ಏಪ್ರಿಲ್‌ನಿಂದ ನೀರಿನ ವಸೂಲಿ: ಪ್ರೇಮ್ ಚಾರ್ಲ್ಸ್

ವರದಿ: ನಾಗರಾಜ್ ನ್ಯಾಮತಿ

೪ನೇವಾರ್ಡ್  ವಾಲ್ಮೀಕಿ ಮೂರ್ತಿ ಬದಲಾವಣೆಗೆ ನಿರ್ಧಾರ

ಕ್ರಾಂತಿವಾಣಿ ವಾರ್ತೆ ಸುರಪುರ: ೨೪*೭ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಟೆಂಡರ್ ಕರೆಯಲಾಗಿದ್ದು, ನಗರಸಭೆ ಟೆಂಡರ್ ಹತ್ತಿರ ಬಂದವರಿಗೆ ನೀಡಲಾಗುತ್ತದೆ. ಇರುವ ನಲ್ಲಿಗಳಿಂದ ತಿಂಗಳಿಗೆ ೫೭ ಸಾವಿರ ರೂ. ಪಾವತಿಸಬೇಕು. ಟೆಂಡರ್ ಪಡೆದವರು ಕಾರಣ ನೀಡುವಂತಿಲ್ಲ. ಇದಕ್ಕೆ ನಿಯಮಗಳು ಕಡ್ಡಾಯ ಎಂದು ಪೌರಾಯುಕ್ತ ಪ್ರೇಮ್‌ಚಾರ್ಲ್ಸ್ ಹೇಳಿದರು.


ನಗರದ ನಗರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ೯೫೦೦ ನಲ್ಲಿಗಳ ಗುರಿ ಹೊಂದಲಾಗಿದ್ದು, ಪ್ರಸ್ತುತ ೧೧,೦೦೦ ಟ್ಯಾಪ್‌ಗಳನ್ನು ಹಾಕಲಾಗಿದೆ. ಎಲ್ಲ ನಲ್ಲಿಗಳಿಗೆ ರೀಡರ್ ಮಷಿನ್ ಅಳವಡಿಸಲಾಗಿದೆ. ೧೦೦೦ ಲೀಟರ್ ನೀರಿಗೆ ೭, ೯, ೧೧ ರೂ.ಗಳಂತೆ ದರ ನಿಗದಿಪಡಿಸಲಾಗಿದೆ. ತಿಂಗಳಿಗೆ ೫೭ ರಿಂದ ೧೦೦ ರೂ. ಒಳಗೆ ಮುಗಿಯಲಿದೆ. ಹೆಚ್ಚು ನೀರು ಬಳಸಿದವರು ಮಾತ್ರ ಸ್ವಲ್ಪ ಹೆಚ್ಚಾಗುತ್ತದೆ. ವಾಣ ಜ್ಯ ಬೆಲೆಯೂ ಬೇರೆ ಇರುತ್ತದೆ ಎಂದು ತಿಳಿಸಿದರು.
ನೀರಿನ ಬಿಲ್ ವಸೂಲಿ ಮಾಡುವ ಕರ್ನಾಟಕದಲ್ಲಿ ಏಜೆನ್ಸಿಗಳಿವೆ. ಅವರೇ ಬಿಲ್ಲಿಂಗ್, ಮಷಿನ್, ಪೇಪರ್, ಕಂಪ್ಯೂಟರ್ ಅವರದ್ದೇ ಆಗಿರುತ್ತದೆ. ನಗರಸಭೆಯಲ್ಲಿ ಒಂದು ಕೊಠಡಿ ಮಾತ್ರ ನೀಡುತ್ತೇವೆ. ನಮ್ಮಲ್ಲಿ ತರಬೇತಿ ಪಡೆದವರಿಗೆ ಒಂದು ಟ್ಯಾಪಿ( ೧೦೦೦ ಲೀಡರ್ ನೀರು) ಗೆ ೫ ರೂ. ನೀಡುತ್ತೇವೆ ಎಂದರು.
ನಗರಸಭೆಯ ೪ ಯೋಜನೆ ಆರಂಭವಾಗಿದೆ. ೯ ಕೋಟಿ ರೂ. ವೆಚ್ಚದಲ್ಲಿ ಸಿಸಿ ರೋಡ್, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ೨೪ ಕೋಟಿ ರೂ.ನಲ್ಲಿ ನಗರಸಭೆ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ ರೂ. ಇದರಲ್ಲಿ ೧.೫೦ ಲಕ್ಷ ರೂ.ನಲ್ಲಿ ಮೂರು ಸಮುದಾಯ ಭವನ, ೫೦ ಲಕ್ಷ ರೂ.ನಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಹೊಲಗೆ ಯಂತ್ರ, ಹಿಟ್ಟಿನಗಿರಣ , ಅಂಗವಿಕಲರಿಗೆ ಸ್ಥಳ ನೀಡಲಾಗುವುದು ಎಂದು ತಿಳಿಸಿದರು.
ನಾಲ್ಕನೇ ವಾರ್ಡ್ನಲ್ಲಿನ ವಾಲ್ಮೀಕಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಅದನ್ನು ಬದಲಾಯಿಸುವಂತೆ ಒತ್ತಡ ಕೇಳಿಬಂದಿತ್ತು. ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದಾರೆ. ಅವರಿಗೆ ಇಲ್ಲಿನ ವಿಷಯ ತಿಳಿಸಿ ಅವರ ಆದೇಶದ ಮೇರೆಗೆ ಸಭೆ ಕರೆಯಲಾಗಿತ್ತು. ಸಭೆ ಕೋರಂ ಇದ್ದು, ೧೬ ಸದಸ್ಯರು ಭಾಗವಹಿಸಿದ್ದರು. ಸದಸ್ಯರೆಲ್ಲರೂ ಮೂರ್ತಿ ಬದಲಾವಣಗೆ ಸದಸ್ಯೆರೆಲ್ಲರೂ ಒಪ್ಪಿಗೆ ನೀಡಿದ್ದಾರೆ. ಎಸ್‌ಸಿ-ಎಸ್‌ಟಿ ೨೪.೧೦ ಕ್ರಿಯಾ ಯೋಜನೆಯಡಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ೧೧ ಜನರಿಂದ ಕೂಡಿದ ಸಮಿತಿ ರಚಿಸಲಾಗಿದೆ. ಅವರೇ ಮೂರ್ತಿಯ ಕೆತ್ತನೆ ಮತ್ತು ರೂಪರೇಷೆ ತೀರ್ಮಾನಿಸಲಿದ್ದಾರೆ. ಅನುದಾನ ಅನುಮೋದನೆಗೆ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುತ್ತದೆ. ಆದೇಶ ಬಂದ ನಂತರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ತಿಳಿಸಿದರು.
ಸದಸ್ಯರಾದ ವೇಣುಮಾಧವ ನಾಯಕ, ಸೋಮನಾಥ ಡೊಣ್ಣಗೇರಿ, ಶಿವಕುಮಾರ, ವಿಷ್ಣು ಗುತ್ತೇದಾರ, ಮಾನಪ್ಪ ಚಳ್ಳಿಗಿಡ, ಜುಮ್ಮಣ್ಣ ಕೆಂಗುರಿ, ಮಹಮದ್ ಕುಂಡಾಲೆ, ಅಹಮದ್ ಶರೀಪ್, ಕಮ್ರುದ್ದೀನ್, ಮೆಹಬೂಬ್ ಸಾಬ್, ಸುವರ್ಣ ಎಲಿಗಾರ , ನಗರಸಭೆ ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ ್ಣಗೇರಾ, ಗುರುಸ್ವಾಮಿ ಸೇರಿದಂತೆ ಇತರಿದ್ದರು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ