ವಾರಬಂದಿ ರದ್ಧತಿಗಾಗಿ ಸಿಎಂಗೆ ಶಾಸಕ ವೆಂಕಟಪ್ಪ ನಾಯಕ ಮನವರಿಕೆ

ವರದಿ: ನಾಗರಾಜ್ ನ್ಯಾಮತಿ

ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಜತೆಯೂ ಮಾತುಕತೆ

ಕ್ರಾಂತಿವಾಣಿ ವಾರ್ತೆ ಸುರಪುರ: ಹುಣಸಗಿ ಮತ್ತು ಸುರಪುರ ಅವಳಿ ತಾಲೂಕಿನ ರೈತರ ಮುಂಗಾರು ಹಂಗಾಮಿನ ಬೆಳೆಗೆ ವಾರಬಂಧಿ ಪದ್ಧತಿಯಿಂದ ವಿಪರೀತ ಸಮಸ್ಯೆ ಆಗುತ್ತಿದ್ದು, ವಾರಬಂಧಿ ರದ್ಧತಿಗೆ ಒತ್ತಾಯಿಸಿ ವುದನ್ನು ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬೆಂಗಳೂರಿನಲ್ಲಿ ಮನವರಿಕೆ ಮಾಡಿಕೊಟ್ಟರು.


ಬೆಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಅಂದಿನ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಮಡು ೧೪ ದಿನ ಚಾಲು ಮತ್ತು ೧೦ ದಿನ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಆಲಮಟ್ಟಿ ಜಲಾಯಶ ಮತ್ತು ನಾರಾಯಣಪುರ ಜಲಾಶಯಗಳೆರಡು ತುಂಬಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಹೆಚ್ಚಿದೆ. ರೈತರು ಬೆಳೆದ ಬೆಳೆಗಳು ಕೈಗೆ ಸೇರಲು ಚಾಲು ಬಂದ್ ರದ್ದುಗೊಳಿಸಿ ನಿರಂತರವಾಗಿ ನೀರು ಹರಿಸಬೇಕು ಎಂದು ಸಿಎಂ ಅವರ ಹತ್ತಿರ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.
ಕೃಷ್ಣ ಭಾಗ್ಯ ಜಲ ಮಂಡಳಿ ಅಧಿಕಾರಿಗಳ ಮಾಹಿತಿ ಪ್ರಕಾರ ಅಕ್ಟೋಬರ್ ಮೂರು ತಿಂಗಳು ಮಳೆ ಬರುವ ಸಂಭವವಿದೆ. ಆದ್ದರಿಂದ ರೈತರ ಸಮಸ್ಯೆಗಳನ್ನು ಪರಿಹರಿಸಲು ನೀರು ಹರಿಸಲೇಬೇಕು ಎಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಫಲವಾಗಿ ಮುಖ್ಯಮಂತ್ರಿಗಳು ರೈತರ ಬೆಳೆಗೆ ತೊಂದರೆ ಆಗದೆ ಹಾಗೆ ನೀರಿನ ಸಮಸ್ಯೆ ಪರಿಹರಿಸಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ಅವರಿಗೆ ಸೂಚಿಸಿದರು.
ಇದಾದ ಬಳಿಕ ಶಾಸಕರು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ನೀರು ಕಾಲುವೆಗಳಿಗೆ ಹರಿಸುವಂತೆ ಮನವರಿಕೆ ಮಾಡಿಕೊಟ್ಟರು.
ಕಾಂಗ್ರೆಸ್ ಮುಖಂಡ ಯಂಕೋಬ ಸಾಹುಕಾರ ಮಂಗಳೂರು ಹಾಗೂ ಇತರರಿದ್ದರು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ