ಕ್ರಾಂತಿ ವಾಣಿ ಶಹಾಪುರ.
ನಗರದ ಚಾಮುಂಡೇಶ್ವರ ನಗರದ ಉದ್ಭವ ಮೂರ್ತಿ ಶ್ರೀಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿ ಮಹೋತ್ಸವಾ ಆಚರಣೆ ಮಾಡಲಾಯಿತು.
ರವಿವಾರ ನಗರದ ಪ್ರಮುಖ ಬೀದಿಗಳ ಮೂಲಕ ಶ್ರೀಚಾಮುಂಡೇಶ್ವರಿ ದೇವಿ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. ಮೆರವಣಿಗೆ ಡೊಳ್ಳು ಕುಣಿತ, ಹಲಗೆ ಇತರೆ ವಾದ್ಯಗಳ ನಿನಾದದೊಂದಿಗೆ ಮಹಿಳೆಯರ ಕಳಶಹೊತ್ತು ಮೆರವಣಿಗೆ ಆಕರ್ಷಕವಾಗಿ ಜರುಗಿತು.
ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ ಆಕಷಿಕವಾಗಿತ್ತು. ಶ್ರೀದೇವಿಯ ಮೆರವಣಿಗೆ ಸಂದರ್ಭದಲ್ಲಿ ಬೀದಿ ಉದ್ದಕ್ಕೂ ಭಕ್ತರು ನೀರು ನೀಡಿ, ಕಾಯಿ ಕರ್ಪೂರ ಸೇರಿದಂತೆ ಹೂಮಾಲೆ ಹಾಕಿ ನಮನಗಳನ್ನು ಸಲ್ಲಿಸಿದರು.
ಬೆಳಗ್ಗೆ ೯-೩೦ ಕ್ಕೆ ಹೊರಟ ಮೆರವಣಿಗೆ ಸಿಬಿಕಮಾನ್ ಮೂಲಕ ಬಸವೇಶ್ವರ ವೃತ್ತ, ಮೋಚಿ ಗಡ್ಡಾದವರೆಗೆ ಸಾಗಿತು. ಮೋಚಿ ಗಡ್ಡದಲ್ಲಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಮತ್ತೆ ಮೆರವಣಿಗೆ ಸಾಗಿ ಗಾಂಧಿ ವೃತ್ತ, ದಿಗ್ಗಿ ಬೇಸ್ ಮೂಲಕ ಮೂಲ ದೇವಸ್ಥಾನ ಸಂಜೆ ೬-೩೦ ಕ್ಕೆ ತಲುಪಿತು. ಶ್ರೀದೇವಿಗೆ ಪೂಜಾ ವಿಧಿವಿಧಾನದಂತೆ ಜರುಗಿದವು. ಸಂಜೆ ಭಕ್ತಾಧಿಗಳು ಚಾಮುಂಡೇಶ್ವರಿಗೆ ಅಕ್ಕಿ, ಬೆಲ್ಲ ಉಡಿ ತುಂಬಿ ನೈವೇದ್ಯ ಅರ್ಪಿಸಿದರು. ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹುಗ್ಗಿ, ಅನ್ನ, ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಿತ್ತು. ಸಹಸ್ರಾರು ಭಕ್ತಾಧಿಗಳು ಭಾಗವಹಿಸಿ ಶ್ರೀದೆವಿಯ ದರ್ಶನ ಪಡೆದು ಪ್ರಸಾದ ಸೇವಿಸಿದರು. ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು. ಪ್ರಮುಖರಾದ ದೇವು ನಾಸಿ, ಅಯ್ಯಣ್ಣ ನಾಸಿ, ಮಲ್ಲಿಕಾರ್ಜುನ ಮುದ್ನೂರ, ಡಾ.ಆನಂದಕುಮಾರ ಕರಕಳ್ಳಿ, ದೇವು ಕೋನೇರ, ಸಾಯಬಣ್ಣ ನಾಸಿ, ನಾಗಪ್ಪ ನಾಸಿ, ಮಲ್ಲಪ್ಪ ನಾಸಿ, ಮಲ್ಲಪ್ಪ ಮಣಿಗಿರಿ, ಸಾಯಬಣ್ಣ ನಾಟೇಕಾರ, ರಮೇಶ್ ನಾಗನೂರ, ತಿಪ್ಪಣ್ಣ ನರಬೋಳಿ, ಹುಸೇನಿ ಇತರರು ಭಾಗವಹಿಸಿದ್ದರು.
ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ನಗರದ ಉದ್ಭವ ಮೂರ್ತಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರದೊಂದಿಗೆ ಅಭಿಷೇಕ, ಪೂಜೆ ನಡೆಯುತ್ತದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿಗೆ ತನ್ನದೇ ಆದ ಚರಿತ್ರೆ ಇದೆ. ಜನ ಭಯ ಭಕ್ತಿಯಿಂದ ತಮ್ಮಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವಿಯನ್ನು ಪ್ರಾರ್ಥಿಸುತ್ತಾರೆ.
ಮಲ್ಲಿಕಾರ್ಜುನ್ ಮುದ್ನೂರ್.ತಾಲೂಕ ಅಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಹಾಪುರ.