂದೆ ಪ್ರತಿಭಟನೆ ನಡೆಸುತ್ತೇವೆ.
ಚನ್ನಪ್ಪಗೌಡ ಎ. ಜಕ್ಕನ ಗೌಡ ದೇವಾಪುರ, ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ, ಸುರಪುರ
— ಬಾಕ್ಸ್ —
ದೇವಾಪುರದ ಹೊಲದ ರಸ್ತೆಯೂ ತಾಲೂಖು ಪಂಚಾಯತ್ ವ್ಯಾಪ್ತಿಗೆ ಬರುವುದಿಲ್ಲ ಪಂಚಾಯತ್ ರಾಜ್ ಅಥವಾ ಪಿಡಬ್ಲುಡಿ ಇಲಾಖೆಗೆ ಬರಬಹುದು ಎಂದು ತಾಪಂ ಇಒ ಬಸವರಾಜ್ ಸಜ್ಜನ ತಿಳಿಸಿದರು. ಪಡಬ್ಲುö್ಯಡಿ ಎಎಇ ಅವರು ನಮ್ಮ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಪಂಚಾಯತ್ ರಾಜ್ ಇಲಾಖೆಯವರು ಪರಿಶೀಲಿಸಿ ತಿಳಿಸುತ್ತೇವೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ