ಕ್ರಾಂತಿವಾಣಿ ವಾರ್ತೆ ಸುರಪುರ: ನಗರ ನಗರದ ಖಾಸಗಿ ಅದಿತಿ ಹೋಟೆಲ್ ನಲ್ಲಿ ಸುರಪುರದ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ನ ಸರ್ವ ಸದಸ್ಯರ ಸಭೆ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ನ ರೋನರ್ ಗರ್ವನರ್ ಹರಿನಾರಾಯಣ ಭಟ್ಟಡ, ವಿಶ್ವದಲ್ಕಿ 200 ಕಿಂತ ಹೆಚ್ಚು ದೇಶಗಳಲ್ಲಿ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಶಾಖೆಗಳನ್ನು ಹೊಂದಿದ್ದು , ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಸಮಾಜದಲ್ಲಿ ಉತ್ತಮ ಸೇವೆ ನೀಡುವುದೇ ಲಯನ್ಸ್ ಕ್ಲಬ್ ಗಳ ಉದ್ದೇಶವಾಗಿದೆ ಎಂದರು.
ರಾಯಚೂರ್ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಡಾ . ವೆಂಕಟೇಶ ನಾಯಕ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ವಾಗಿ ವೈದಕೀಯ ಸೇವೆ ಒದಗಿಸುವದು. ಸಾಮಾಜಿಕ ಪಿಡುಗಗಳಾಗಿರುವ ದೃಷ್ಟಿ ದೋಷ , ಕಿವುಡುತನ , ಸಕ್ಕರೆ ಕಾಯಿಲೆ , ಮಕ್ಕಳ ಕ್ಯಾನ್ಸರ್ ಮುಂತಾದ ರೋಗಗಳಿಗೆ ವೈದ್ಯಕೀಯ ಶಿಬಿ ರಗಳನ್ನು ಏರ್ಪಡಿಸುವದು ಪ್ರಮುಖ ಉದ್ದೇಶ ವಾಗಿದೆ ಎಂದರು.
ಸುರಪುರ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಾ. ರಾಜಾ ವೆಂಕಪ್ಪ ನಾಯಕ ಮಾತನಾಡಿ, ಸರ್ವ ಸದಸ್ಯರ ಸಹಕಾರ ಸಲಹೆ ಗಳೊಂದಿಗೆ ಸುರಪುರ ತಾಲೂಕಿನ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡಲಾಗುವುದು. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಸುರಪುರ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಗಳಾದ ಪಂಕಜ ಕುಮಾರ ಜೋಶಿ , ಖಜಾಂಚಿ ಗಳಾದ ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ , ಪಿ.ಆರ್.ಸಿ. ಅಧ್ಯಕ್ಷರಾದ ರಾಜ ಮುಕುಂದ ನಾಯಕ , ಜನಾರ್ಧನ ರವರು ವೇದಿಕೆಯಲ್ಲಿ ಉಪಸ್ಥಿತ ರಿದ್ದರು .
ಪ್ರಮುಖರಾದ ಡಾ.ಹರ್ಷವರ್ಧನ , ಡಾ .ಪವನ ಕುಮಾರ ಜೋಶಿ , ಡಾ. ಕನಕರೆಡ್ಡಿ , ಗ್ಯಾನಚಂದ ಜೈನ , ಸೂಗೂರೇಶ ವಾರದ, ನರೇಶ್ ಜೈನ , ನಂದಕಿಶೋರ ಝವರ್ , ಪ್ರಕಾಶ್ ಸಜ್ಜನ್ , ಚಿರಂಜೀವಿ ನಾಯಕ, ಮಹೇಶ ಪತ್ತಾರ, ವಿಜಯ್ ರಾಘವನ್, ಸೋಮಶೇಖರ ಶಾಬಾದಿ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು
ಶರಣಬಸಪ್ಪ ಯಾಳವಾರ ನಿರೂಪಿಸಿದರು. ಕಾರ್ಯದರ್ಶಿಗಾದ ಪಂಕಜ್ ಕುಮಾರ್ ಜೋಶಿ ವಂದಿಸಿದರು.