ಕ್ರಾಂತಿವಾಣಿ ವಾರ್ತೆ
ಸುರಪುರ: ನಗರದ ಪರಾಂಕುಶ ಸ್ವಾಮಿಗಳವ ಮಠದಲ್ಲಿ ಶ್ರೀ ವೆಂಕಟೇಶ್ವರ ಭಜನಾ ಮಂಡಳಿ, ಜಾಗೃತಿ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಶಕುಂತಲಾ ಅಚಾರ್ಯರ ರಚನೆ “ ಸರಳತೆಯ ಸರಳತೆಯ ಸವಿನೆನಪು ಸವಿದಷ್ಟು ಸಹಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುರಪುರ ಸಂಸ್ಥಾನದ ವಿಜಯರಾಘವನ್ ಬುಕ್ಕಪಟ್ಟಣ, ಇಲ್ಲಿನ ಹಲಗೆ ವಾದನ ವಿಶಿಷ್ಟವಾದ ಕಲೆಯಾಗಿದೆ. ಸಂಗತ, ಅಸಂಗತಗಳಲ್ಲಿ ಧಾರ್ಮಿಕ, ಉತ್ಸವ ಮತ್ತು ಮೆರವಣ ಗೆಗಳಲ್ಲಿ ಪ್ರತ್ಯೇಕ ಲಯಗಳ ವಾದನ ಬಡಿಯುತ್ತಾರೆ. ಇಂಥಹಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕ್ರೀಡೆ ಮತ್ತು ಸಾಹಿತ್ಯದಲ್ಲಿ ಸುರಪುರ ಮುಂಚೂಣ ಯಲ್ಲಿದೆ. ಮಲ್ಲಯುದ್ಧ, ಕುಸ್ತಿ, ಬಿಲ್ವಿದ್ಯೆ ದೊಣ್ಣೆಯುದ್ಧ, ಭರ್ಚಿಯುದ್ಧ ಸೇರಿದಂತೆ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡಿದ್ದರು. ಅದರಂತೆ ತರಬೇತಿ ನೀಡುವ ಕೆಲಸವಾಗಬೇಕು ಎಂದರು.
ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಶಕುಂತಲಾ ಆಚಾರ್ಯ ಅವರು ಸ್ಥಳೀಯರಾಗಿದ್ದಾರೆ. ಸುರಪುರ ಸಂಸ್ಥಾನ ಕಲಾವಿದರಿಗೆ, ಸಾಹಿತಿಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸರಳತೆಯ ಸವಿನೆನಪು ಸವಿದಷ್ಟು ಸಿಹಿ ಕೃತಿಯು ಉತ್ತಮವಾಗಿದ್ದು, ಪರಾಂಕುಶ ಯತಿಗಳ ಬಗ್ಗೆ ಮತ್ತು ಮಠದ ಕುರುಹು ಬಗ್ಗೆ ಬೆಳಕು ಚೆಲ್ಲಿದ್ದಾರೆ. ಉತ್ತಮ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ ಎಂದರು.
ಪಿಎಸ್‌ಐ ಕೃಷ್ಣ ಸುಬೇದಾರ, ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿದರು. ಸಂಸ್ಥಾನದ ರಾಜಾ ಲಕ್ಷ್ಮೀ ನಾರಾಯಣ ನಾಯಕ ಪುಸ್ತಕ ಲೋಕರ್ಪಣೆಗೊಳಿಸಿದರು. ನಿರ್ಮಲಾ ರಾಜಗುರು ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಆಚಾರ್ಯರ, ಜಯಲಲಿತಾ ಪಾಟೀಲ್, ಬಸವರಾಜ ಜಮದ್ರಖಾನಿ, ಶ್ರೀಹರಿ ಅದೋನಿ, ಎ. ಕಮಲಾಕರ, ಶರಣಗೌಡ ಪಾಟೀಲ್, ಕನಕಪ್ಪ ವಾಗಣಗೇರಾ ಇತರರಿದ್ದರು.
ಸರಳತೆಯ ಸವಿನೆನಪು ಸವಿದಷ್ಟು ಸಿಹಿ ಪುಸ್ತಕ ಬಿಡುಗಡೆ
