ಗಾಂಧೀಜಿ ದಾರಿಯಲಿ ಯುವ ಸಮುದಾಯ ನಡೆಯಲಿ: ತಹಸೀಲ್ದಾರ್ ವಿಜಯಕುಮಾರ

ಕ್ರಾಂತಿವಾಣಿ ವಾರ್ತೆ ಸುರಪುರ : ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಿದ ಮಹಾತ್ಮ ಗಾಂಧೀಜಿ ಅವರ ನಡೆ ಎಲ್ಲರಿಗೂ ಮಾದರಿಯಾಗಿದೆ ಎಂದು ತಹಶೀಲ್ದಾರ್ ಕೆ . ವಿಜಯ್ ಕುಮಾರ್ ಹೇಳಿದರು.

ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸತ್ಯ ಮತ್ತು ಅಹಿಂಸಾ ಮಾರ್ಗ ದಿಂದಲೇ ದೇಶಕ್ಕೆ ಸ್ವತಂತ್ರವನ್ನು ತಂದು ಕೊಟ್ಟರು. ಬ್ರಿಟಿಷರನ್ನು ದೇಶದಿಂದ ತೊಲಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸತ್ಯವೇ ಅವರ ಜೀವನದುದ್ದಕ್ಕೂ ಅನುಸರಿಸುತ್ತಾ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಸತ್ಯದ ಹಾದಿಯಲ್ಲಿ ನಡರದರೆ ಎಂದೆಂದಿಗೂ ಜಯ ಸಿಗುತ್ತದೆ ಎಂಬುದಕ್ಕೆ ಗಾಂಧೀಜಿಯವರ ನಡುಯೇ ಸಾಕ್ಷಿಯಾಗಿದೆ ಎಂದರು.

ಇಂದಿನ ಸಮುದಾಯದ ವಿದ್ಯಾರ್ಥಿಗಳು, ಯುವಕರು ಗಾಂಧೀಜಿಯವರ ಆದರ್ಶವನ್ನು ಪಾಲಿಸಿ ಜೀವನದಲ್ಲಿ ಅಳವಡಿಸಿಕೊಂಡು ಹಾಗೂ ದೇಶದ ಅಭಿವೃದ್ಧಿಗೆ ಪಣತೊಡಬೇಕು ಎಂದು  ಹೇಳಿದರು.

ಉಪ ತಹಸಿಲ್ದಾರ್ ಪ್ರವೀಣ್ ಕುಮಾರ್, ಅಶೋಕ್ ಸೊನ್ನದ, ರವಿನಾಯಕ್ ಚನ್ನಕೇಶವ, ಮಂಜುನಾಥ, ಫಕ್ರುದ್ದೀನ್, ರವಿಕುಮಾರ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ