ಪದವೀಧರ ಮತದಾರರ ಪಟ್ಟಿ ಸೇರ್ಪಡೆಗೆ ಸೆ. 6 ಕೊನೆಯ ದಿನ

ವರದಿ: ಮೊಗಲಪ್ಪ

ಕ್ರಾಂತಿವಾಣಿ ವಾರ್ತೆ ಗುರುಮಠಕಲ್ : ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಸೆ.೬ ಕೊನೆಯ ದಿನಾಂಕವಾಗಿದೆ. ಹೆಸರು ಸೇರ್ಪಡೆಗೆ ಅರ್ಜಿ ನಮೂನೆ ೧೮ ರಲ್ಲಿ ನೊಂದಾಯಿಸಬೇಕು ಎಂದು ತಹಸೀಲ್ದಾರ ಮೊಹಮ್ಮದ್ ಮೊಸಿನ್ ಅಹಮ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಅರ್ಹತಾ ದಿನಾಂಕ ೧.೧.೨೦೨೩ ಕ್ಕಿಂತ ೩ ವರ್ಷಗಳ ಪೂರ್ವದಲ್ಲಿಅಂದರೆ ೧.೧೧.೨೦೨೦ ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಧರರಾಗಿರಬೇಕು. ೧.೧೧.೨೦೨೦ ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ ೧೮ ರಲ್ಲಿ ಭಾವಚಿತ್ರದೊಂದಿಗೆ ಭರ್ತಿಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ ಕಾರ್ಡ, ಚುನಾವಣೆ ಗುರುತಿನಚೀಟಿ, ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂಧೃಡೀಕರಿಸಿ ಅಲ್ಲದೆ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಸೆ.೧೬ ರೊಳಗೆ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಸಂಬAಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿ ಕಾರ್ಯಲಯದಲ್ಲಿ ಮಹಾನಗರ ಪಾಲಿಕೆ ಹಾಗೂ ತಹಸೀಲ್ ಕಾರ್ಯಲಯದಲ್ಲಿ ಸಲ್ಲಿಸಬೇಕು ಎಂದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ