ಹವಮಾನಕ್ಕೆ ಒಗ್ಗಿಕೊಳ್ಳುವ ಕೃಷಿಗೆ ರೈತರು ಮುಂದಾಗಲಿ: ಶೋಭಾ ಕರಂದ್ಲಾಜೆ
ವರದಿ: ನಾಗರಾಜ್ ನ್ಯಾಮತಿ
ಆಡಳಿತ ಭವನ ಮತ್ತು ರೈತರ ವಸತಿ ನಿಲಯಕ್ಕೆ ಚಾಲನೆ ಕ್ರಾಂತಿವಾಣಿ ವಾರ್ತೆ ಸುರಪುರ: ದೇಶಾದ್ಯಂತ ಇರುವ ಕೃಷಿ ವಿಜ್ಞಾನಿಗಳು ಹೊಸ ಹೊಸ ತಂತ್ರಜ್ಞಾನ, ಬದಲಾವಣೆ, ಸಂಶೋಧನೆ, ಯಂತ್ರಗಳ ಅವಿಷ್ಕಾರ, ತಳಿಗಳ ಕುರಿತು ರೈತರಿಗೆ ತರಬೇತಿ ನೀಡಬೇಕು. ಇದರಿಂದ ರೈತರ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಸಮೀಪದ ಕವಡಿಮಟ್ಟಿ ಜಿಲ್ಲಾ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ರಾಯಚೂರಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಹಾಗೂ ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕವಡಿಮಟ್ಟಿ (ಯಾದಗಿರಿ) ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಸಹಾಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಡಳಿತ ಭವನ ಮತ್ತು ರೈತರ ವಸತಿ ನಿಲಯದ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, , ತರಬೇತಿ ಪಡೆಯುವ ರೈತರಿಗೆ ವಸತಿ ನಿಲಯ ಸ್ಥಾಪಿಸಲಾಗಿದೆ ಎಂದರು.
ಆಡಳಿತ ಭವನ ೮೦ಲಕ್ಷ ರೂ., ರೈತರ ವಸತಿ ನಿಲಯ ೭೦ ಲಕ್ಷ ರೂ. ವೆಚ್ಚದಲ್ಲಿ ದೇಶಾದ್ಯಂತ ಉದ್ಘಾಟಿಸಲಾಗುತ್ತಿದೆ. ಇದು ಆರಂಭಕ್ಕೆ ಸೀಮಿತವಾಗಬಾರದು. ಕೃಷಿ ವಿಜ್ಞಾನಿಗಳು ದೇಶಾದ್ಯಂತ ಸಂಶೋಧನೆ ನಡೆಸುವಂತಾಗಬೇಕು. ತಳಿ, ಯಂತ್ರಗಳ ಬಳಕೆ, ಕೀಟಗಳು ಮತ್ತಿತರ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲು ಸದಾವಕಾಶವಾಗಿದೆ. ಇದರ ಲಾಭವನ್ನು ಎಷ್ಟು ರೈತರು ಪಡೆಯುತ್ತಾರೆ ಎಂಬುದು ಮುಖ್ಯ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಯಚೂರು ವಿಶ್ವ ವಿದ್ಯಾಲಯಗಳಲ್ಲಿರು ಸೌಲಭ್ಯಗಳು ಜನರಿಗೆ ತಿಳಿಯುವಂತಾಗಬೇಕು. ಅದಕ್ಕಾಗಿ ಜಿಲ್ಲಾ ಪಂಚಾಯತ್ ಸಿಇಒ ನೂತನ ತಂತ್ರಜ್ಞಾನಗಳನ್ನು ಒಳಗೊಂಡ ಹ್ಯಾಂಡ್ ಬಾಲ್‌ಗಳನ್ನು ಗ್ರಾಪಂನಲ್ಲಿ ಅಂಟಿಸಲು ಸೂಚಿಸಬೇಕು. ಇಲ್ಲಿನ ಕೃಷಿ ಸಂಶೋಧನಾ ಕೇಂದ್ರವೂ ೫ ಲಕ್ಷ ಹೆಕ್ಟೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಹೆಮ್ಮೆಯ ವಿಷಯವಾಗಿದೆ ಎಂದರು.
ಚಿಕ್ಕ ರೈತರು ಈಗಿನ ಕಾಲಘಟ್ಟದಲ್ಲಿ ಎತ್ತುಗಳನ್ನು ಸಾಕಲು ಸಾಧ್ಯವಿಲ್ಲ. ಅದಕ್ಕಾಗಿ ಕೇಂದ್ರ ಸರಕಾರವೂ ಪ್ರತಿ ಹೋಬಳಿಯಲ್ಲಿ ಯಂತ್ರೋಪಕರಗಳನ್ನು ರೈತರಿಗೆ ಬಾಡಿಗೆ ದರದಲ್ಲಿ ಕೊಡುವ ಕೆಲಸ ಮಾಡುವ ಅಗತ್ಯವಿದೆ. ಇದಕ್ಕಾಗಿ ಕಸ್ಟಮರ್ ಇನ್‌ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ರೈತರಿಗೆ ಮಳೆ ಬಂದರೂ ಕಷ್ಟ. ಮಳೆ ಬಾರದಿದ್ದರೂ ಕಷ್ಟ. ಅದಕ್ಕಾಗಿ ಹವಮಾನವನ್ನು ಅರಿತು ಕೃಷಿಕರು ಕೃಷಿ ಮಾಡಲು ಮುಂದಾಗಬೇಕು. ಹವಮಾನಕ್ಕೆ ಅನುಗುಣವಾಗಿ ರೈತರು ಬಿತ್ತನೆ ಮಾಡಲು ೧೨೦೦ ಬೀಜಗಳನ್ನು ಸಂಸ್ಕಾರಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ರಾಜಸ್ಥಾನದ ಕುರಿ ತಳಿಯೂ ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುತ್ತದೆ. ಇಂಥ ತಳಿಗಳನ್ನು ಸಾಕುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ. ಕಾಲಕಾಲಕ್ಕೆ ರೈತರು ಕೃಷಿಗೆ ಸಂಬAಧಿಸಿದAತೆ ಶಿಕ್ಷಣ ತರಬೇತಿ ಪಡೆದುಕೊಳ್ಳಬೇಕು. ಅದಕ್ಕಾಗಿ ರೈತರ ಭವನ ಇನ್ಮುಂದೆ ನಿಮಗೆ ಲಾಭವಾಗಲಿದೆ. ರೈತರು ಔಷಧ ಸಿಂಪಡಿಸಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಡ್ರೋಣ್ ಮೂಲಕ ಔಷಧ ಸಿಂಪಡಿಸಬಹುದು. ಪ್ರಸ್ತುತ ಪ್ರಧಾನಿಯವರು ೧.೨೫ ಲಕ್ಷ ಸಾವಿರ ಕೋಟಿ ಕೃಷಿ ಬಜೆಟ್‌ಅನ್ನು ಮಂಡಿಸಿದ್ದಾರೆ ಕೃಷಿಗೆ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂದರು.
ಭಾರತವೂ ಅಮೆರಿಕದಿಂದ ಗೋಧಿಯನ್ನು ರಫ್ತು ಮಾಡಿಕೊಂಡು ಪುಡಿ ಪುಡಿ ಸಜಕಾ ಕೊಡುತ್ತಿದ್ದರು. ಇದು ನನಗೆ ಇನ್ನೂ ನೆನಪಿದೆ. ಭಾರತದಲ್ಲಿ ಹಸಿರೀಕರಣ ನಂತರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ದೇ ಅಲ್ಲದೆ ಹೊರ ದೇಶಕ್ಕೆ ನಾವು ಬೆಳೆಯುವಂತ ಹಣ್ಣು, ತರಕಾರಿ, ಹಾಲು, ಮಾಂಸ ರಫ್ತು ಮಾಡುತ್ತಿದ್ದೇವೆ. ರಾಸಾಯನಿಕ ಪದಾರ್ಥ ಪರೀಕ್ಷೆಯಲ್ಲಿ ಪಾಸಾದರೆ ರಫ್ತು ಮಾಡಲು ಸಾಧ್ಯವಾಗುತ್ತದೆ. ರಾಸಾಯನಿಕವನ್ನು ಅಗತ್ಯಕ್ಕೆ ತಕ್ಕಂತೆ ಬೆಳೆಸಬೇಕು ಎಂದು ತಿಳಿಸಿದರು.
ರೈತರು ಬೆಳೆಸುವ ವಸ್ತುಗಳನ್ನು ರಫ್ತು ಮಾಡಿದರೆ ಉತ್ತಮ ಆದಾಯ ಪಡೆಯಬಹುದು. ಈಗ ಪ್ರಸ್ತುತ ತರಕಾರಿ, ಹಣ್ಣು ರಫ್ತು ಮಾಡುವ ರಾಷ್ಟ್ರಗಳಲ್ಲಿ ಎಂಟನೇ ಸ್ಥಾನ ಪಡೆದಿದೆ. ರೈತ ಸಂಶೋಧನಾ ಕೇಂದ್ರಗಳಿAದ ಮಾಹಿತಿ ಪಡೆದು ದವಸ ಧಾನ್ಯಗಳನ್ನು ಬೆಳೆದು ಹೊರ ದೇಶಕ್ಕೆ ರಫ್ತು ಮಾಡುವಂತಹ ಕಲೆಯನ್ನು ಕಲಿತುಕೊಳ್ಳಬೇಕು ಎಂದರು.
ಯಾದಗಿರಿ ಜಿಲ್ಲೆಯ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸ್ವಾವಲಂಬಿ ಜಿಲ್ಲೆಗಾಗಿ ಪ್ರಾಜೆಕ್ಟ್ ಮಾಡಿ ರಾಜ್ಯಕ್ಕೆ ಕಳಿಸಿದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು ೧ ಲಕ್ಷ ಕೋಟಿ ರೂ. ಬಜೆಟ್ ಅನ್ನು ಎತ್ತಿಟ್ಟಿದೆ. ಸ್ವಾವಲಂಬಿ ಜಿಲ್ಲೆಗೆ ಬೇಕಾದಂತಹ ಪೂರಕ ವ್ಯವಸ್ಥೆ ಮಾಡಿಕೊಡುತ್ತದೆ ಎಂದರು. ಇಂಡೋನೇಷಿಯಾದಿAದ ಪಾಮೈಲ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದನ್ನೇ ದೊಡ್ಡ ದೊಡ್ಡ ಕಂಪನಿಗಳು ಬೇರೆ ಬೇರೆ ಹೆಸರಿನಲ್ಲಿ ಅಡುಗೆ ಎಣ್ಣೆಯನ್ನು ಮಾರಾಟ ಮಾಡುತ್ತಿವೆ. ಒಂದು ವರ್ಷಕ್ಕೆ ೧.೫೦ ಲಕ್ಷ ಕೋಟಿ ರೂ ಮೌಲ್ಯದ ಎಣ್ಣೆ ತರಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲೇ ಅಡುಗೆ ಎಣ್ಣೆಯನ್ನು ತಯಾರಿಸಿಕೊಳ್ಳುವಂತಹ ಮಾರ್ಗವನ್ನು ಕಂಡುಕೊಳ್ಳಬೇಕು. ಆ ಶಕ್ತಿ ನಮ್ಮಲ್ಲಿ ಬರಬೇಕು ಎಂದರು.
–ಕೋಟ್ –
ಬೀಜ ಖರೀದಿಯಲ್ಲಿ ರೈತರು ಮೋಸ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು. ಯಾವುದೇ ಕಂಪನಿಯು ಬೀಜ ಮಾರಾಟ ಮಾಡಿದರೆ ಅದರ ಕ್ಯೂ ಆರ್ ಕೋಡ್ ಅನ್ನು ನಮೂದಿಸಬೇಕು. ಆಗ ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಬಹುದು.
ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ.