೨೮ ವರ್ಷಗಳ ಕಾಲ ಜ್ಞಾನ ದಾಸೋಹ ಕಾರ್ಯಕ್ರಮ | ಮಾತೋಶ್ರೀ ದೇವೆಕ್ಕೆಮ್ಮನ ದೈವದ ಪುತ್ರ | ಕಳಚಿದ ಆಧ್ಯಾತ್ಮ ಕೊಂಡಿ
ಶಹಾಪುರ: ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪುಣ್ಯಕ್ಷೇತ್ರ, ತೀರ್ಥಕ್ಷೇತ್ರಗಳನ್ನು ಸುತ್ತಾಡಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಪಿಲೇಶ್ವರ ಕೊಳ್ಳದಲ್ಲಿ ತಪವಗೈದು ಸಗರ ನಾಡಿನ ಪುಣ್ಯಭೂಮಿಯ ದೋರನಹಳ್ಳಿ ಗ್ರಾಮವನ್ನು ತನ್ನ ಕರ್ಮಸ್ಥಾನವನ್ನಾಗಿ ಮಾಡಿಕೊಂಡ ಮಾಹಾಯೋಗಿ, ಮಾತೋಶ್ರೀ ದೇವಕ್ಯಮ್ಮನವರ ವರಪುತ್ರ ಪರಮಪೂಜ್ಯ ರಮಾನಂದ ಅವಧೂತರು ಭಕ್ತರನ್ನುದ್ದರಿಸಲು ಬಂದ ಮಹಾನ್ ಸಂತ. ಅಕ್ಟೋಬರ್12 ರಂದು ಅಪಾರ ಭಕ್ತ ವೃಂದವನ್ನು ಕತ್ತಲಲ್ಲಿ ನಲ್ಲಿಸಿ ಸೂರ್ಯನಂತೆ ಮರೆಯಾಗಿ ಹೋದರು.ಸರಳ ಸಾತ್ವಿಕ ಸಂತನನ್ನು ಕಳೆದುಕೊಂಡ ದೋರನಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಶ್ರೀಗಳ ಪೂರ್ವಾಶ್ರಮ.
ಬೆಳಗಾವಿ ಜಿಲ್ಲೆಯ ರಾಮದುರ್ಗದ ದೇವಾಂಗ ಸಮುದಾಯದ ಸಾತ್ವಿಕ ದಂಪತಿಗಳಾದ ಲೋಕಪ್ಪ ಸೂರಮ್ಮ ದಂಪತಿಗಳ ಉದರದಲ್ಲಿ 1936 ರಲ್ಲಿ ಜನಿಸಿದ ಇವರ ಮೂಲ ಹೆಸರು ರಾಮಚಂದ್ರ ಇವರ ಬಾಲ್ಯ ಜೀವನ ಮತ್ತು ಪ್ರಾಥಮಿಕ ಶಿಕ್ಷಣ ರಾಮದುರ್ಗದಲ್ಲಿ ಮುಗಿಸಿದರು.
ವೈವಾಹಿಕ ಜೀವನ.
ಇವರು ಅಕ್ಕನ ಮಗಳಾದ ಹೂವಮ್ಮ ಎನ್ನುವ ಸಾಧ್ವಿಯನ್ನು 1952 ಮದುವೆಯಾಗಿ ಚಿಕ್ಕದಾಗಿ ಸಂಸಾರದಲ್ಲಿ ದಾಂಪತ್ಯದ ಬದುಕಿನಲ್ಲಿ ನಾರಾಯಣ, ಸಿದ್ದರಾಮ ಮತ್ತು ರುಕ್ಮಿಣಿ ಎನ್ನುವ ಮೂರು ಮಕ್ಕಳನ್ನು ಪಡೆದು ಸಂಸಾರ ನೌಕೆಯಲ್ಲಿ ಪ್ರಯಾಣ ಬೆಳೆಸಿ, ರಾಮಚಂದ್ರರಿಗೆ ಚಿಕ್ಕಂದಿನಿಂದಲೂ ದೈವಿಭಕ್ತಿ ಸಾಧು ಸಂತರನ್ನು ಕಂಡರೆ ಇನ್ನಿಲ್ಲದ ಪ್ರೀತಿ. 15 ವರ್ಷ ದಂಪತ್ಯ ಜೀವನ ನಡೆಸಿ ಇವರ ಮನಸ್ಸು ದಿನದಿಂದ ದಿನಕ್ಕೆ ಆಧ್ಯಾತ್ಮಿಕ ಕಡೆಗೆ ವಾಲುತ್ತಿತ್ತು. ಇವರು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಗಳು. ಸಂಸಾರದ ತೊರೆದು ದೇಶ ಸಂಚಾರಿಗಳಾಗಿ ನಡೆದವರು.
ಗುರು ದೀಕ್ಷೆ.
ಧಾರವಾಡ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ಹೊಳೆಮಠದ ಪೀಠಾಧಿಪತಿ ಪೂಜ್ಯ ಬಸವರಾಜ ಮುಪ್ಪಿನಾರ್ಯ ಪರಮಹಂಸರ ಬಳಿ ಇದೆ ಗುರು ದೀಕ್ಷೆ ಪಡೆದು ಗುರುಗಳ ಅಪ್ಪಣೆಯಂತೆ ಅಲ್ಲಿಂದ ಪುಣ್ಯಕ್ಷೇತ್ರಗಳಾದ ಓಂಕಾರ, ಮಹಾಬಲೇಶ್ವರ, ತ್ರಿಯಂಬಕೇಶ್ವರ, ಗೌತಮತಟೆ, ಹರಿದ್ವಾರ, ಋಷಿಕೇಶ, ಕಾಶಿ, ಕೇದಾರ, ನಾಸಿಕ, ಶ್ರೀಶೈಲ, ತಿರುಪತಿ, ರಾಮೇಶ್ವರ, ಗೋಕರ್ಣ, ಧರ್ಮಸ್ಥಳ ಹಾಗೂ ಸುಬ್ರಮಣ್ಯ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳ ದರೀಶನ ಪಡೆದರು. ಇವರಲ್ಲಿನ ಆಧ್ಯಾತ್ಮಿಕ ಆತ್ಮ ದಿನದಿಂದ ದಿನಕ್ಕೆ ಜಾಗೃತಗೊಂಡು ಪ್ರಕಾಶಮಾನವಾಗಿ ಗೋಚರವಾಗ ತೊಡಗಿತ್ತು.
ಅನುಷ್ಠಾನ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಪಿಲೇಶ್ವರ ಕೊಳ್ಳದಲ್ಲಿ ಕಠಿಣ ಅನುಷ್ಠಾನ ಮಾಡುವ ಮೂಲಕ ಆತ್ಮ ಶುದ್ದಿ ಮತ್ತು ಸಿದ್ದಿ ಸಾಧಿಸಿ ಕೊಂಡು ಸಂಚರಿಸುತ್ತಾ ದೋರನಹಳ್ಳಿ ಗ್ರಾಮದ ಹಳ್ಳೆರಾಯ ದೇವಸ್ಥಾನದ ಬಳಿ ಬಿಲ್ವಪತ್ರಿ ಮರದ ಕೆಳಗೆ ಚಿಕ್ಕದೊಂದು ಗುಡಿಸಲ್ಲಿ ವಾಸ.
ಸರಳ ಸಾತ್ವಿಕ ಜೀವನದ ಬೋಧನೆ.
ತನ್ನ ಬಳಿ ಬರುವ ಭಕ್ತರಿಗೆ ಜೀವನ ಬಹಳ ಸರಳ ಇದೆ. ಅದನ್ನು ಜಟಿಲ ಮಾಡಿಕೊಳ್ಳದಿರಿ. ಸರಳ ಜೀವನ ನಡೆಸಿ ಬಸವಾದಿ ಶರಣರು ಅತ್ಯಂತ ಸರಳವಾಗಿ ಬದುಕಿದರು. ನುಡಿದಂತೆ ನಡೆದು ತೋರಿದರು. ಪಾಲಕರ ಸೇವೆ ಮಾಡಬೇಕು. ನೆರೆ ಹೊರೆಯವರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದು ಬೋಧಿಸಿದರು.
ಜ್ಞಾನ ದಾಸೋಹ.
ದೋರನಹಳ್ಳಿಯಲ್ಲಿ ಪ್ರತಿವರ್ಷ ಚಟ್ಟಿ ಅಮವಾಸ್ಯೆಗೆ ನಡೆಯುವ ಜ್ಞಾನದಾಸೋಹ ಕಾರ್ಯಕ್ರಮಕ್ಕೆ ಪರಮಪೂಜ್ಯರನ್ನು ಕರೆಸಿ ಅವರಿಂದ ಜನರಿಗೆ ಆಧ್ಯಾತ್ಮಿಕ ಜೀವನದ ಆತ್ಮಸಾಕ್ಷಾತ್ಕಾರವೆಂದರೆ – ದೇಹ, ಮನಸ್ಸು ಮತ್ತು ಆತ್ಮದಲ್ಲಿ – ನಾವು ದೇವರ ಸರ್ವವ್ಯಾಪಿತ್ವದೊಂದಿಗೆ ಒಂದಾಗಿದ್ದೇವೆ. ಎನ್ನುವ ಸಂದೇಶವನ್ನು ಸಾರುವ ಕೆಲಸ ಮಾಡುತ್ತಿದ್ದರು.
ಸಂಸಾರ ಸಂಕಷ್ಟದಲ್ಲಿ ಸಿಲುಕಿ ನೊಂದು-ಬೆಂದವರಿಗೆ ಸಾಂತ್ವನ ಹೇಳುವ ಆಪದ್ಭಾಂಭಂದವರಾಗಿದ್ದ ರಮಾನಂದ ಅವಧೂತರು, ಪಾರಮಾರ್ಥಿಕ ಚಿಂತನೆಯ ಹಾದಿಯಲ್ಲಿ ಹೊಸದೇನನ್ನೂ ಹೇಳದಿದ್ದರೂ ಸಾಧಕರಿಗೆ ಇವರಬದುಕೇ ಒಂದು ಮಹಾ ಮಾರ್ಗ. ತಪಸ್ಸು ಮತ್ತು ಮಾನವೀಯ ಕರುಣೆಯಿಂದಧರ್ಮ, ಜಾತಿಗಳ ಜಂಜಡಕಿತ್ತೊಗೆದು ದೋರನಹಳ್ಳಿಯನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಿದ ಮಾಹಾಂತರು.
ಜೀವಂತವಿರುವಾಗಲೇ ಸಮಾಧಿ ನಿರ್ಮಾಣ.
ಶ್ರೀ ಸಿದ್ದಾರೂಢ ದೇವಾಲಯ ಕಟ್ಟುವ ವೇಳೆಯೇ ನೆಲಮಾಳಿಗೆಯಲ್ಲಿಯೆ ತಾವು ದೇಹ ತ್ಯಾಗ ಮಾಡಿದಾಗ ಇಲ್ಲೇ ಸಮಾಧಿ ಮಾಡಬೇಕೆನ್ನುವ ಸಂಕಲ್ಪ ದೊಂದಿಗೆ ತಾವು ಜೀವಂತವಿರುವಾಗಲೇ ಸಮಾಧಿಗಾಗಿ ಕೋಣೆಯನ್ನೇನಿರ್ಮಾಣ ಮಾಡಿದ್ದಾರೆ.
ಶ್ರೀಮಠದಲ್ಲಿ ಧಾರ್ಮಿಕ ವಿಧಿಯಂತೆ ಅಂತ್ಯ ಸಂಸ್ಕಾರ.
ಶ್ರೀ ಸಿದ್ಧಾರೂಢ ಮಠದಲ್ಲೆ ಜ್ಞಾನ ದಾಸೋಹ ಸಂತ ರಮಾನಂದ ಅವಧೂತರ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಪೂಜ್ಯರ ಅಂತಿಮ ದರ್ಶನ ಪಡೆದ ಸ್ವಾಮಿಜಿಗಳು ಮತ್ತು ಗಣ್ಯರು
ರಾಮಾನಂದ ಅವಧೂತರ ಪಾರ್ಥಿವ ಶರೀರದ ಅಂತೀಮ ದರ್ಶನವನ್ನು ದೋರನಹಳ್ಳಿ ಚಿಕ್ಕಮಠ ಶಿವಲಿಂಗರಾಜೇAದ್ರ ಶಿವಾಚಾರ್ಯರು, ಅಬ್ಬೇತುಮಕೂರಿನ ಡಾ.ಗಂಗಾಧರ ಶಿವಾಚಾರ್ಯರು, ಸಿದ್ದಾರೂಢ ಮಠ ಭೀ ಗುಡಿಯ ಮಾತೋಶ್ರೀ ಜ್ಞಾನೇಶ್ವರಿದೇವಿ, ಚರಬಸವೇಶ್ವರ ಗದ್ದುಗೆಯ ಬಸವಯ್ಯ ತಾತಾ, ವಿಶ್ವರಾಧ್ಯ ದೇವರು ಚಟ್ನಳ್ಳಿ ಹಾಗೂ ರಾಜಕೀಯ ಮುಖಂಡರುಗಳಾದ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದಗೌಡ ಮಾಲಿಪಾಟೀಲ್, ಶಾಸಕರ ಪುತ್ರ ಪಂಪನಗೌಡ ಪಾಟೀಲ್ ತುನ್ನೂರ್, ಉಮಾರಡ್ಡಿ ನಾಯ್ಕಲ್ ಇತರೆ ಮುಖಂಡರುಗಳು ಅಂತೀಮ ದರ್ಶನ ಪಡೆದರು.
ಪೂಜ್ಯರ ಪರಮ ಭಕ್ತರಾದ ಡಾ.ಚನ್ನಾರಡ್ಡಿ ಪಾಟೀಲ್ ಕಿರದಳ್ಳಿ, ಚಂದ್ರಕಾಂತ್ ಕುಲಕರ್ಣಿ, ಪರಮ ಭಕ್ತರಾದ ನಿವೃತ್ತ ಶಿಕ್ಷಕ ವಿಶ್ವನಾಥ ಡೋಣ್ಣೂರು, ಶರಣಪ್ಪ ದಿಗ್ಗಿ, ರಂಗಪ್ಪ ತಳವಾರ, ರಾಮಣ್ಣ ತೋಟದ್, ಮಹಾದೇವಪ್ಪ ಹುಡೇದ್, ನಾಗಪ್ಪ ಕುಂಬಾರ ನಾಯ್ಕಲ್, ಮರೆಪ್ಪ ಕಸನ್, ಶಿವಶರಣಪ್ಪ ಹತ್ತಿಗುಡೂರು ಸೇರಿದಂತೆ ಇತರರು ಇದ್ದರು.
ಕೋಟ್.
ಸರಳ, ಸಾತ್ವೀಕ ಸನ್ಯಾಸ ಜೀವನ ನಡೆಸಿದವರು ಅವರು ತಮ್ಮ ಭಕ್ತರ ಉದ್ದಾರಕ್ಕಾಗಿ ತುಡಿದ ಜೀವ. ಅವರು ಲಿಂಗೈಕ್ಯರಾದರು ಅವರು ತಮ್ಮನ್ನು ಧ್ಯಾನಿಸುವ ಪ್ರತಿಯೊಬ್ಬ ಭಕ್ತರ ಹೃದಯದಲ್ಲಿ ಜೀವಂತವಿದ್ದಾರೆ”
-ಡಾ.ಗAಗಾಧರ ಶಿವಾಚಾರ್ಯರು ಅಬ್ಬೇತುಮಕೂರ.
“ಹಿರಿಯ ಪೂಜ್ಯರಾದ ರಾಮಾನಂದ ಅವಧೂತರ ಅಗಲಿಕೆ ಭಕ್ತರಿಗಷ್ಟೇ ಅಲ್ಲ ನಮಗೂ ನೋವುಂಟು ಮಾಡಿದೆ. ಅವರ ಮಾರ್ಗದರ್ಶನ ನಮಗೆ ಇನ್ನೂ ಬೇಕಿತ್ತು ಆದರೆ ಅವರಿಲ್ಲದೆ ಗ್ರಾಮ, ನಾವು ತಂದೆಯನ್ನು ಕಳೆದುಕೊಂಡ ಮಕ್ಕಳಂತಾಗಿದ್ದೇವೆ”
-ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ಶ್ರೀ ಶಾಂಭವಿ ಮಾತಾ ಚಿಕ್ಕಮಠ ದೋರನಹಳ್ಳಿ