ದೆಹಲಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಶೂರರನಾಡಿನ ಮಣ್ಣು ರವಾನೆ

ವರದಿ: ನಾಗರಾಜ್ ನ್ಯಾಮತಿ

ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆಗೆ ಚಾಲನೆ

ಕ್ರಾಂತಿವಾಣಿ ವಾರ್ತೆ ಸುರಪುರ: ಶೂರರನಾಡಿನ ಮಣ್ಣನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಂದಲೂ ಸಂಗ್ರಹಿಸಿ ತಂದಿರುವುದನ್ನು ದೆಹಲಿಗೆ ರವಾನಿಸಲಾಗುತ್ತದೆ. ಅಲ್ಲಿರುವ ವೀರಯೋಧರ ಸ್ಮಾರಕದ ಪಕ್ಕದಲ್ಲಿ ಇಡೀ ದೇಶದ ಎಲ್ಲಾ ಹಳ್ಳಿಗಳಿಂದ ಬರುವ ಮಣ್ಣನ್ನು ಒದ್ಗೂಡಿಸಿ ಉದ್ಯಾನವನ ನಿರ್ಮಾಣವಾಗುತ್ತದೆ. ಇದರ ನೆರಳು ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುತ್ತದೆ ಎಂದು ತಶೀಲ್ದಾರ್ ಕೆ. ವಿಜಯಕುಮಾರ್ ಹೇಳಿದರು.


ನಗರದ ಶ್ರೀಶರಣಬಸವ ಕೆಂಗುರಿ ವೀರಯೋಧ ವೃತ್ತದಲ್ಲಿ ಬುಧವಾರ ಪ್ರತಿಮೆ ಮಾಲಾರ್ಪಣೆ ಮಾಡಿ ನಂತರ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲೇ ಭಾರತದಲ್ಲಿರುವಮಣ್ಣಿನ ಶ್ರೇಷ್ಠತೆ ಮತ್ತೊಂದು ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. ಮಣ ್ಣಗೆ ತಾಯಿಗೆ ಹೋಲಿಸಲಾಗುತ್ತಿದ್ದು, ಅದಕ್ಕಿಂತ ಮಿಗಿಲಾದದ್ದು ಯಾವುದಿಲ್ಲ. ಭೂತಾಯಿಯನ್ನು ಭಾರತ ಮಾತೆಗೆ ಹೋಲಿಸುತ್ತೇವೆ. ಇಡೀ ಅಖಂಡ ಭಾರತ ಮಣ್ಣನ್ನು ಒಂದೆಡೆದ ಸೇರಿಸಿ ಉದ್ಯಾನವನ ನಿರ್ಮಿಸಲಾಗುವುದು. ದೆಹಲಿಗೆ ಹೋಗಿ ಉದ್ಯಾನವನಕ್ಕೆ ಭೇಟಿ ನೀಡಿದಾಗ ಇದು ನಮ್ಮ ಊರಿನ ಮಣ್ಣು ಇಲ್ಲಿದೆ ಎಂಬ ಸಾರ್ಥಕ ಭಾವನೆ ಮೂಡುತ್ತದೆ. ಇದು ಐಕ್ಯತೆಯ ಸಂಕೇತವಾಗಿದೆ ಎಂದರು.


ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಿ.ಎಸ್. ರಾಥೋಡ್ ಮಾತನಾಡಿ. ಯೋಧರಿಗೆ ಗೌರವ ನೀಡುವುದು ಪ್ರತಿಯೊಬ್ಬರು ಕಲಿಯಬೇಕು. ಯೋಧರು ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ಕಾಯುವುದರಿಂದಲೇ ನಾವಲ್ಲಿ ಸುರಕ್ಷಿತವಾಗಿ ಜೀವನ ಮಾಡುತ್ತಿದ್ದೇವೆ. ಭೂಮಿತಾಯಿಗೆ ಒಂದು ಚೂರು ನೋವಾದರೂ ನಾವ್ಯಾರು ಸಹಿಸುವುದಿಲ್ಲ. ಇಡೀ ದೇಶದ ಮಣ್ಣನ್ನು ಒಂದೆಡೆ ಸೇರಿಸಿ ಯೋಧರ ಸ್ಮಾರಕದ ಪಕ್ಕದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಎಲ್ಲಾ ತರದ ಸಸ್ಯಗಳನ್ನು ಬೆಳೆಸಲಾಗುತ್ತದೆ. ಆ ಮೂಲಕ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಎಲ್ಲ ಗ್ರಾಪಂಗಳಿಂದ ಆಗಮಿಸಿದ ಮಹಿಳೆಯರು ಮಣ್ಣು ತರುವುದರ ಮೂಲಕ ತಮ್ಮ ಅಮೂಲ್ಯವಾದ ಸೇವೆಯನ್ನು ಮಾಡಿದ್ದಾರೆ. ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಲ್ಯ ಪದ್ಧತಿಯನ್ನು ತೊಲಗಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಬಾಲ್ಯ ವಿವಾಹ ಮಾಡಿ ಅವರ ಅತ್ಯಾಮೂಲ್ಯವಾದ ಭವಿಷ್ಯಕ್ಕೆ ಕಮರದಂತೆ ಮಾಡಬೇಡಿ. ಮಹಿಳೆಯರು ಉತ್ತಮವಾದ ಸಾಧನೆ ಮಾಡುತ್ತಿದ್ದಾರೆ. ಪುರುಷರಷ್ಟೇ ತಾವು ಪ್ರಬಲರು ಎಂಬುದನ್ನು ಸಾರುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಸಜ್ಜನ್, ಆಗಸ್ಟ್ ೧೫ರಿಂದಲೇ ಉದ್ಯಾನವನದ ನಿರ್ಮಾಣಕ್ಕಾಗಿ ಪ್ರತಿ ಹಳ್ಳಿ ಹಳ್ಳಿಯಿಂದಲೂ ಅಕ್ಕಿ ಮತ್ತು ಮಣ್ಣು ಸೇರಿದಂತೆ ಇತರ ಸಾಮಗ್ರಿಗಳ ಸಂಗ್ರಹ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮ ಪಂಚಾಯಿತಿಯಿAದ ತಾಲೂಕು ಪಂಚಾಯಿತಿಗೆ ಅಲ್ಲಿಂದ ರಾಜ್ಯಕ್ಕೆ ರಾಜ್ಯದಿಂದ ದೇಶಕ್ಕೆ ರವನೆಯಾಗಲಿದೆ ಎಂದರು.
ನೆಲ, ಜಲ, ವೃಕ್ಷ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೀರ ಯೋಧರ ಸ್ಮಾರಕ ಪಕ್ಕದಲ್ಲಿ ಉದ್ಯಾನವನದಲ್ಲಿ ನಿರ್ಮಿಸುವುದು ಹಾಗೂ ಅಮೃತವನಕ್ಕೆ ಈ ಇಡೀ ದೇಶದ ಹಳ್ಳಿ ಹಳ್ಳಿಗಳಿಂದ ಮಣ್ಣು ಹೋಗಿ ವಂದಡೆ ಸೇರಿ ಉದ್ಯಾನವನ ನಿರ್ಮಾಣವಾಗುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಸೈನಿಕರ ಸೇವೆಯನ್ನು ಪದಗಳಲ್ಲಿ ವಣ ðಸಲು ಸಾಧ್ಯವಿಲ್ಲ ಸೈನಿಕರ ಪಾದ ಪೂಜೆ ಮಾಡಿದರು ಸಹ ಕಡಿಮೆ ಎಂದು ತಿಳಿಸಿದರು.
ಹಸ್ತಾಂತರ:
ನೆಹರು ಯುವ ಕೇಂದ್ರದ ಮೂಲಕ ಉದ್ಯಾನವನ ನಿರ್ಮಿಸಲು ಮಹಿಳೆಯರು ತಂದಂತಹ ಮಣ್ಣನ್ನು ಹಸ್ತಾಂತರಿಸಲಾಯಿತು. ಮಾಜಿ ಯೋಧರಿಗೆ ತಾಲೂಕ ಪಂಚಾಯತಿ ಮತ್ತು ಮಹಿಳೆಯರ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಮುನ್ನ ನಗರದ ಶ್ರೀ ಶರಣಬಸವ ಕೆಂಗುರಿ ವೃತ್ತದಿಂದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ ಮೆರವಣ ಗೆಯು ತಾಪಂ ಕಚೇರಿ ವರೆಗೂ ಮೆರವಣ ಗೆ ಮೂಲಕ ಸಾಗಿತು. ಇದರಲ್ಲಿ ಅಪಾರ ಪ್ರಮಾಣದ ಮಹಿಳೆಯರು ಕಳಸ ಹೊತ್ತು ಸಾಗಿದರು.
ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ ರಡ್ಡಿ, ಮಾಜಿ ಸೈನಿಕರಾದ ನಿಂಗಣ್ಣಗೌಡ ಪಾಟೀಲ ಬಾದ್ಯಾಪುರ, ಭೀಮಣ್ಣ ನಾಯಕ ಲಕ್ಷ್ಮೀಪುರ, ತಿಪ್ಪನಗೌಡ ಬಾದ್ಯಾಪುರ, ವಿಶ್ವನಾಥ ಬೈಲಪತ್ತಾರ, ಹಣಮಂತ್ರಾಯ ಹೆಮನೂರು, ಪಿಡಿಒಗಳಾದ ರಾಜಕುಮಾರ, ಸತೀಶಕುಮಾರ, ಜಯಚಾರಿ ಪುರೋಹಿತ, ಸಿದ್ರಾಮಪ್ಪ, ಸಂಗೀತ ಸಜ್ಜನ, ಬಲಭೀಮರಾವ್ ಕುಲಕರ್ಣಿ, ಶರ್ಮೋದ್ದೀನ್, ವಿವಿಧ ಪಂಚಾಯಿತಿಯ ಅಧಿಕಾರಿಗಳು, ಮಹಿಳಾ ಸ್ವಸಹಾಯಕ ಸಂಘದ ಸದಸ್ಯರು ಇತರರಿದ್ದರು.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ