ಕಲಾವಿದರನ್ನು ಪ್ರೋತ್ಸಾಹಿಸುವ ಪಾವನ ಕೇಂದ್ರ ಸುರಪುರ: ಪ್ರಾಣೇಶಗಂಗಾವತಿ
ಕ್ರಾಂತಿವಾಣಿ ವಾರ್ತೆ ಸುರಪುರ: ರಾಷ್ಟ್ರಕವಿ ಕುವೆಂಪು ಒಬ್ಬರನ್ನು ಹೊರತುಪಡಿಸಿ ಜ್ಞಾನಪೀಠ ಪ್ರಶಸ್ತಿಯ ಎಲ್ಲಾ ಪುರಸ್ಕೃತರು.ನಾಡಿನ ದಿಗ್ಗಜಸಾಹಿತಿಗಳು, ನಾಟಕ ಕಾರರು ಸಿನಿಮಾನಟರು ಚಿತ್ರ, ಹಾಸ್ಯೆ ಕಲಾವಿದರು ಸೇರಿದಂತೆ ಈ ಸಂಘದ ನಾಡಹಬ್ಬ ಕಾರ್ಯ ಕ್ರಮಕ್ಕೆ ಬಂದು ಹೋದವರೆಲ್ಲರು ರಾಜ್ಯದಲ್ಲಿ ಪ್ರಖ್ಯಾತರಾಗಿದ್ದಾರೆ. ಈ ನೆಲ ಕಲಾವಿದರನ್ನು ಸಾಹಿತಿಗಳನ್ನು ಪ್ರೋತ್ಸಾಹಿಸುವ ಪಾವನಕೇಂದ್ರವಾಗಿದೆ ಎಂದು ಖ್ಯಾತ ಹಾಶ್ಯ ಕಲಾವಿದ ಪ್ರಾಣೇಶ ಗಂಗಾವತಿ ಹೇಳಿದರು.
ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ ೮೧ನೇ ನಾಡಹಬ್ಬ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಇವತ್ತು ನಾನು ಗುರುತಿಸಲ್ಪಟ್ಟಿದ್ದರೆ ಅದು ಈ ಸಂಘದ ಪುಣ್ಯ. ಈ ನೆಲಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಮೊಟ್ಟ ಮೊದಲ ಬಾರಿಗೆ ನನ್ನನ್ನು ಗುರುತಿ ಅವಕಾಶ ನೀಡಿದ್ದು ಮತ್ತು ನನ್ನನ್ನು ಹರಿಸಿ ಹಾರೈಸಿರುವ ಇಲ್ಲಿಯ ಜನರನ್ನು ಬುದ್ದಿವಂತ ಶೆಟ್ಟರನ್ನು ಯಾವತ್ತು ಮರೆಯಲಾರೆ ಎಂದರು.
ಭಾರತೀಯ ಕಾವ್ಯ ಮೀಮಾಂಸೆಯ ರಸಗಳಲ್ಲಿ ಹಾಸ್ಯ ರಸಭರತವಾದ್ದು. ತನ್ನ ನೋವುಗಳನ್ನು ಮರೆತು ಇತರರನ್ನು ನಕ್ಕು ನಲಿಸುವುದು ಹಾಸ್ಯ ಕಲಾವಿದರ ಉದ್ದೇಶ. ಜಿಗುಪ್ಸೆ, ಬೇಸರ, ಕಷ್ಟ, ನೋವು ಸೇರಿದಂತೆ ಮಾನಸಿಕ ರೋಗವನ್ನು ದೂರ ಮಾಡುವ ಶಕ್ತಿ ಹಾಸ್ಯಕ್ಕಿದೆ. ನಗನಗುತ್ತಾ ಇರುವವರಿಗೆ ರೋಗವೆ ಇರುವುದಿಲ್ಲ. ಇದು ರೊಕ್ಕ ಇಲ್ಲದ ಮದ್ದು ನಗುತ್ತಾ ಇದ್ದರೆ ದೇಹದ ಲ್ಲಿನ ಎಲ್ಲಾ ಸ್ನಾಯುಗಳಿಗೆ ಶಕ್ತಿ ಬರುತ್ತದೆ. ದೇವರು ಆಯುಷ್ಯ ಕೊಟ್ಟಿದ್ದಾನೆ. ಆದರೆ ಬದುಕುವ ಗ್ಯಾರಂಟಿ ಇಲ್ಲಾ. ಇರುವಷ್ಟು ದಿನ ನಗುನಗುತ್ತಾ ಇದ್ದು ರೋಗದಿಂದ ದೂರವಿರಿ ಎಂದು ತಿಳಿ ಸಿದರು
ಹಾಸ್ಯ ಎಲ್ಲಿಯೂ ಹುಡಕಬೇಕಿಲ್ಲ, ಪಕ್ಕದಲ್ಲೆ ಸಿಗುತ್ತದೆ, ಅಳುನಗು. ಸರಸ ವಿರಸ, ಕಷ್ಟಸುಖ, ಆಟಪಾಠ, ಗೋಷ್ಠಿ ಜನಸಮ್ಮೂಹದಲ್ಲಿ ನಿತ್ಯ ಜೀವನದ ಹೆಜ್ಜೆ ಹೆಜ್ಜೆಯಲ್ಲಿ ಹಾಸ್ಯ ಸಿಗುತ್ತದೆ. ದೇವಸ್ಥಾನ ಮಂಗಳ ಕಾರ್ಯ, ಮದುವೆ ಮುಂಜುವೆ, ಸತ್ತಲ್ಲಿ, ಬಸ್ ನಿಲ್ದಾಣ, ಪ್ರಯಾಣದ ವೇಳೆ ಎಲ್ಲಾ ಕಡೆ ಹಾಸ್ಯ ದೊರಕುತ್ತದೆ. ಸೂಕ್ಮವಾಗಿ ಗ್ರಹಿಸಬೇಕಷ್ಟೆ ಎಂದು ಸಲಹೆ ನೀಡಿದರು
ಭಿಕ್ಷಕರು ಬರುವುದು ಭಕ್ಷೆಗಾಗಿ ಅಲ್ಲ ಧರ್ಮ ಜಾಗೃತಿ ಹೆಚ್ಚಿಸಲು ಎಂದು ಭಾವಿಸಿ ಸ್ವಚ್ಛತೆಗೆ ಆದ್ಯತೆ ಕೊಡಿ, ಬಯಲು ಶೌಚ ಮತ್ತು ವ್ಯಸನ ಮುಕ್ತ ಪ್ರದೇಶಕ್ಕೆ ಸಂಕಲ್ಪ ತೊಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ. ಇಂಗ್ಲೀಷನಲ್ಲಿ ಹಾಸ್ಯೆ ಸಿಗುವುದಿಲ್ಲ ಆದ್ದರಿಂದ ಹತ್ತನೆ ತರಗತಿವರೆಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಶಿಕ್ಷಣವೇ ಕೊಡಿಸಿ ಎಂದು ಮನವಿ ಮಾಡಿದರು
ನಂತರ ಹಾಸ್ಯೆ ಚಟಾಕೆಗಳನ್ನು ಹೇಳಿ ಜನರನ್ನು ನಕ್ಕು ನಲಸಿ ಹೊಟ್ಟೆ ಹಣ್ಣಾಗಿಸಿದರು ಮಹಳೆ ಯರಿಗೆ ಕುಡುಕರಿಗೆ, ಬಯಲು ಶೌಚ್ಯದ ಸನಿವೇಶ, ಗಂಡ ಹೆಂಡತಿ, ಅತ್ತೆ ಸೊಸೆ ಜಗಳ, ಕೆಲ ಗ್ರಾಮಗಳ ಹೆಸರು, ಮಕ್ಳಳ ಹೆಸರು, ಉತರ ಕರ್ನಾಟಕ ಧಕ್ಷಿಣ ಕರ್ನಾಟಕದ ಭಾಷೆಗಳ ನಡು ವಿನ ವ್ಯತ್ಯಾಸ, ಗುರು ಶಿಷ್ಯರ ನಡುವೆ ಅಂದಿನ ಇಂದಿನ ಬಾಂಧ್ಯವ್ಯ, ಕಲಾವಿದರ ನಟರ ಗೋಳು, ಪುಲ್ಲಿಂಗ್ ಸ್ತ್ರೀ ಲಿಂಗಗಳ ವ್ಯತ್ಯಾಸ, ಜನಪದ ಹಾಡುಗಳು ಹಳ್ಳಿ ಮತ್ತು ಪಟ್ಟಗಳಲ್ಲಿ ಸತ್ತಾಗ ಅಳುವ ಪದ್ದತ್ತಿ ಸೇರಿದಂತೆ ಹಲವಾರು ಪ್ರಸಂಗಗಳಲ್ಲಿ ಕಂಡು ಬರುವ ಹಾಸ್ಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಕೆಲ ಹಾಸ್ಯ ಪ್ರಸಂಗಗಳನ್ನು ಹೇಳಿ ಜನರನ್ನು ನಕ್ಕು ನಲಿಸಿದರು.
ಸಂಘದ ಅಧ್ಯಕ್ಷ ಸೂಗೂರೇಶ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವ ಉಪಸ್ಥಿತಿ ಶರಣಗೌಡ ಜೈನಾಪುರ, ಕಾಂಗ್ರೆಸ್ ಮುಖಂಡ ರಾಜಾವೇಣುಗೋಪಾಲ ನಾಯಕ, ಇತರರು ವೇದಿಕೆಯಲ್ಲಿದ್ದರು ಮುದ್ದಪ್ಪ ಆಪ್ಪಾಗೋಳ ಸ್ವಾಗತಿಸಿದರು. ಜಗದೀಶ ಪತ್ತಾರ ನಿರೂಪಿಸಿದರು.