ಕ್ರಾಂತಿವಾಣಿ ವಾರ್ತೆ ಸುರಪುರ:
ನಗರಕ್ಕೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಮಂಜೂರಾತಿಗೆ ಶ್ರಮಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸುರಪುರ ವಕೀಲರ ನಿಯೋಗವು ಬೆಂಗಳೂರಿನಲ್ಲಿ ಸನ್ಮಾನಿಸಿದರು. ಶಾಸಕರು ಸುರಪುರದಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಮಂಜೂರುಗೊಳಿಸಿದ ಪ್ರಯುಕ್ತ ಸುರಪುರ ವಕೀಲರ ಸಂಘದ ನಿಯೋಗದೊಂದಿಗೆ ಸನ್ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅರವಿಂದಕುಮಾರ, ನಿಂಗಣ್ಣ ಚಿಂಚೋಡಿ, ರಾಮನಗೌಡ ಸುಬೇದಾರ, ದೇವಿಂದ್ರಪ್ಪ ಬೇವಿನಕಟ್ಟಿ, ಯಲ್ಲಪ್ಪ ಹುಲಕಲ್, ರಮಾನಂದ ಕವಲಿ, ಮಲ್ಲಣ್ಣ ಬೋವಿ ಕುಂಬಾರಪೇಟ, ಬಸವರಾಜ ಅನಸೂರ, ವಿ.ಸಿ ಪಾಟೀಲ್, ವ್ಯಾಸರಾಜ್, ಮಂಜುನಾಥ ಉದ್ದಾರ, ಮಂಜುನಾಥ ಗುಡಗುಂಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.