ಕ್ರಾಂತಿವಾಣಿ ವಾರ್ತೆ ಸುರಪುರ: ಸರಕಾರದ ವಿವಿಧ ಸೌಲಭ್ಯಗಳು ನೈಜ ವಿಕಲಚೇತನರಿಗೆ ಸಿಗಬೇಕು ಮತ್ತು ವಿಕಲಚೇತನರಿಗೆ ಗೌರವಯುತ ಜೀವನ ನಿರ್ವಹಣೆ ಮಾಡಲು ಅನುಕೂಲ ಕೆಲಸ ಮಾಡಲಾಗುತ್ತದೆ ಎಂದು ತಾಪಂ ಇಒ ಬಸವರಾಜ ಸಜ್ಜನ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಜಿಪಂ ಯಾದಗಿರಿ, ತಾಪಂ ಸುರಪುರ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಯಾದಗಿರಿ ಸಹಯೋಗದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮೀಣ ಪುನಶ್ಚೇತನ ಕಾರ್ಯಕರ್ತರು ಹಾಗೂ ನಗರ ಪುನಃ ಶ್ಚೇತನ ಕಾರ್ಯಕರ್ತರಿಗೆ ಹಮ್ಮಿಕೊಂಡ ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗವಿಕಲರಿಗೆ ಸಹಾಯವಾಗುವಂತೆ ಶೇ.40ರಷ್ಟು ದೈಹಿಕ ದುರ್ಬಲತೆ ಹೊಂದಿದವರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್ ನೀಡಿ, ನೂರು ದಿನಗಳ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು, ಎಪಿಡಿ ಸಂಸ್ಥೆಯ ಸಿಬ್ಬಂದಿ ಹಾಗೂ ತಾಪಂ ಸಿಬ್ಬಂದಿ, ಇದ್ದರು.