ವರದಿ: ನಾಗರಾಜ್ ನ್ಯಾಮತಿ
ರಾಜ್ಯ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ
ಕ್ರಾಂತಿವಾಣಿ ವಾರ್ತೆ ಸುರಪುರ: ಯಾದಗಿರಿಯ ಜಿಲ್ಲೆಯ ಎಲ್ಲ ತಾಲೂಕುಗಳನ್ನು ತೀವ್ರ ಬರಾಗಲ ತಾಲೂಕಾಗಿಸಿ ಘೋಷಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ಕೆ. ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ರೈತರ ದುಡಿಮೆಗೆ ಬೆಲೆಯಿಲ್ಲ ಇಲ್ಲವಾಗಿದೆ. ರೈತರ ಕಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ. ರೈತರ ಬೆಳೆದ ಅನ್ನ ತಿನ್ನದೇ ಬದುಕಲು ಸಾಧ್ಯವೇ? ಮಳೆಯಿಲ್ಲದೆ, ಡ್ಯಾಮ್ ನೀರು ಇಲ್ಲದೆ ಬೆಳೆಗಳು ಒಣಗುತ್ತಿವೆ. ರೈತರು ಹತ್ತಿ, ಶೇಂಗಾ, ಭತ್ತವನ್ನು ಕಿತ್ತು ಕುಂಟೆ ಹೊಡೆಯುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸದ ರಾಜಕಾರಣ ಗಳು ರೈತರ ಮಗ ಎನ್ನಲು ನಿಮಗೆ ಯೋಗ್ಯತೆ ಇದೆಯೇ ಎಂಬುದಾಗಿ ಆಳುವ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರ ಶಹಾಪುರ, ವಡಗೇರಾ ತೀವ್ರ ಬರಗಾಲ ತಾಲೂಕಾಗಳಾದರೆ ಸಾಕೆ? ಇನ್ನುಳಿದ ನಾಲ್ಕು ತಾಲೂಕು ಬೇಡವೇ? ಡ್ಯಾಮ್ ನೀರು ರೈತರ ಹೊಲಗಳಿಗೆ ತಲುಪುತ್ತಿಲ್ಲ. ಸರಕಾರದ ಯೋಜನೆಗಳು ನಮಗೆ ಬೇಕಾಗಿಲ್ಲ. ನಿಗದಿ ಪಡಿಸಿದ ವಿದ್ಯುತ್ ನೀಡಿ. ಸರಕಾರ ಅಧಿಕಾರಿಗಳು ರಾಜಕಾರಣ ಗಳ, ಬಂಡವಾಳ ಶಾಹಿಗಳ ಏಜೆಂಟ್‌ರುಗಳಾಗಿದ್ದಾರೆ. ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಸಾಧ್ಯವಾಗುತ್ತಿಲ್ಲ. ರೈತರು ಎಷ್ಟೇ ಹೋರಾಟ ಮಾಡಿದರೂ ಮೌಲ್ಯವಿಲ್ಲದಂತಾಗಿದೆ. ರೈತರನ್ನು ನಿರ್ನಾಮ ಮಾಡುವ ಕೆಲಸ ಆಳುವ ಸರಕಾರಗಳಿಂದ ನಡೆಯುತ್ತಿಲೇ ಇರುತ್ತದೆ ಎಂದು ದೂರಿದರು.
ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೆ. ಹಳ್ಳಿಗೆ ಬಸ್‌ಗಳು ಬರುತ್ತಿಲ್ಲ. ರಸ್ತೆಗಳು ಕಿತ್ತು ಹೋಗುವೆ. ಸುರಪುರದ ಸುತ್ತಮುಲಿನ ಪರಿಸರ ನಾಶವಾಗುತ್ತಿದೆ. ಭೂಗಳ್ಳರು ಹಿಟಾಚಿ ಮೂಲಕ ಎಲ್ಲಂದರಲ್ಲಿ ಮಣ್ಣು ದೋಚುತ್ತಿದ್ದಾರೆ. ಅಧಿಕಾರಿಗಳ ಕಣ ್ಣಗೆ ಕಾಣುತ್ತಿಲ್ಲವೇ? ಕುಂಬಾರಪೇಟೆಯ ಗುಡ್ಡ ಕರಗಿ ಹೋಗುತ್ತಿದೆ. ತಹಸೀಲ್ದಾರ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಮಾತನಾಡಿ, ಸಕಾಲಕ್ಕೆ ಮಳೆ ಬಾರದೆ ರೈತರ ಸ್ಥಿತಿ ಅಧೋಗತಿಗೆ ಇಳಿದಿದೆ. ಇದರಿಂದ ಜೀವನ ನೆಮ್ಮದಿ ಕಳೆದು ಹೋಗಿದೆ. ರೈತರ ಬದುಕು ಯಾರಿಗೂ ಬೇಡವಾಗಿದೆ. ಬರಗಾಲ ಘೋಷಣೆಗಾಗಿ ಡಿಸಿ ಕಚೇರಿ ಎದುರು ಪ್ರತಿಭಟಿಸಿದ್ದೇವೆ. ಈಗ ಸಚಿವರ ದಿನಾಂಕ ಸಿಗದೇ ತಹಸೀಲ್ ಮುಂದೆ ಪ್ರತಿಭಟಿಸುತ್ತಿದೇವೆ. ಬರಗಾಲ ತಾಲೂಕಾಗಿ ಗುರುಮಿಟಕಲ್, ಸುರಪುರ, ಹುಣಸಗಿ, ಯಾದಿಗಿರಿಯನ್ನು ಘೋಷಿಸದಿದ್ದರೆ ಹೋರಾಟ ಎಲ್ಲಡೆಯಿಂದ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ರೈತ ಮುಖಂಡ ದೇವೇಂದ್ರಪ್ಪ ಬಳಿಚಕ್ರ ಮಾತನಾಡಿದರು. ಶಿವನಗೌಡ ರುಕ್ಮಪುರ, ಭೀಮಣ್ಣ ತಿಪ್ಪನಟಗಿ, ವೆಂಕಟೇಶ ಕುಪಗಲ್, ತಿಪ್ಪಣ್ಣ ಜಂಪಾ, ಮಲ್ಲಣ್ಣ ಹಾಲಭಾವಿ, ಮಾನಪ್ಪ ಕೊಂಬಿನ್, ಲೋಹಿತಕುಮಾರ, ದೇವಣ್ಣ ಎರಕಿಹಾಳ, ನಾಗಪ್ಪ ಕುಪಗಲ್, ಸೋಮಲಿಂಗ ಗುಂಡೇರ, ನಿಂಗನಗೌಡ, ಈರಮ್ಮ ಹುಣಸಗಿ, ಮಲ್ಲಮ್ಮ ಗುಳಬಾಳ ಇತರರಿದ್ದರು.
-ಸಚಿವರ ನಡೆ ಅನುಮಾ:
ಹತ್ತಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ಖಂಡನೀಯ. ಸಚಿವರ ನಡೆ ಹಲವು ಅನುಮಾನ ಮೂಡಿಸಿದೆ. ರಸ್ತೆಗಳು ಕಿತ್ತು ಹೋಗಿದ್ದು, ಟೆಂಡರ್ ಕರೆಯಲಾಗಿದೆ. ಕೆಲಸ ಆರಂಭಿಸಬೇಕು. ನಾಲ್ಕು ತಾಲೂಕುಗಳನ್ನು ಬರಗಾಲವಾಗಿ ಘೋಷಿಸದಿದ್ದರೆ ಸಚಿವರ ಮನೆ ಚಲೋ ಚಳವಳಿ ನಡೆಯುತ್ತದೆ.
ಹಣಮಂತ್ರಾಯ ಮಡಿವಾಳ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ.