ವಚನ ಸಾಹಿತ್ಯ ಸಂಶೋಧಕ ಫ.ಗು. ಹಳಕಟ್ಟಿ: ವಡ್ಡನಕೇರಿ

ವಚನ ಮುದ್ರಣದ ಶತಮಾನೋತ್ಸವ, ಪುಸ್ತಕ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ.

ಕ್ರಾಂತಿವಾಣಿ ವಾರ್ತೆ ಸುರಪುರ: ೧೨ನೇ ಶತಮಾನದ ವಚನಗಳನ್ನು ಶೋಧಿಸಿದ ಕೀರ್ತಿ ಪ.ಗು. ಹಳಿಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ವಚನ ಸಾಹಿತ್ಯದಲ್ಲಿ ಜೀವನದ ಸಾರ ಅಡಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಲಬುರಗಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.

ತಾಲೂಕಿನ ಕಕ್ಕೇರಾ ಪಟ್ಟಣದ ಶರಣ ಡೋಹರ ಕಕ್ಕಯ್ಯನವರ ದೇಗುಲದಲ್ಲಿ ಬಸವ ಸೇವಾ ಸಮಿತಿ, ಜನಸ್ನೇಹಿ ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ಶ್ರವಣ ಸಂಭ್ರಮ, ವಚನ ಮುದ್ರಣದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಚನಗಳ ಮುದ್ರಣದ ಸಂಶೋಧನಾ ಪಿತಾಮಹ ಪ,ಗು ಹಳಕಟ್ಟಿಯವರ ಶ್ರಮದ ಫಲವೇ ಇಂದು ನಾವೆಲ್ಲ ವಚನಗಳನ್ನು ಓದುತ್ತಿದ್ದೇವೆ ಎಂದರು.
ಫ.ಗು ಹಳಕಟ್ಟಿ ವಕೀಲ ವೃತ್ತಿಯಲ್ಲಿ ಅಪಾರ ಜ್ಞಾನವನ್ನು ಸಂಪಾದಿಸಿದ್ದು, ಪತ್ರಿಕೋದ್ಯಮದಲ್ಲಿ ತುಂಬಾ ಆಸಕ್ತಿ ಹೊಂದಿದ ಪ್ರಯುಕ್ತ ಶಿವಾನುಭವ ೧೯೨೬ರಲ್ಲಿ ಪತ್ರಿಕೆ ಆರಂಭಿಸಿದರು. ಫ.ಗು ಹಳಕಟ್ಟಿಯವರು ಬಸವಾದಿ ಶರಣರ ವಚನಗಳನ್ನು ಇಂಗ್ಲಿಷನಲ್ಲಿ ಅನುವಾದಿಸಿ, ವಚನ ಗಾಯನಕ್ಕೂ ಅನುಕೂಲ ಮಾಡಿಕೊಟ್ಟ ಮಹಾನ್ ಚೇತನರಾಗಿದ್ದಾರೆ. ವಿಜಾಪುರದಲ್ಲಿ ವಚನಗುಮ್ಮಟವಿದ್ದು, ಪ್ರಸ್ತುತ ಅವರು ಬಳಿಸಿದ ಚಾಲೀಸ್, ಸೈಕಲ್ ಇನ್ನಿತರ ವಸ್ತುಗಳು ನೋಡಬಹುದು ಎಂದು ಹೇಳಿದರು.
ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿ, ಜನಸ್ನೇಹಿ ಸಂಸ್ಥೆ ಶಾಮಲಿಂಗ ಜವಳಗಿ ಅತ್ಯುನ್ನುತ ಸಂಪಾದಕರು, ಅವರ ಭಕ್ತಿ ಸಾಗರ ಪುಸ್ತಕದಲ್ಲಿ ಅನೇಕ ಬಸವಾದಿ ಶರಣ ಹಾಡುಗಳಿದ್ದು, ಅವರ ಕಾರ್ಯವೈಖರಿ, ಬಸವತತ್ವದ ಬಗ್ಗೆ ಅವರನ್ನು ಶ್ಲಾಘಿಸಿದರು.
ಜನಸ್ನೇಹಿ ಸಂಸ್ಥೆ ಸಂಸ್ಥಾಪಕ ಬೆಂಗಳೂರು ಶಾಮಲಿಂಗ ಜವಳಗಿ ಮಾತನಾಡಿ, ಪಟ್ಟಣದ ಬಸವ ಸೇವಾ ಸಮಿತಿಯವರು, ೨೦೦ಕ್ಕೂ ಹೆಚ್ಚು ಪ್ರತಿ ಗುರುವಾರ, ಸೋಮವಾರ, ಮನೆಮನ ಬಸವ ಬೆಳಗು ಕಾರ್ಯಕ್ರಮ, ಪ್ರತಿ ಹುಣ ್ಣಮೆ ಅರಿವು ಆಚಾರ ಕಾರ್ಯಕ್ರಮ, ಸೇರಿದಂತೆ ೩ ಸಲ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಸೇರಿದಂತೆ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಜರಗುತ್ತಿರುವುದು ಅದ್ಭುತವಾಗಿದೆ ಎಂದು ಹೇಳಿದರು.
ಡೋಹರ ಕಕ್ಕಯ್ಯ ಸಮಾಜದ ಅನಿಲ ಹುಟಗಿ ಮಾತನಾಡಿ, ಶಿವಶರಣ ಡೋಹರಕಕ್ಕಯ್ಯ ದೇವಸ್ಥಾನ ಅಂಚಿನಲ್ಲಿದ್ದು, ನಾವು ತಾವುಗಳು ಸೇರಿ ಅಭಿವೃದ್ದಿ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಧ್ವಜಾರೋಹಣ ದೇವೀಂದ್ರಪ್ಪ ಚಂದ್ರಕಲಾ ಭೋಯಿ ದಂಪತಿ ನೆರವೇರಿಸಿದರು. ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪರಮಣ್ಣ ರೂಪಾ ವಡಿಕೇರಿ ದಂಪತಿ ಪುಷ್ಪಾರ್ಚನೆ ಸೇವೆ ಮಾಡಿದರು.
ಪ್ರಶಸ್ತಿ ಪ್ರದಾನ: ಜನಸ್ನೇಹಿ ಸಂಸ್ಥೆಯ ದಶಶತಮಾನೋತ್ಸವ ನಿಮಿತ್ತ ಮಲ್ಲಿಕಾರ್ಜುನಸ್ವಾಮಿ, ಶಾಂತಮ್ಮ ಸ್ವಾಮಿ ದಂಪತಿಗೆ ಶರಣ ಸಂಸ್ಕೃತಿ ದಾಸೋಹಿ ಪ್ರಶಸ್ತಿ ನೀಡಲಾಯಿತು. ಜನಸ್ನೇಹಿ ಸಂಸ್ಥೆಯ ದಶಶತಮಾನೋತ್ಸವ ನಿಮಿತ್ತ ಮಹಾಂತೇಶ ಅಕ್ಕಮಹಾದೇವಿ ಹೊಗರಿ ದಂಪತಿಗೆ ಸಮುದಾಯ ಸೇವಾಬಂಧು ಪ್ರಶಸ್ತಿ ನೀಡಲಾಯಿತು.
ಅಯ್ಯಣ್ಣ ಪೂಜಾರಿ, ಶಿಶುನಾಳ ಶರೀಫ ಮುತ್ಯಾ, ವಿಶ್ವನಾಥ ಮಂಗಲಗಿ, ಸಂಗಣ್ಣ ಮಲಗೊಂಡ, ಸಂಗನಗೌಡ ಪಾಟೀಲ್, ಅಪ್ಪಸಾಬಗೌಡ ಪಾಟೀಲ್, ಭಾಗಣ್ಣ ಹಗರಟಗಿ, ಶರಣಪ್ಪ ಯಾಳವಾರ್, ರಾಜು ಕುಂಬಾರ, ಉಪನ್ಯಾಸಕ ವೆಂಕಟೇಶ, ಮಾಣ ಕರಾವ್ ಪ್ರಸಾರ, ಗವಿಸಿದ್ದೇಶ ಹೊಗರಿ, ಕೆಂಚಪ್ಪ ಕಟ್ಟಿಮನಿ, ಭಾರತಿ ಪುರಾಣ ಕಮಠ, ಶ್ರೀಶೈಲ ಖಾಂದಾರೆ, ವಿರೇಶ ಶಿವಪೂಜಿ, ಆನಂದಸ್ವಾಮಿ, ಸಂಗಣ್ಣ ಶಿವಪೂಜಿ, ಸಂಗಮೇಶ ಮಡ್ಡಿ, ಗದ್ದೆಪ್ಪ ಅಂಬಿಗರ, ಸಂತೋಷ ಪಾಂಡ್ರಿ, ನಂದಣ್ಣ ಶಿವಪೂಜಿ ಇತರರಿದ್ದರು. ಬಸಯ್ಯಸ್ವಾಮಿ ಸ್ವಾಗತಿಸಿದರು. ನೀಲಮ್ಮ ಅಂಗಡಿ, ಮಹಾಂತೇಶ ಮುರಾಳ ನಿರೂಪಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ