ಬನಶಂಕರಿ ದೇಗುಲದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ದೇಣಿಗೆ

ಕ್ರಾಂತಿವಾಣಿ ವಾರ್ತೆ ಸುರಪುರ. ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಕಾಮಗಾರಿಯ ಸಂಪೂರ್ಣ ಅಂದಾಜು ಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ದಾಖಲಾತಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲಿಸಿರುತ್ತಾರೆ.

ಧರ್ಮಾದಿಕಾರಿಗಳು ಈ ಮನವಿಯನ್ನು ಸ್ವೀಕರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸುಮಾರು 2 ಲಕ್ಷ ರೂ. ಮೊತ್ತದ ಸಹಾಯಧನವನ್ನು ಮಂಜೂರು ಮಾಡಿದ್ದಾರೆ. ಈ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಾದಗಿರಿ ಜಿಲ್ಲೆಯ ನಿರ್ದೇಶಕ ಕಮಲಾಕ್ಷ ಶ್ರೀ ಬನಶಂಕರಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಿಗೆ ಡಿ.ಡಿಯನ್ನು ಹಸ್ತಾಂತರಿಸಿದರು.

ರಾಜ್ಯದ ಹಲವಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಪೂಜ್ಯ ಧರ್ಮಾಧಿಕಾರಿಗಳು ಸಹಾಯಧನ ನೀಡುತ್ತಿದ್ದಾರೆ. ಅನುದಾನಿತ ಶಾಲೆಗಳಿಗೆ ಶಿಕ್ಷಕರ ಕೊರತೆ ಇದ್ದರೆ ಜ್ಞಾನದೀಪ ಶಿಕ್ಷಕರ ಸೌಲಭ್ಯ ನೀಡುತ್ತಿದ್ದಾರೆ. ಹಿಂದೂ ರುದ್ರಭೂಮಿಗೆ ಪೂರಕವಾಗಿ ಸಹಾಯ ನೀಡುತ್ತಿದ್ದಾರೆ. ಹೀಗೆ ಸಮಾಜದ ಏಳಿಗೆಗೆ ಧರ್ಮಸ್ಥಳದಿಂದ ಆರ್ಥಿಕ ಸಹಕಾರ ನೀಡುತ್ತಿದ್ದಾರೆ ಎಂದು ಸಂಘದ ಜಿಲ್ಲಾ ನಿರ್ದೇಶಕ ಕಮಾಲಕ್ಷ ತಿಳಿಸಿದರು.

ದೇವಸ್ಥಾನದ ಅಧ್ಯಕ್ಷರಾದ ಮಹಾಂತೇಶ್. ಕಾರ್ಯದರ್ಶಿಗಳಾದ ಆನಂದ್ ಗೋಗಿ. ಸುರೇಶ್. ಸಮಿತಿಯ ಎಲ್ಲ ಸದಸ್ಯರು ಇದ್ದರು. ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಸಂತೋಷ್.ಎ.ಎಸ್ , ವಲಯದ ಮೇಲ್ವಿಚಾರಕರಾದ ಅನೀಲ್ ಕೆಂಭಾವಿ .ಸೇವಾಪ್ರತಿನಿಧಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ