ಕ್ರಾಂತಿವಾಣಿ ವಾರ್ತೆ ಸುರಪುರ: ಹಬ್ಬ-ಹರಿದಿನಗಳು ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಸತತ ಮೂರು ವರ್ಷಗಳಿಂದ ವಿಶೇಷ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಶಾಲಾ ಮಕ್ಕಳಿಗೆ, ರೈತರಿಗೆ, ಮಹಿಳೆಯರಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧಕರನ್ನು ಗುರುತಿಸುತ್ತಿರುವ ಸಮಿತಿಯ ಕಾರ್ಯ ಪ್ರತಿಯೊಬ್ಬರು ಮೆಚ್ಚುವಂತ್ತದ್ದುಎAದು ಬಿಜೆಪಿ ಯುವ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.
ತಾಲೂಕಿನ ಕೆಂಭಾವಿ ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ದಸರಾ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣದಿಂದಾಗಿ ಕಳೆದ ನಾಲ್ಕೆದು ತಿಂಗಳದ ಒಬ್ಬರಿಗೊಬ್ಬರೂ ಮುಖ ನೋಡದಂತಹ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಮಾಡುತ್ತಿರುವ ದಸರಾ ಉತ್ಸವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾತನಾಡಿ, ಪಟ್ಟಣದ ಹಿರಿಯರೆಲ್ಲ ಸೇರಿ ಬಜಾರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಕಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರದ ಅನುದಾನ ಹಾಗೂ ಸಾರ್ವಜನಿಕರಿಂದ ದೇಣ ಗೆ ಪಡೆದು ಶೀಘ್ರದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ಕೊಡುವಂತಾಗಬೇಕು. ಅದಕ್ಕೆ ಊರಿನ ಹಿರಿಯರು ಮನಸ್ಸು ಮಾಡಬೇಕು ಎಂದು ಹೇಳಿದರು.
ದಸರಾ ಸಮಿತಿ ಅಧ್ಯಕ್ಷ ಡಿ.ಸಿ. ಪಾಟೀಲ ಮಾತನಾಡಿ, ಜಾತಿಯ ಸಂಕೋಲೆಯನ್ನು ದೂರ ಮಾಡಿ, ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸಿ ನಾಡಹಬ್ಬ ದಸರಾ ಆಚರಣೆ ಮಾಡುವುದು ಸಮಿತಿಯ ಸದುದ್ದೇಶವಾಗಿದೆ. ಕಳೆದ ಮೂರು ವರ್ಷಗಳಿಂದ ಸಮಿತಿಯು ಮಕ್ಕಳು, ಮಹಿಳೆಯರು, ರೈತರು ಹಾಗೂ ಸಾಧಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಪ್ರತಿ ಕಾರ್ಯಕ್ರಮದಲ್ಲೂ ಪಟ್ಟಣದ ಜನತೆಯ ಸಹಕಾರ ಸ್ಮರಣ ಯವಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಸಾಹಿತಿ ಶಿಕ್ಷಕ ಸಾಹೇಬಗೌಡ ಬಿರಾದಾರ, ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡಿ : ತಾಯಂದಿರು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಶಕ್ತಿ, ಜ್ಞಾನ ಆಗರವಾಗಿರುವ ದೇವಿಯನ್ನು ೯ ದಿನಗಳ ಕಾಲ ದೇವಿಯ ಆರಾಧನೆ ಮಾಡುವುದು, ಅಜ್ಞಾನ, ಅಂಧಕಾರ ಹೋಗಲಾಡಿಸುವಂತೆ ಪ್ರಾರ್ಥಿಸುವುದು ನಾಡಹಬ್ಬ ದಸರಾದ ವಿಶೇಷವಾಗಿದೆ. ದೇವಿಯು ೯ ಅವತಾರಗಳ ಮೂಲಕ ದುಷ್ಟ ಶಕ್ತಿಯನ್ನು ಸಂಹರಿಸುತ್ತಾಳೆ ಎಂದು ಹೇಳಿದರು.
ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಬಸವ (ಕಾಕಾ) ಡಿಗ್ಗಾವಿ, ಅರುಣೋದಯ ಸೊನ್ನದ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕಣ ð, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ ಸಾಸನೂರ, ಮಹಿಪಾಲರೆಡ್ಡಿ ಡಿಗ್ಗಾವಿ, ಕೃಷ್ಣಯ್ಯ ಗುತ್ತೇದಾರ, ಇಲಿಯಾಸ ವಡಕೇರಿ, ಬಿ. ರಾಘವೇಂದ್ರ, ತೋಟಪ್ಪ ಸಾಹು, ಕೃಷ್ಣಯ್ಯ ಗುತ್ತೇದಾರ, ಬಸವರಾಜ ಪತ್ತಾರ, ಅರವಿಂದ್ರ ಪಟೇಲ್ ಸೇರಿದಂತೆ ಇತರರಿದ್ದರು. ಬಂದೇನವಾಜ ನಾಲತವಾಡ ಸ್ವಾಗತಿಸಿದರು. ಮಡಿವಾಳಪ್ಪ ಪಾಟೀಲ ಹೆಗ್ಗಣದೊಡ್ಡಿ ನಿರೂಪಿಸಿದರು. ಪರಶುರಾಮ ನಾರಾಯಣಕರ್ ವಂದಿಸಿದರು. ದಸರಾ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿ:
ರಾಜಕೀಯ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಪಟ್ಟಣದ ಹಿರಿಯ ಮುಖಂಡರು ಹಾಗೂ ಸಾಹಿತಿಗಳಾದ ಲಿಂಗನಗೌಡ ಮಾಲಿ ಪಾಟೀಲ್ ಅವರಿಗೆ ದಸರಾ ಉತ್ಸವ ಸಮಿತಿಯಿಂದ ಈ ವರ್ಷದ ವಿಶೇಷ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ:
ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಾದ ವಿರೇಂದ್ರ ಅಮ್ಮಣ್ಣ ಧರಿ, ಚಂದ್ರಕಲಾ ಗಣಾಚಾರಿ, ಶರಣು ದೊಡ್ಡಮನಿ, ಎನ್.ಎಸ್. ಮಾಲಿ ಪಾಟೀಲ, ಭದ್ರಮ್ಮ ಬ್ಯಾಕೋಡ್, ಮಲ್ಲಣ್ಣ ಮಡಿವಾಳಪ್ಪ ಆಲ್ದಾಳ, ಶಿವಾನಂದ ಗುರುಶಾಂತ ಹೂಗಾರ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.