ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿ: ಬಸವರಾಜ ಸಜ್ಜನ

ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಕಿರಿಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳ ಎರಡನೇ ದಿನದ ತರಬೇತಿಗೆ ತಾಪಂ ಇಒ ಬಸವರಾಜ ಸಜ್ಜನ್ ಚಾಲನೆ ನೀಡಿದರು.


ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಹಾಗೂ 15ನೇ ಯೋಜನೆಗೆ ಸಂಬಂಧ ಪಟ್ಟಂತೆ 2023 24ನೇ ಸಾಲಿನ ಕಿರಿಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ತುಂಬ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ಶಿಬಿರಾರ್ಥಿಗಳು ತರಬೇತಿಯಲ್ಲಿ ಪಡೆದುಕೊಂಡಿರುವ ಜ್ಞಾನವನ್ನು ಕಾರ್ಯದಲ್ಲಿ ವ್ಯಕ್ತವಾಗಬೇಕು. ಆ ಮೂಲಕ ತಮ್ಮಲ್ಲಿರುವ ಸಾಮರ್ಥ್ಯವನ್ನು ಹೊರಹಾಕಬೇಕು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಾರದರ್ಶಕತೆಯಿಂದ ಹಾಗೂ ಉತ್ತರದಾಯಿತ್ವದ ಮೌಲಗಳ ಕುರಿತು ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಸವಿವರವಾಗಿ ತಿಳಿಸಿದರು.
ಶಿಬಿರಾರ್ಥಿಗಳು ತಮ್ಮಲ್ಲಿದ್ದ ಸಮಸ್ಯೆಗಳನ್ನು ವ್ಯಕ್ತಪಡಿಸಿ ತಾಪಂ ಇಒ ಬಸವರಾಜ ಸಜ್ಜನ ಅವರಿಂದ ಉತ್ತರ ಪಡೆದುಕೊಂಡರು.

ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿಗಳಾದ ನಾಗರಾಜ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಿವಪುತ್ರ ಹುಲಕಲ್, ಸಿದ್ದಲಿಂಗಪ್ಪ ಗೌಡ ಇತರರು ಸಿಬ್ಬಂದಿಗಳು ಹಾಜರಿದ್ದರು

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ