ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯ ಮತ್ತು ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿಭೇದಿಯಿAದ ಅಸ್ವಸ್ಥಗೊಂಡಿದ್ದು, ಜಿಲ್ಲಾಽಕಾರಿ ಮತ್ತು ಜಿಪಂ ಕಾರ್ಯ ನಿರ್ವಹಣಾಽಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಸಂಸ (ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿತ) ಬಣದಿಂದ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ, ತಾಲೂಕಿನ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಕಲುಷಿತ ನೀರು ಸೇವನೆಯಿಂದ ವಾಂತಿಭೇದಿಗೆ ಒಳಗಾಗಿದ್ದಾರೆ. ಇನ್ನು ಕೆಲವರು ಗುಣಮುಖರಾಗಿಲ್ಲ. ಪೋಷಕರು ಬಡವರಾಗಿರುವುದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಪರಿಸ್ಥಿತಿಯೂ ಇದೇ ಹಾಗಿದೆ. ಜಿಲ್ಲಾಽಕಾರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷ ಸರಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನ ಜಾರಿಗೊಳಿಸಿದರೂ ಅಽಕಾರಿಗಳ ನಿರ್ಲಕ್ಷ ್ಯದಿಂದ ದುರ್ಘಟನೆಗೆ ಕಾರಣವಾಗಿದೆ. ಕಲುಷಿತ ನೀರು ಸೇವನೆಯಿಂದ ವಾಂತಿಭೇದಿ ಪ್ರಕರಣವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಜನರಲ್ಲಿ ಶುದ್ಧ ನೀರು ಕುಡಿಯುವಂತೆ ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ರಮೇಶ ಪೂಜಾರಿ, ನಾಗರಾಜ ಹೋಕಳಿ, ಹಣಮಂತ ಅಮ್ಮಾಪುರ, ನಾಗು ಗೋಗಿಕೇರಾ, ಸದಾಶಿವ ಬೊಮ್ಮನಹಳ್ಳಿ, ಶಿವಣ್ಣ ನಾಗರಾಳ, ಬಸವರಾಜ ನಾಟೇಕರ, ಸಾಯಬಣ್ಣ ಎಂಟಮನ, ಸೋಮು ಬಂದೊಡ್ಡಿ, ಜಿಂದಾವಲಿ, ಹಮಂತ ಬೋನಾಳ, ಚಂದ್ರು ನಡಿಗೇರಿ, ಭೀಮಣ್ಣ ಸೇರಿದಂತೆ ಇತರರಿದ್ದರು.