ಪಿಹೆಚ್‌ಡಿ ದೂರ ಶಿಕ್ಷಣ ಪ್ರಮಾಣ ಪತ್ರ ಪರಿಗಣಿಸದಂತೆ ಆಗ್ರಹ

ಕ್ರಾಂತಿವಾಣಿ ವಾರ್ತೆ  ಸುರಪುರ: ಅತಿಥಿ ಉಪನ್ಯಾಸಕರ ಆಯ್ಕೆ ವೇಳೆ ಪಿಹೆಚ್‌ಡಿ ದೂರ ಶಿಕ್ಷಣ ನಕಲಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಬಾರದು ಹಾಗೂ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉದ್ಯೋಗಕ್ಕಾಗಿ ಶಿಕ್ಷಣವಂತರೇ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದರಿಂದ ಅರ್ಹ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ ಶಿಕ್ಷಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಪ್ರಾಮಾಣಿಕವಾಗಿ ಸಂಶೋಧನ ಮಂಡಿಸಿ ಪದವಿ ಪಡೆದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ನಕಲಿ ಪ್ರಮಾಣ ಪತ್ರಗಳನ್ನು ಹೊರ ರಾಜ್ಯದ ದೂರ ಶಿಕ್ಷಣ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರು.ಗಳು ನೀಡಿ ಪಿಹೆಚ್‌ಡಿ ಪದವಿ ಕೊಂಡು ತಂದು ವಾಮಮಾರ್ಗದ ಮೂಲಕ ಅತಿಥಿ ಉಪನ್ಯಾಸಕ ಹುದ್ದೆ ಮುಂದಾಗುತ್ತಿದ್ದಾರೆ. ಇಂತವರಿಂದ ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆ ನಿರೀಕ್ಷಿಸಿಲು ಸಾಧ್ಯವಿಲ್ಲ. ದೂರ ಶಿಕ್ಷಣದಿಂದ ಪಿಹೆಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ದೂರವಿಟ್ಟು ನೈಜತೆ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಅತಿಥಿ ಉಪನ್ಯಾಸಕರ ಜತೆಗೂಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ನಾಯಕ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ನಾಯಕ , ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಸಚಿನ ಕುಮಾರ ನಾಯಕ, ಚಂದ್ರು ಪ್ರಧಾನಿ, ಗೋಪಾಲ, ಶಂಕರ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ