ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಚಾರ್ಲ್ಸ್

ಸುರಪುರ ನಗರಸಭೆಯಲ್ಲಿ ಗಾಂಧಿ ಜಯಂತಿ ಆಚರಣೆ
ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ನಗರಸಭೆ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಜನ್ಮದಿನದ ಅಂಗವಾಗಿ ಜಯಂತಿ ಆಚರಿಸಲಾಯಿತು. ನಂತರ ಸಾರ್ವಜನಿಕವಾಗಿ ನಗರಸಭೆ ವತಿಯಿಂದ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆಗೆ ನಗರಸಭೆ ಸದಸ್ಯರು ಮತ್ತು ಪೌರಾಯುಕ್ತರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಪ್ರೇಮ್ ಚಾರ್ಲ್ಸ್, ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಸ್ವತಂತ್ರ ಕೊಟ್ಟ ಮಂಚೂಣಿ ನಾಯಕರು. ಸತ್ಯಾಗ್ರಹ ಮತ್ತು ಚಳವಳಿಗಳ ಮೂಲಕ ಬ್ರಿಟಿಷರನ್ನು ದೇಶದಿಂದ ಹೊಡದೋಡಿಸಿ ಸ್ವತಂತ್ರ ಕೊಡಿಸಿದ ಮಹಾತ್ಮರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಗರಸಭೆ ಸದಸ್ಯರಾದ ಮಾನಪ್ಪ ಚೆಳ್ಳಿಗಿಡ, ನಾಸಿರ್ ಕುಂಡಾಲೆ, ಜುಮ್ಮಣ್ಣ ಕೆಂಗೂರಿ, ಅಹಮದ್ ಶರೀಫ್, ನಗರಸಭೆ ನಿರ್ವಾಹಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ, ಶಿರಸ್ತೇದಾರ ವೆಂಕಟೇಶ, ಆರೋಗ್ಯ ಸಹಾಯಕ ಗುರುಸ್ವಾಮಿ, ದುರ್ಗೇಶ ಸೇರಿಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ