ಕ್ರಾಂತಿವಾಣಿ ಶಹಾಪುರ:
ಶಹಾಪುರ ಶಾಖಾ ಕಾಲುವೆಯ ನೀರಿನಲ್ಲಿ ತೇಲಿ ಬರುತ್ತಿದ್ದ ವನದುರ್ಗ ಗ್ರಾಮದ ಶರಮುದ್ದೀನ ಎನ್ನುವ ವ್ಯಕ್ತಿಯನ್ನು ಭಾನುವಾರ ರಾಜ್ಯ ಗುಪ್ತಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನಸ್ಟೆಬಲ್ ವೆಂಕಟೇಶ ಕವಲಿ ಹಾಗೂ ಆತನ ಅಳಿಯ ಮಾದೇಶ ಕಾಶಿರಾಜ ಇಬ್ಬರು ಕೂಡಿ ರಕ್ಷಣೆ ಮಾಡಿದ್ದಾರೆ.
ತಾಲ್ಲೂಕಿನ ವನದುರ್ಗ ಗ್ರಾಮದ ಜಮೀನಿನಲ್ಲಿ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಲು ನೀರು ತರಲು ಗ್ರಾಮದ ಕ್ಯಾಂಪ್ ಬಳಿ ಮುಖ್ಯ ಕಾಲುವೆಗೆ ಇಳಿದು ಕೊಡದಲ್ಲಿ ನೀರು ತರಲು ಬಾಗಿದಾಗ ಕಾಲು ಜಾರಿ ನೀರಿನಲ್ಲಿ ಕೊಡ ಸಮೇತ ಕೊಚ್ಚಿಕೊಂಡು ಸುಮಾರು ೩ ಕಿ.ಮೀ ನೀರಿನಲ್ಲಿ ಸಾಗುತ್ತಾ ಬರುವಾಗ ಕಾಲುವೆ ಕೆಳಭಾಗದ ತಾಲ್ಲೂಕಿನ ಹೊಸಕೇರಾ ಗ್ರಾಮದ ಬಳಿ ಕಾಲವೆಯಲ್ಲಿ ಈಜಾಡುತ್ತಿದ್ದ ವೆಂಕಟೇಶ ಹಾಗೂ ಮಾದೇಶ ಅವರನ್ನು ಕಂಡು ರಕ್ಷಣೆಗೆ ಕೂಗಿದಾಗ ಶರಮುದ್ದೀನನ್ನು ಹಿಡಿದುಕೊಂಡು ದಡಕ್ಕೆ ತಂದರು. ನನ್ನ ಜೀವ ಉಳಿಸಿದ ಪುಣ್ಯಾತ್ಮರು ಇವರು ಎಂದು ಕಾಲಿಗೆ ಎರಗಿ ಕೃತಜ್ಞತೆಯನ್ನು ಶರಮುದ್ದೀನ ಸ್ಮರಿಸಿದರು.
ದೊಡ್ಡ ಕಾಲ್ವೆಯಲ್ಲಿ ತೇಲಿ ಬರುತ್ತಿರುವ ವ್ಯಕ್ತಿಯು ಕಾಪಾಡಿ ಕಾಪಾಡಿ ಎಂದು ಕೂಗುತಿದ್ದನ್ನು ಕೇಳಿ. ಅಲ್ಲೇ ಈಜಾಡುತ್ತಿದ್ದ ಮಾದೇಶ ಮತ್ತು ಪೊಲೀಸ್ ವೆಂಕಟೇಶ್ ಇವರು ತಮ್ಮ ಜೀವದ ಹಂಗು ತೊರೆದು ಕಾಲುವಿಗೆ ಹಾರಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಅವರ ಧೈರ್ಯ ಸಾಹಸಕ್ಕೆ ಸ್ಥಳದಲ್ಲಿದ್ದ ಜನರು ಅಭಿನಂದನೆ ಸಲ್ಲಿಸಿದರು.
ಶೇಖರ್ ಗುತ್ತೇದಾರ್. ಪ್ರತ್ಯಕ್ಷದರ್ಶಿ ಹೊಸಕೆರಾ.