ಸಮಯ ಪಾಲನೆ ಮರೆತ ಸಿಡಿಪಿಒ ಸಿಬ್ಬಂದಿ

ಕ್ರಾಂತಿವಾಣಿ ವಾರ್ತೆ ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಸರಕಾರದ ನಿಯಮ ಅನುಸಾರ ಕರ್ತವ್ಯಕ್ಕೆ ಬರುವುದನ್ನು ಸಿಬ್ಬಂದಿಗಳು ಮರೆತಿದ್ದಾರೆ.

ಬೇಲಿಯೇ ಎಂದು ಹೊಲ ಮೇದಂತೆ ಎಂಬ ಗಾದೆಯ ಮಾತಿನಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ವೇಳಗೆ ಬಾರದೆ ಮನಸ್ಸಿಗೆ ಬಂದಂತೆ ಬರುತ್ತಿದ್ದಾರೆ. ಇದರಿಂದ ಸಿಬ್ಬಂದಿಗಳು ಕೂಡ ಅವರ ಹಾದಿಯಲ್ಲಿ ಅನುಸರಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದು ಅಲ್ಲಿ ಇಲ್ಲಿ ಎಲ್ಲೂ ನಡೆದ ಘಟನೆಯಲ್ಲ .. ಸಾಗರ ನಾಡಿನ ಸೂರರ ಎಂದೇ ಪ್ರಕತಿ ಪಡೆದ ಸುರಪುರ ನಗರದ ಕೇಂದ್ರದಲ್ಲಿರುವ ಸಿಡಿಪಿಒ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂ ಇಲ್ಲದಿರುವುದು ತಾಲೂಕಿನ ಜನತೆಯಲ್ಲಿ ಆಶ್ಚರ್ಯವನ್ನು ಉಂಟು ಮಾಡಿದೆ. ಗ್ರಾಮೀಣ ಪ್ರದೇಶದಿಂದ ಹಲವಾರು ಕಾರ್ಯಕ್ರಮ ಕಾರ್ಯಗಳ ನಿಮಿತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯತ್ತ ಭಾವಿಸಿ, ಜನರು ಬಂದಾಗ ಖಾಲಿ ಖಾಲಿ ಕುರ್ಚಿಗಳು ದರ್ಶನವಾಗಿರುವುದು ಜನರಲ್ಲಿ ಬೇಸರವನ್ನು ಉಂಟುಮಾಡಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುಪರ್ದಿಗೆ ನೀಡಿರುವುದರಿಂದ ಹಲವಾರು ಜನರು ತಮ್ಮ ಖಾತೆಗೆ ಹಣ ಬೀಳದಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೆ ಬಂದರೆ ಯಾವೊಬ್ಬ ಅಧಿಕಾರಿಯು ಬೆಳಗ್ಗೆ 11 ಗಂಟೆಯಾದರೂ

ಇಲ್ಲದೆ ಇರುವುದು ಬಂದ ದಾರಿಗೆ ಸುಂಕ ಇಲ್ಲದಂತೆ ಮರಳುತ್ತಿದಗದಾರೆ. ಕೂಡಲೇ ಜಿಲ್ಲಾಧಿಕಾರಿಗಳು ತಾಲೂಕಿನ ಸಿಡಿಪಿಒ  ಮತ್ತು ಕಚೇರಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡು ಸಾರ್ವಜನಿಕರ ಕಾರ್ಯಗಳನ್ನು ಮಾಡಿಕೊಡಬೇಕೆಂದು ದಸಂಸ ಜಿಲ್ಲಾ ಸಂಚಾಲಕ  ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ