ಸುರಪುರ ತಾಪಂ ಕಚೇರಿಯಲ್ಲಿ ಗಾಂಧಿ- ಲಾಲ್ ಬಹುದ್ದೂರ ಜಯಂತಿ

ಕ್ರಾಂತಿವಾಣಿ ವಾರ್ತೆ ಸುರಪುರ: ರಾಷ್ಟ್ರಪಿತ  ಹಾತ್ಮಗಾಂಧಿ ಜೀ ಅವರ 154ನೇ ಜನ್ಮದಿನ ನಿಮಿತ್ತ ಸೋಮವಾರ ಸುರಪುರ ತಾಪಂ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ  ಬಸವರಾಜ ಸಜ್ಜನ ಹಾಗೂ ತಹಶೀಲ್ದಾರ್ ಕೆ. ವಿಜಯಕುಮಾರ ಮಹಾತ್ಮಗಾಂಧಿ ಜೀ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಜನ್ಮದಿನಾಚರಣೆ ಅಂಗವಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಇಒ  ಹಾಗೂ ತಹಶೀಲ್ದಾರ್ ರವರು ತಾಲೂಕ ಪಂಚಾಯತ ಆವರಣದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ ಕಾಪಾಡುವ ಕುರಿತು ಸ್ವಚ್ಛತಾ ಪ್ರತಿಜ್ಞಾ ವಿಧಿ* ಭೋಧಿಸಿದರು.

ನಂತರ ತಾಪಂ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮದಾನದ ಮಾಡುವ ಜತೆ ಪೊರಕೆ ಇಡಿದು ಕಸಗೂಡಿಸುವ ಮೂಲಕ ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಸಂದೇಶ ಸಾರಿದರು.

ಸುರಪುರ ತಾಪಂ ತಾಲೂಕ ಸಹಾಯಕ ಲೆಕ್ಕಾಧಿಕಾರಿಗಳಾದ ನಾಗರಾಜ್, ತಾಂತ್ರಿಕ ಸಂಯೋಜಕರಾದ ಶಿವಯೋಗಿ,ತಾಂತ್ರಿಕ ಸಹಾಯಕರು, ಬಿ ಎಪ್ ಟಿ, ರವರು ಸೇರಿದಂತೆ ತಾಪಂ ಸಿಬ್ಬಂದಿ ಸೇರಿರಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ