ಸುರಪುರದಲ್ಲಿ ಮಕ್ಕಳ ಮೇಳಕ್ಕೆ ಚಾಲನೆ
ಕ್ರಾಂತಿವಾಣಿ ವಾರ್ತೆ
ಸುರಪುರ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇದಾರಗಲ್ಲಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಅಜೀಮ್ ಪ್ರೇಮಜೀ ಫೌಂಡೇಷನ್ ಸಹಯೋಗದಲ್ಲಿ ಮಕ್ಕಳ ಮೇಳಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಿ.ಆರ್.ಪಿ ಶಿವುಕುಮಾರ ಹಿರೇಮಠ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಮೇಳಗಳು ಸಹಕಾರಿಯಾಗಿವೆ. ಶಾಲೆಗಳಲ್ಲಿ ಮಕ್ಕಳ ಕಲಿಕಾ ಮೇಳಗಳಿಂದ ಮಕ್ಕಳಲ್ಲಿ ಉತ್ತಮ ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಪ್ರಶ್ನಿಸುವ, ಯೋಚಿಸಿ ಅಭ್ಯವ್ಯಕ್ತಿಸುವ ಕೌಶಲಗಳನ್ನು ಬೆಳೆಸುವಲ್ಲಿ ಮೇಳಗಳು ಸಹಕಾರಿಯಾಗಿವೆ ಎಂದರು.
ಅಜೀಮ್ ಪ್ರೇಮಜೀ ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿ, ಮಕ್ಕಳ ಜ್ಞಾನವೃದ್ಧಿಗೆ ಮೇಳಗಳು ಸಹಕಾರಿಯಾಗಿವೆ. ಈ ಮೇಳದಲ್ಲಿ ಭಾಷೆ ಮತ್ತು ಗಣ ತಕ್ಕೆ ಸಂಬAಧಿಸಿದAತೆ ಅನೇಕ ಚಟುವಟಿಕೆಗಳನ್ನು ಚನ್ನಾಗಿ ಮಾಡಿದ್ದಾರೆ. ಶಾಲಾ ಹಂತದಲ್ಲಿಯೇ ಶಿಕ್ಷಕರು ಶೈಕ್ಷಣ ಕ ಮೇಳಗನ್ನು ಆಯೋಜಿಸುವುದರಿಂದ ಮಕ್ಕಳ ಕಲಿಕೆ ಉತ್ತಮವಾಗುವುದು ಎಂದು ತಿಳಿಸಿದರು.
ಮೇಳದಲ್ಲಿ ಮಕ್ಕಳು, ಮೂಲಾಕ್ಷರಗಳ ಪರಿಚಯ, ಕನ್ನಡ ಸಂಧಿಗಳು, ಕಥೆಯ ಮೂಲಕ ಸಂಭಾಷಣೆ, ಪದಗಳ ರಚನೆ, ಶಬ್ಧಕೋಶದಲ್ಲಿ ಪದಗಳ ಅರ್ಥ ಹುಡುಕಾಟ, ಗಣ ತದ ಮೂಲಕ್ರಿಯೆಗಳು, ಭಿನ್ನರಾಶಿಯ ಪರಿಕಲ್ಪನೆ, ಹಿಂದೆ ಮುಂದೆ ಮಧ್ಯ ಹೀಗೆ ೩೦ ಕ್ಕಿಂತ ಹೆಚ್ಚಿನ ಚಟುವಟಿಕೆಗಳ ಕುರಿತು ವಿವರಿಸಿದರು.
ಮುಖ್ಯಶಿಕ್ಷಕ ಮೌನೇಶ ಪತ್ತಾರ, ಶಿಕ್ಷಕರಾದ ನಿರ್ಮಲಾ ಗಡಗಡೆ, ಭಾಗಮ್ಮ, ಶಾಂತಮ್ಮ, ಸಾವಿತ್ರಿ, ಸಿ.ಆರ್.ಪಿ ಶಿವುಕುಮಾರ ಕಮತಗಿ, ಇಸಿಒ ಶಿವುಪುತ್ರ, ಅಜೀಮ್ ಪ್ರೇಮಜೀ ಫೌಂಡೇಷನ್ ಅನಿಲ್ ಔಶಾ, ವಿನೋದಕುಮಾರ, ಪರಮಣ್ಣ ತೆಳಗೇರಿ, ಇಲ್ಯಾಸ, ರಾಜಶೇಖರ ಸೇರಿದಂತೆ ಸ.ಹಿ.ಪ್ರಾ ಶಾಲೆ ಖುರೇಶಿ ಮೊಹಲ್ಲಾ, ಸ.ಹಿ.ಪ್ರಾ.ಶಾಲೆ ಕುರಬರಗಲ್ಲಿ, ಸ.ಕಿ.ಪ್ರಾ ಶಾಲೆ ಪಾಳದಕೇರಾ, ಸ.ಹಿ.ಪ್ರಾ. ಶಾಲೆ ಕಬಾಡಗೇರಾ, ಸ.ಹಿ.ಪ್ರಾ. ಶಾಲೆ ಕುಂಬಾರಪೇಠ, ಉರ್ದು ಹಿ.ಪ್ರಾ.ಶಾಲೆ ಕಬಾಡಗೇರಾ ಶಾಲೆಗಳ ಮಕ್ಕಳು, ಶಿಕ್ಷಕರು, ಪಾಲಕ-ಪೋಷಕರು ಭಾಗವಹಿಸಿದ್ದರು.