ಬೇಡಿಕೆ ಈಡೇರಿಕೆಗೆ ಕಾನಿಪ ಧ್ವನಿ ಸಂಘದಿಂದ ರಕ್ತದಲ್ಲಿ ಸಹಿ ಮನವಿ
ಕ್ರಾಂತಿವಾಣಿ ವಾರ್ತೆ
ಸುರಪುರ: ರಾಜ್ಯದ ಪತ್ರಕರ್ತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುರಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ರಕ್ತದಲ್ಲಿ ಸಹಿ ಮಾಡಿದ ಮನವಿಯನ್ನು ಬುಧವಾರ ತಹಸೀಲ್ದಾರ್ ಕೆ. ವಿಜಯಕುಮಾರ ಅವರಿಗೆ ಸಲ್ಲಿಸಲಾಯಿತು.
ಕರ್ನಾಟಕ ಕಾನಿಪ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ಸುರಪುರದ ತಾಲೂಕು ದಂಡಾಧಿಕಾರಿಗಳ ಮೂಲಕ ಸುರಪುರ ತಾಲೂಕು ಘಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಯ ಮನವಿ ಸಲ್ಲಿಸಲಾಯಿತು.
ಕಾನಿಪ ಧ್ವನಿ ಸಂಘದ ಸುರಪುರ ತಾಲೂಕು ಅಧ್ಯಕ್ಷ ಮೌನೇಶ ಬಿ. ಮಂಗಿಹಾಳ, ರಾಘವೇಂದ್ರ ಮಾಸ್ತರ, ಭೀಮಾಶಂಕರ ಕರ್ನಾಳ, ನಾಗರಾಜ ದೇಸಾಯಿ, ಮದನ ಕಟ್ಟಿಮನಿ, ಧರ್ಮರಾಜ ಹಾಗೂ ಮೌನೇಶ ಆರ್. ಭೋವಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ರಾಜ್ಯದಲ್ಲಿ ಮಾಧ್ಯಮದ ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕಾಗಿ ರಕ್ತದಿಂದ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.